ಮತ್ತೆ ಬಾಯ್ತೆರೆಯಿತು ಶಿವಮೊಗ್ಗ ಅಂಡರ್ ವರ್ಲ್ಡ್, ರಿವೆಂಜಿಗೆ ಬಿತ್ತು ಮೂರು ಹೆಣ.!!
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಒಂದಿಷ್ಟು ಕಟ್ಟಾರೋಪು, ಲಾಂಗು ಮಚ್ಚುಗಳ ಖಣ ಖಣ ಸದ್ದು ಜೊತೆಗೆ ಅಳಿದು ಹೋದ ರೌಡಿಗಳ ಶಿಷ್ಯರೆಂಬ ಕ್ರೆಡಿಟ್ಟು.ಜೇಬಿನಲ್ಲಿ ಒಂದಷ್ಟು ಗಾಂಜಾ ಇವಿಷ್ಟು ಇದ್ದರೆ ಸಾಕು ಅಂಡರ್‌ವರ್ಲ್ಡ್ ಎಂಬ ರಕ್ಕಸ
ಕೂಪವೊಂದು ಚಿದ್ವಿಲಾಸದಿಂದ ಮೆರೆದು ನಿಲ್ಲುತ್ತದೆ.ಅಷ್ಟು ಸುಲಭಕ್ಕೆ ತಣ್ಣಗಾಗುವ ಜಾಯಮಾನ
ಅದರದ್ದಲ್ಲವೇ ಅಲ್ಲ..!! ಅದೆಷ್ಟೋ ರೌಡಿಗಳು ಮತ್ತೆಷ್ಟೋ ರೌಡಿಗಳನ್ನು ಕತ್ತರಿಸಿ ಹಾಕಿ ಇವತ್ತು ಇನ್ಯಾವನೊ ರೌಡಿಯೊಬ್ಬನ ಲಾಂಗಿನೇಟಿಗೆ ಅನಾಮತ್ತು ಹೆಣವಾಗಿ ಹೋಗಿದ್ದಾರೆ.!
ಒಂದಷ್ಟು ಕಾಲ ಪಾತಕಲೋಕವನ್ನು ಆಳಿದವರು ಸರದಿ ರೂಪದಲ್ಲಿ ಸಾವಿನ ಮನೆ ಸೇರಿದ್ದಾರೆ ಸೇರುತ್ತಿದ್ದಾರೆ ಎಂದರೆ ನೀವು ನಂಬಲೆ ಬೇಕು.? ಇದು ನೆತ್ತರ ಲೋಕದ ನಿಯತ್ತು ಕೂಡ ಹೌದು.! ಬೂದಿ ಮುಚ್ಚಿದ ಕೆಂಡದಂತಿದ್ದ ಶಿವಮೊಗ್ಗದ ಅಂಡರ್ ವರ್ಲ್ಡ್ ಮೂರು ಹೆಣವನ್ನು ಕೆಡವಿಕೊಂಡು ಮತ್ತೊಮ್ಮೆ ರಕ್ಕಸ ನಗೆಯೊಂದಿಗೆ ಆಕ್ಟೀವ್ ಆಗಿದೆ..!!
ಎಂಕೆಕೆ ರಸ್ತೆಯ ಯಾಸಿನ್ ಖುರೇಷಿ ಎಂಬ ರೌಡಿಶೀಟರ್ ಅಂಡರ್‌ವರ್ಲ್ಡ್ ನಲ್ಲಿ ತನ್ನದೇ ಆದ ಛಾಪು
ಮೂಡಿಸಿದ್ದ.ಇವನ ವಿರೋಧಿ ಗ್ಯಾಂಗ್ ಎನ್ನುವಂತೆ ಬಿಂಬಿಸಿಕೊಂಡ KR ಪುರಂ ನಟೋರಿಯಸ್ ರೌಡಿ ಆದಿಲ್ ಇವರಿಬ್ಬರು ತಮ್ಮ ಏರಿಯಾದ ಡಾನ್‌ಪಟ್ಟದ ಅಧಿಪಥ್ಯಕ್ಕಾಗಿ ಸದ್ದಿಲ್ಲದೆ ಮಚ್ಚುಮಸಿಯುತ್ತಿದ್ದರು.ಇವರಿಬ್ಬರ ರಿವೆಂಜಿನ ನಂಜಿಗೆ ಒಂದೇ ಅಖಾಡದಲ್ಲಿ ಮೂವರು ರೌಡಿಗಳು ಹೆಣವಾಗಿ ಹೊಗಿದ್ದಾರೆ.!! ಶಿವಮೊಗ್ಗದ ಅಂಡರ್ ವರ್ಲ್ಡ್ ನೆತ್ತರ ಇತಿಹಾಸದಲ್ಲೆ ಎಂದು ನೆಡೆಯದ ಗ್ಯಾಂಗ್ ವಾರ್ ವರದಿ ಇದು.!
