ಜಿಟಿಟಿಸಿ : ಉಚಿತ ಕೌಶಲ್ಯಾಭಿವೃದ್ದಿ ಕೋರ್ಸ್‍ಗೆ ಅರ್ಜಿ ಆಹ್ವಾನ
ಅಶ್ವಸೂರ್ಯ/ಶಿವಮೊಗ್ಗ ಜು.06 ಕೌಶಲ್ಯಾಭಿವೃದ್ದಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯವರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ಇಲ್ಲಿ ‘ಎಐಟಿಟಿ- ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ನಿರುದ್ಯೋಗ ಯುವಕ/ಯುವತಿಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದ್ಧಾರೆ.
ಐಟಿಐ ಆದವರಿಗೆ ಸಿಎನ್‍ಸಿ ಆಪರೇಟರ್-ವರ್ಟಿಕಲ್ ಮಷಿನ್ನಿಂಗ್ ಸೆಂಟರ್ 4 ತಿಂಗಳ ತರಬೇತಿ, ಡಿಪ್ಲೊಮ/ಬಿಇ ಆದವರಿಗೆ ಸಿಎನ್‍ಸಿ ಪ್ರೊಗ್ರಾಮರ್/ಪ್ರೊ-ಇ/ಆಟೋಕ್ಯಾಡ್ 4 ತಿಂಗಳ ತರಬೇತಿ, ಎಸ್‍ಎಸ್‍ಎಲ್‍ಸಿ ಆದವರಿಗೆ 4 ತಿಂಗಳ ಮಿಲ್ಲರ್/ಟರ್ನರ್ ಮತ್ತು 12 ತಿಂಗಳ ಅವಧಿಯ ಟೂಲ್ ರೂಂ ಮಷಿನಿಸ್ಟ್ ತರಬೇತಿಯನ್ನು ನೀಡಲಾಗುವುದು.
ತರಬೇತಿ ಅವಧಿಯಲ್ಲಿ ರೂ.2500 ಪ್ರತಿ ತಿಂಗಳು ಶಿಷ್ಯವೇತನ ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ವೈಯಕ್ತಿಕ ವಿವರಗಳೊಮದಿಗೆ ಜುಲೈ 27 ರೊಳಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ ಸಿಎ-38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ: 08182-246054, ಮೊ.ಸಂ 9448307027, 9449286543 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಚಾರ್ಯರು ತಿಳಿಸಿದ್ದಾರೆ.