ವಿಶೇಷ ಲೇಖನ – ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬದುಕಿಗೆ ‘ಸಂಜೀವಿನಿ’ ಯೋಜನೆಯ ಬೆಳಕು
ವಿಶೇಷ ಲೇಖನ –ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬದುಕಿಗೆ ‘ಸಂಜೀವಿನಿ’ ಯೋಜನೆಯ ಬೆಳಕು ಅಶ್ವಸೂರ್ಯ/ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲಾದ ಶಿವಮೊಗ್ಗದ ಸಂಸ್ಕೃತಿ, ಸಾಂಪ್ರದಾಯಗಳು ವಿಶೇಷವಾಗಿದ್ದು ಮಲೆನಾಡಿನ ಸಾಂಪ್ರದಾಯಿಕ ಕರಕುಶಲತೆಯಾದ ಮಣ್ಣಿನ ಅಲಂಕಾರಿಕ ವಸ್ತು ತಯಾರಿಕೆಗೆ ಜೀವ ನೀಡುವ ಮೂಲಕ ಮಹಿಳೆಯರ ಸ್ವಾವಲಂಬಿ ಬದಕನ್ನು ಕಟ್ಟಿಕೊಳ್ಳಲು ಸರ್ಕಾರದ ‘ಸಂಜೀವಿನಿ’ ಯೋಜನೆ ಗ್ರಾಮೀಣ ಮಹಿಳೆಯರ ಬದುಕಲ್ಲಿ ಹೊಸ ಬೆಳಕು ಮೂಡಿಸಿದೆ. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ 13 ಜನ ಮಹಿಳೆಯರು ಗುಂಪು ‘ಪ್ರಗತಿ’ ಸ್ವಸಹಾಯ ಸಂಘ ಮತ್ತು ಹೊಂಬೆಳಕು ಸಂಜೀವಿನಿ ಒಕ್ಕೂಟ ಸೇರಿ…