ಹತ್ಯೆಯಾದ ಯಾಸಿನ್ ಖುರೇಷಿ, ಗೌಸ್ ಮತ್ತು ಶೀಬು ಈ ಪ್ರಕರಣದ ರೂವಾರಿ ಆದಿಲ್
ಲಷ್ಕರ್ ಮೊಹಲ್ಲ.ಮಿನು ಮಾರ್ಕೆಟ್,ಕೆಆರ್ ಪುರಂ,ಎಂಕೆಕೆ ರೋಡ್,ಓಟಿ ರೋಡ್,ಚೋರ್ ಬಜಾರ್ ,
ಅಂಗ್ಲೆನ್ ಕೆರೆ,ಟಿಪ್ಪು ನಗರ,ಮಿಳಘಟ್ಟ,ಅಣ್ಣನಗರ,ಮದರಿ ಪಾಳ್ಯ,ಮಂಡ್ಲಿ,ಬೈಪಾಸ್ ರಸ್ತೆ,ಆರ್ ಎಂಎಲ್ ನಗರ ಮತ್ತು ಜೆಪಿ ನಗರ,ಹೊಸಮನೆ,ಜಟ್ ಪಟ್ ನಗರ,ವಿನೋಬಾ ನಗರ,ವೆಂಕಟೇಶ್ ನಗರ, ಬೊಮ್ಮನಕಟ್ಟೆ,ಜೈಲ್ ರಸ್ತೆ ಗಾಂಧಿ ಬಜಾರ್ ಇನ್ನೂ ಮುಂತಾದ ಏರಿಯಾಗಳಲ್ಲಿ ಕೊಲೆ ಕೊಲೆ
ಯತ್ನ,ಸುಲಿಗೆ,ದಗಾ,ವಂಚನೆ,ಗಾಂಜಾ ದಂಧೆ ಇನ್ನೂ ಹಲವಾರು ರೀತಿಯ ಮಾಫಿಯಾದಿಂದ ನಲುಗಿ ಹೋಗಿದೆ ಮಲೆನಾಡ ತವರು ನಗರಿ ಶಿವಮೊಗ್ಗ.! ಅದೆಷ್ಟೋ ದಂಧೆಗಳು ಈಗಲೂ ಅಂದರ್ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಈ ಏರಿಯಾಗಳಲ್ಲಿ ಬದುಕುತ್ತಿರುವ ಅಮಾಯಕ ಮಂದಿಯ ಬದುಕು ನೆಮ್ಮದಿ ಕಳೆದುಕೊಂಡಿದೆ.
ಶಿವಮೊಗ್ಗ ನಗರದ ಈ ಏರಿಯಾಗಳಲ್ಲಿ ಅಕ್ರಮ ದಂಧೆ ಜೋರಾಗುತ್ತಿದ್ದಂತೆ ಶಾಪವಾಗಿ ಹಲವಾರು ರೌಡಿಗಳು ಹುಟ್ಟಿಕೊಂಡರು. ಕೊತ್ವಾಲ್ ರಾಮಚಂದ್ರನಿಂದ ಆರಂಭಗೊಂಡು ಇಂದು ಸಾವಿನ ಮನೆ ಸೇರಿದ ಯಾಸೀನ್, ಗೌಸ್ ಮತ್ತು ಶೋಯೆಬ್ ನ ವರೆಗೂ ಡಾನ್ ಪಟ್ಟಕ್ಕಾಗಿ ಭೂಗತಲೋಕ ಬೆಳೆಯುತ್ತಾ ಹೊಯಿತು.!
