ಶಿವಮೊಗ್ಗದ ಲಶ್ಕರ್ ಮೊಹಲ್ಲದಲ್ಲಿ ಡಬಲ್ ಮರ್ಡರ್. ಹತ್ಯೆಮಾಡಲು ಬಂದವರೆ ಹೆಣವಾಗಿ ಹೊದ್ರಾ.!?
ASHWASURYA/SHIVAMOGGA
SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ: ಚುನಾವಣೆಯ ಬಿಸಿ ತಣ್ಣಗಾಗುತ್ತಿದ್ದಂತೆ ಶಿವಮೊಗ್ಗದ ಮುಸಲ ಪಾತಕ ಲೋಕ ಗರಿಬಿಚ್ಚಿ ಕುಳಿತಿದೆ. ಇಂದು ಶಿವಮೊಗ್ಗದ ಜನನಿಬಿಡ ರಸ್ತೆಯಲ್ಲಿ ರೌಡಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯಾದರೆ ಹತ್ಯೆಮಾಡಲು ಬಂದ ಗ್ಯಾಂಗಿನ ಇಬ್ಬರು ನಡು ರಸ್ತೆಯಲ್ಲೆ ಹೆಣವಾಗಿ ಹೋಗಿದ್ದಾರೆ.! ಇಬ್ಬರ ಹತ್ಯೆಯಾದ ಸ್ಥಳವನ್ನು ನೋಡಿದರೆ ಇದೊಂದು ಡೆಂಜರಸ್ ಅಟ್ಯಾಕ್ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.!?
ಹತ್ಯೆಮಾಡಲು ಬಂದ ಹಂತಕರ ಗ್ಯಾಂಗಿನ ಇಬ್ಬರು ಹೆಣವಾಗಿ ಹೊದ್ರಾ.!?
ಹಂತಕರು ಯಾವ ಮಟ್ಟಕ್ಕೆ ರಿವೆಂಜ್ ತಿರಿಸಿಕೊಂಡಿದ್ದಾರೆ ಎಂದರೆ ಇಬ್ಬರ ಮೇಲೆ ಆಟ್ಯಾಕ್ ಮಾಡಿದ ನಂತರ ದಲ್ಲಿ ನೆಲಕ್ಕೂರುಳಿದ ಇಬ್ಬರ ಮೇಲು ಕಲ್ಲು ಚಪ್ಪಡಿ ಎತ್ತಿಹಾಕಿದ್ದಾರೆ.!!
ರಿವೆಂಜ್ ತೀರಿಸಿಕೊಳ್ಳಲು ಬಂದವರೆ ಹೆಣವಾಗಿ ಹೋಗಿದ್ದಾರೆ
ಹಳೆಯ ವೈಷಮ್ಯದ ಹಿನ್ನಲೆ ಏನು?
ಎಂಕೆಕೆ ರೋಡಿ ರೌಡಿ ಯಾಸಿನ್ ಖುರೆಸಿ ಮತ್ತು ಕೆಆರ್ ಪುರಂನ ರೌಡಿ ಅದಿಲ್ ಇಬ್ಬರ ನಡುವಿನ ಹಳೆ ವೈಷಮ್ಯದ ಹಿನ್ನಲೆಯಲ್ಲಿ ಇಂದು ಯಾಸಿನ್ ಖುರೆಸಿಯಾ ಮೇಲೆ ಅಟ್ಯಾಕ್ ಮಾಡಲು ಹೊಂಚು ಹಾಕಿ ಕುಳಿತಿದ್ದ ಹಂತಕರು ಲಶ್ಕರ್ ಮೊಹಲ್ಲಕೆ ಬಂದಿದ್ದಾರೆ ಅಲ್ಲಿಗೆ ಬಂದ ಯಾಸಿನ್ ಮೇಲೆ ಹಂತಕರು ಅಟ್ಯಾಕ್ ಮಾಡಲು ಮುಂದಾಗಿದ್ದಾರೆ ಅಷ್ಟೋತ್ತಿಗಾಗಲೆ ಅಲ್ಲೆ ಇದ್ದ ಯಾಸಿನ್ ಸಹಚರರು ಎದುರಾಳಿಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ ಈ ಅಟ್ಯಾಕ್ ನಲ್ಲಿ ಹತ್ಯೆಗೆ ಬಂದ ಹಂತಕರೆ ಹೆಣವಾಗಿ ಹೋಗಿದ್ದಾರೆ.
ಈ ಸಂಧರ್ಭದಲ್ಲಿ ಯಾಸಿನ್ ಕುರೆಸಿ ಮೇಲು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಆದಿಲ್ ಗ್ಯಾಂಗಿನ ಇಬ್ಬರು ಜೋತಿ ನಗರದ ಶೇಬು ಮತ್ತೊಬ್ಬ ಗೌಸ್ ಎನ್ನುವ ಯುವಕ ಎಂದು ತಿಳಿದು ಬಂದಿದೆ.? ಇನ್ನಷ್ಟೇ ಸ್ಪಷ್ಟ ಮಾಹಿತಿ ತಿಳಿಯ ಬೇಕಿದೆ
ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲಿಸಿ ಹಂತಕರ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ…