ವಾಜಪೇಯಿ ಲೇ ಔಟ್ ನಲ್ಲಿ ಈ ಹಿಂದೆ ಹಂಚಿಕೆಯಾಗಿದ್ದ 158 ನಿವೇಶನ ರದ್ದು

ವಾಜಪೇಯಿ ಲೇ ಔಟ್ ನಲ್ಲಿ ಈ ಹಿಂದೆ ಹಂಚಿಕೆಯಾಗಿದ್ದ 158 ನಿವೇಶನ ರದ್ದು

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ( ಸೂಡಾ ) ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ವಾಜಪೇಯಿ ಲೇ ಔಟ್ ನಲ್ಲಿ ಈ ಹಿಂದೆ ಹಂಚಿಕೆಯಾಗಿದ್ದ ಒಟ್ಟು 1163ನಿವೇಶನಗಳಲ್ಲಿ 152 ನಿವೇಶನ ಹಂಚಿಕೆಯನ್ನು ಎಡಿಸಿ ನೇತೃತ್ವದ ಸಮಿತಿ ರದ್ದು ಮಾಡಿ ಆದೇಶ ನೀಡಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಸೂಡ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಹೇಳಿದಂತೆ 2010-11 ರಲ್ಲಿ ವಾಜಪೇಯಿ ಲೇಔಟ್ ನಲ್ಲಿ 1163 ನಿವೇಶ ಹಂಚಿಕೆಯಾಗಿತ್ತು.ಅಂದಿನ ಸೂಡಾ ಅಧ್ಯಕ್ಷರಾಗಿದ್ದ ಜ್ಞಾನೇಶ್ ಅವರ ಅವಧಿಯಲ್ಲಿ ಈ ನಿವೇಶನಗಳು ಹಂಚಿಕೆಯಾದ ಸಮಯದಲ್ಲಿ ಈ ನಿವೇಶನಗಳ ಹಂಚಿಕೆಯಲ್ಲಿ ಕಾನೂನು ಉಲ್ಲಂಘನೆಯಾಗಿ ಸೂಡಾ ನಿಯಮದಂತೆ ಸೀನಿಯಾರಟಿ ಮೂಲಕ ಹಂಚಿಕೆಯಾಗಿಲ್ಲ.
ಅಧ್ಯಕ್ಷರ ವಿವೇಚನಾ‌ಕೋಟದಲ್ಲಿ 142 ನಿವೇಶನ ಹಂಚಿಕೆಯಾಗಿದ್ದು ನಿಯಮ ಉಲ್ಲಂಘನೆ  ಮಾಡಲಾಗಿದೆ  ಎಂಬ ಆರೋಪ ಕೇಳಿ ಬಂದಿತ್ತು. ಕುಟುಂಬಕ್ಕೆ ಒಂದುಸೈಟು ಎಂಬ ನಿಯಮವಿದ್ದರೂ ಉಲ್ಲಂಘಿಸಿ ಗಂಡ ಹೆಂಡತಿಗೆ ತಲಾ ಒಂದೊಂದು ನಿವೇಶನವನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆಮಾಡಿ ಹಂಚಲಾದ ನಿವೇಶನಗಳು ರದ್ದಾಗಿವೆ.

ಈಎಲ್ಲಾ ಪ್ರಕರಣಗಳಲ್ಲಿ ಆಗಿನ ಜಿಲ್ಲಾಧಿಕಾರಿಗಳು ಎಡಿಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ನೀಡಲು ನ್ಯಾಯಾಲಯ ಆದೇಶಿಸಿತ್ತು. ಅದರ ಪ್ರಕಾರ 142 ನಿವೇಶನಗಳು ಮತ್ತು  32 ಗಂಡ ಹೆಂಡತಿ ಪ್ರಕರಣದಲ್ಲಿ ಹಂಚಿಕೆಯಾದ 32 ನಿವೇಶನಗಲ್ಲಿ 16 ನಿವೇಶನಗಳ ಹಂಚಿಕೆ ರದ್ದಾಗಿದೆ.
ಲೋಕಾಯುಕ್ತದಲ್ಲಿ ರದ್ದಾದ ನಿವೇಶದಲ್ಲಿ 745 ರದ್ದಾಗಿತ್ತು.‌ಇದರ ವಿರುದ್ದ ನಿವೇಶನ ಹಂಚಿಕೆಯಾದವರಲ್ಲಿ 228 ಮಂದಿ ಕೋರ್ಟ್ ಮೆಟ್ಟಿಲೇರಿದ್ದರು ನಂತರ ಮತ್ತೆ 267 ಜನ ನ್ಯಾಯಾಲಯದ ಮೊರೆ ಹೋಗಿದ್ದರು.  ಅದರಲ್ಲಿ 250 ಮಂದಿ ನಿವೇಶನ ಪಡೆದವರು ನ್ಯಾಯಲಾಯಕ್ಕೆ ಹೋಗಿರುವುದಿಲ್ಲ. ಸಮಿತಿಯ ಮುಂದೆ ಹೋದ 347 ನಿವೇಶನಗಳ ಅರ್ಜಿಗಳಲ್ಲಿ 158 ನಿವೇಶನಗಳ ಹಂಚಿಕೆ ರದ್ದಾಗಿದ್ದು ಸೂಡ ಕಛೇರಿಯಲ್ಲಿ ಕರ್ತವ್ಯದಲ್ಲಿದ್ದು ನಿವೇಶ ಪಡೇದ 17 ನೌಕರರ ನಿವೇಶನಗಳು ರದ್ದಾಗಿದೆ ಎಂದರು ತಿಳಿಸಿದರು.

ನಿವೇಶನ ರದ್ದಾದವರು ಮತ್ತೆ ನ್ಯಾಯಾಲಯದ ಮೊರೆ ಹೋಗದಿದ್ದರೆ ಈ ನಿವೇಶನಗಳು ಮರು ಹಂಚಿಕೆಯಾಗಲಿದೆ. ಇಲ್ಲವಾದಲ್ಲಿ ಮರು ಹಂಚಿಕೆ ತಡವಾಗಲಿದೆ ಎಂದರು..

Leave a Reply

Your email address will not be published. Required fields are marked *

Optimized by Optimole
error: Content is protected !!