ಇಲ್ಲಿ ಡಾನ್ ಪಟ್ಟಕ್ಕಾಗಿ ನೆತ್ತರ ಕಲೆ ಅಂಟಿಸಿಕೊಂಡವರಲ್ಲಿ ಕೇಲವರು ನೇಪಥ್ಯಕ್ಕೆ ಸರಿದರೆ ಇನ್ನೂ ಕೇಲವರು ಸುಡುಗಾಡು ಸೇರಿದ್ದಾರೆ ಅದರೂ ಈ ಮಣ್ಣಿನಲ್ಲಿ ರಿವೆಂಜಿನ ನಂಜು ನೆತ್ತರಿಗಾಗಿ ಹಪಾಹಪಿಸುತ್ತಿದೆ.!!
ಇದೆ ರಿವೆಂಜಿನ ನಂಜಿಗೆ ಲಾಂಗ್ ಹಿಡಿದು ಹೊರಟ ಆದಿಲ್ ಗ್ಯಾಂಗಿನ ಹುಡುಗರು ಲಷ್ಕರ್ ಮೊಹಲ್ಲದಲ್ಲಿರುವ ಜನಾತ ಮಟನ್ ಸ್ಟಾಲ್ ಮಾಲೀಕ ರೌಡಿ ಶೀಟರ್ ಯಾಸಿನ್ ಖುರೇಷಿಯ ತಲೆ ಉರುಳಿಸಲು ಸಜ್ಜಾಗಿದ್ದಾರೆ ಕಳೆದ ಬುಧವಾರ ಸಂಜೆ ಆರು ಮೂವತ್ತರ ಅಜುಬಾಜಿಗೆ ಯಾಸಿನ್ ನ ಜನತಾ ಮಟನ್ ಸ್ಟಾಲ್ ಬಳಿಗೆ ಬಂದ ಹಂತಕರ ಗ್ಯಾಂಗ್ ಏಕಾಏಕಿ ಆತನ ಮೇಲೆ ಹತಾರಗಳಿಂದ ಅಟ್ಯಾಕ್ ಮಾಡಿದ್ದಾರೆ ಇನ್ನೇನು ಅಟ್ಯಾಕ್ ಮಾಡಿ ಹಂತಕರು ಎಸ್ಕೇಪ್ ಆಗಲು ಅಣಿಯಾಗುತ್ತಿದ್ದಂತೆ ಅಲ್ಲೆ ಸುತ್ತ ಮುತ್ತ ಇದ್ದ ಯಾಸಿನ್ ಹುಡುಗರು ತಕ್ಷಣವೇ ಹಂತಕರ ಮೇಲೆ ತಿರುಗಿಬಿದ್ದಿದ್ದಾರೆ ಸಿಕ್ಕ ಸಿಕ್ಕ ವಸ್ತುಗಳಿಂದ ಅಟ್ಯಾಕ್ ಮಾಡಿದ ಯಾಸಿನ್ ಸಹಚರರು ಯಾಸೀನ್ ಹತ್ಯೆಮಾಡಲು ಬಂದಿದ್ದ ಇಬ್ಬರನ್ನೂ ಅಲ್ಲೆ ಕೆಡವಿ ಕೊಂದಿದ್ದಾರೆ..!! ಹತ್ಯೆ ಮಾಡಲು ಬಂದ ಹಂತಕರೆ ಹೆಣವಾಗಿ ಹೋಗಿದ್ದಾರೆ.! ಅಲ್ಲೆ ರಕ್ತದ ಮಡುವಿನಲ್ಲಿ ಬಿದ್ದು ಗಟುಕು ಜೀವ ಹಿಡಿದು ಒದ್ದಾಡುತ್ತಿದ್ದ ಯಾಸೀನ್ ನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೆ ಎದರಾಳಿ ಗ್ಯಾಂಗ್ ನ ಗೌಸ್ ಮತ್ತು ಶೋಯೆಬ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.! ಒಂದಷ್ಟು ಗಂಟೆ ಆಸ್ಪತ್ರೆಯ ಹಾಸಿಗೆಯ ಮೇಲೆ ಗುಟುಕು ಜೀವ ಹಿಡಿದು ಬದುಕಿಗಾಗಿ ಹೋರಾಡುತ್ತಿದ್ದ ಯಾಸಿನ್ ಕೂಡ ಗುರುವಾರ ಉಸಿರು ಚೆಲ್ಲಿದ್ದಾನೆ.
