ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್, ಪ್ರಭಾರ ಜಿಲ್ಲಾಧಿಕಾರಿ
ಕನ್ನಡ ಪ್ರತಿಯೊಬ್ಬರ ಮನೆ-ಮನಗಳ ಉಸಿರಾಗಬೇಕು: ಹೇಮಂತ್ ಎನ್, ಪ್ರಭಾರ ಜಿಲ್ಲಾಧಿಕಾರಿ ಅಶ್ವಸೂರ್ಯ/ಶಿವಮೊಗ್ಗ : ನ.೦೧ ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿದಂತಾಗುವುದಿಲ್ಲ. ಕನ್ನಡ ಪ್ರತಿಯೊಬ್ಬರ ಮನ-ಮನೆಗಳ ಉಸಿರಾಗಬೇಕು ಎಂದುಜಿಲ್ಲಾಧಿಕಾರಿ(ಪ್ರಭಾರ)ಗಳಾದ ಹೇಮಂತ್ ಎನ್ ಆಶಿಸಿದರು.ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿಎಆರ್ ಮೈದಾನದಲ್ಲಿ ನ.೦೧ ರಂದು ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.ಇಂದು ನವೆಂಬರ್ 01, ಜಾತಿ-ಧರ್ಮದ ಬೇಧ-ಭಾವವಿಲ್ಲದೇ ಕನ್ನಡಿಗರೆಲ್ಲಾ ಒಂದೆಡೆ…