ಹತ್ಯೆಯಾದ ಯಾಸಿನ್ ಖುರೇಷಿ
ಹಫ್ತಾ ವಸೂಲಿ, ಅಕ್ರಮ ದಂಧೆ, ಸಣ್ಣಪುಟ್ಟ ಕಿರಿಕ್ ನಿಂದ ಯಾಸಿನ್ ಮತ್ತು ಆದಿಲ್ ನಡುವಿನ ವೈರತ್ವದ ನಂಜು ಇಂದು ಮೂವರನ್ನು ಹೆಣವಾಗಿಸಿದೆ.! ಶಿವಮೊಗ್ಗ ಅಂಡರ್ ವರ್ಲ್ಡ್ ನಲ್ಲಿ ರೌಡಿಗಳಿಂದ ರೌಡಿಗಳೆ ಹತರಾಗುತ್ತಿರುವು ಸಹಜವಾದರು ಜನರ ನೆಮ್ಮದಿಯನ್ನು ಹಾಳುಗೇಡವಿದೆ.
ಈ ಪ್ರಕರಣವನ್ನು ದಾಖಲಿಸಿಕೊಂಡು ಸೂಕ್ಷ್ಮವಾಗಿ ತನಿಖೆ ಕೈಗೊಂಡ ಕೋಟೆ ಪೋಲಿಸರ ತಂಡ ದಕ್ಷ ರಕ್ಷಣಾ ಅಧಿಕಾರಿ ಮಿಥುನ್ ಕುಮಾರ್ ಐಪಿಎಸ್ ಇವರ ಮಾರ್ಗದರ್ಶನದಲ್ಲಿ 302 ಪ್ರಕರಣದಲ್ಲಿ 10 ಜನರನ್ನು ಮತ್ತು 307 ಪ್ರಕರಣದಲ್ಲಿ 8 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ಪೋಲಿಸರ ತನಿಖೆಯ ನಂತರವಷ್ಟೇ ಹೊರ ಬರಬೇಕಿದೆ
ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ
ಶಿವಮೊಗ್ಗದ ಭೂಗತಲೋಕದಲ್ಲಿ ಮತ್ತೆ ಮಚ್ಚುಗಳ ಖಣಖಣ ರಣರಣಿಸತೋಡಗಿದೆ.
ಶಿವಮೊಗ್ಗದ ಭೂಗತಲೋಕದಲ್ಲಿ ಮತ್ತೆ ಮಚ್ಚುಗಳ ಖಣಖಣ ರಣರಣಿಸತೋಡಗಿದೆ. ಕೋಟೆ ಪೋಲಿಸರ ಕಣ್ಣ ಪಹರೆಯಲ್ಲಿಯೇ ರೌಡಿ ಶೀಟರ್ ಆದಿಲ್ ಹಿಂಡುಗಟ್ಟಲೆ ಹುಡುಗರೊಂದಿಗೆ ಫೀಲ್ಡಿಗಿಳಿದಿದ್ದಾನೇ..!?ಶಿವಮೊಗ್ಗದ ಅಂಡರ್ ವರ್ಲ್ಡ್ ರಕ್ತರಂಜಿತವಾಗುತ್ತಿದೆ ಎಂಬುವುದಕ್ಕೆ ಸಾಕ್ಷಿಯಾಗಿ ರಿವೆಂಜಿಗೆ ಮತ್ತೊಬ್ಬ ನಟೋರಿಯಸ್ ರೌಡಿ ಯಾಸಿನ್ ಖುರೇಷಿಯ ಹೆಣ ಬಿದ್ದಿದೆ.ಯಾಸೀನ್ ಹತ್ಯೆಗೆ ಬಂದ ಇಬ್ಬರನ್ನೂ ಯಾಸಿನ್ ಸಹಚರರು ಕತ್ತರಿಸಿ ಹಾಕಿದ್ದಾರೆ ಗ್ಯಾಂಗ್ ವಾರ್ ಒಂದರಲ್ಲಿ ಮೂವರ ಹೆಣಬಿದ್ದು ತುಂಗೆಯ ಒಡಲು ನೆತ್ತರ ಕೊಡಿ ಹರಿದು ಹೆಪ್ಪುಗಟ್ಟಿದೆ.!
ಶಿವಮೊಗ್ಗ ನಗರದಲ್ಲಿ ಗಾಂಜಾಮಾರಿ ಮನೆ ಹೊಕ್ಕಿ ಕುಳಿತಿದೆ.! ಗಾಂಜಾ ನಶೆಯಲ್ಲಿ ನಿತ್ಯ ಸಾಕಷ್ಟು ಕ್ರೈಮ್ ಸದ್ದಿಲ್ಲದೆ ನೆಡೆಯುತ್ತಿದೆ.! ಗಾಂಧಿ ಬಜಾರ್, ಲಶ್ಕರ್ ಮೊಹಲ್ಲ ಮತ್ತು ಕೆಅರ್ ಪುರಂ ಶಹರದಲ್ಲಿ ಪುಡಿ ರೌಡಿಗಳ ಹಾವಳಿ ಮಿತಿಮೀರಿದೆ. ಪೋಲಿಸ್ ಇಲಾಖೆ ಅಲರ್ಟ್ ಆಗದೆ ಹೋದರೆ ಈಗಾಗಲೇ ರಿವೆಂಜಿನಾ ನೆತ್ತರಿಗಾಗಿ ಹಪಾಹಪಿಸುತ್ತಿರುವ ರೌಡಿಗಳು ಒಂದೆರಡು ಹತ್ಯೆಗೆ ಮುಂದಾಗಬಹುದು.? ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕಿದೆ.
ಹಂದಿ ಅಣ್ಣಿ ಸಹೋದರ ಗಿರಿ ಹತ್ಯೆಯ ಆರೋಪಿಯಾಗಿದ್ದ ಶೋಯೆಬ್.!
ಶೋಯೆಬ್ ಅಲಿಯಾಸ್ ಶೀಬು ಈ ಹಿಂದೆ ಹತ್ಯೆಯಾದ ಹಂದಿ ಅಣ್ಣಿಯ ಸಹೋದರ ಗಿರಿ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾಗಿದ್ದ.ನೀರ್ಜನ ಪ್ರದೇಶದಲ್ಲಿ ಪುಡಿ ರೌಡಿಗಳೆಲ್ಲ ಒಂದೇಡೆ ಸೇರಿಕೊಂಡು ಹಣ ಪಣಕ್ಕಿಟ್ಟು ತುರೊಬಿಲ್ಲೆ ಆಡುವುದರಲ್ಲಿ ನಿರತರಾಗಿದ್ದರು ಈ ಸಂಧರ್ಭದಲ್ಲಿ ಹಣದ ವಿಷಯವಾಗಿ ಗಲಾಟೆಯಾಗಿ ಹಂದಿ ಅಣ್ಣಿಯ ಸಹೋದರನನ್ನು ಶೋಯೆಬ್ ಮತ್ತು ನಾಲ್ಕೈದು ಯುವಕರ ಗ್ಯಾಂಗ್ ನಡು ರಸ್ತೆಯಲ್ಲೆ ಕೊಚ್ಚಿ ಕೊಲೆಮಾಡಿದ್ದರು