ಖತರ್ನಾಕ್ ತಂಗಿಯಿಂದ ಅಕ್ಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನ.!!

ಖತರ್ನಾಕ್ ತಂಗಿಯಿಂದ ಅಕ್ಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನ.!!

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಬೆಂಗಳೂರು : ಮೇ 7ರಂದು ಅಕ್ಕನ ಮನೆಯಲ್ಲೇ ನಕಲಿ ಬೀಗದ ಕೀ ಬಳಸಿ 65 ಲಕ್ಷ ರೂ. ಬೆಲೆ ಬಾಳುವ ಚಿನ್ನದ ನಾಣ್ಯಗಳು ಮತ್ತು 52 ಲಕ್ಷ ನಗದು ಹಣವನ್ನು ಕಳವು ಮಾಡಿದ್ದ ಖತರ್ನಾಕ್ ತಂಗಿಯನ್ನು ಕೆಂಗೇರಿ ಠಾಣೆ ಪೊಲೀಸರು ಖೆಡ್ಡಕ್ಕೆ ಕೆಡವಿಕೊಂಡಿದ್ದಾರೆ. ಲಗ್ಗೆರೆಯ ನಿವಾಸಿ ಉಮಾ (29) ಬಂಧಿತ ಸಹೋದರಿ.
ಈಕೆಯ ಮನೆಯಲ್ಲಿದ್ದ 5 ಲಕ್ಷ ನಗದು ಹಣ ಮತ್ತು 30 ಚಿನ್ನದ ನಾಣ್ಯಗಳನ್ನು ಹಾಗೂ ಆಕೆ ಕೆಲಸ ಮಾಡುವ ಆಟೋ ಕನ್ಸೆಲ್‌ಟೆಂಟ್‌ ಮಾಲೀಕರಿಗೆ ನೀಡಿದ್ದ 16 ಚಿನ್ನದ ನಾಣ್ಯಗಳನ್ನು ಮತ್ತು 46.90 ಲಕ್ಷ ರೂ ನಗದನ್ನು ಮಾಲೀಕರಿಂದ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ 46 ಚಿನ್ನದ ನಾಣ್ಯಗಳು ಹಾಗೂ 51.90 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ನಾಗದೇವನಹಳ್ಳಿಯ ಆರ್‌.ಆರ್‌ ಲೇಔಟ್‌ನಲ್ಲಿ ವಾಸವಾಗಿರುವ ಈಕೆಯ ಅಕ್ಕ ಬಾವ ಹಾರ್ಡ್ ವೇರ್ ಆಂಗಡಿ ತೆರದು ವ್ಯಾಪಾರ ಮಾಡಿಕೊಂಡಿರುತ್ತಾರೆ. ಇವರೊಂದಿಗೆ ಅವರ ಸಂಬಂಧಿಕರೊಬ್ಬರು ಈ ವ್ಯಾಪಾರದಲ್ಲಿ ಪಾಲುದಾರರಾಗಿರುತ್ತಾರೆ. ಏ.22 ರಂದು ಬೆಳಗ್ಗೆ ಇವರು ಕುಟುಂಬ ಸಮೇತರಾಗಿ ಅವರ ಸ್ವಂತ ಊರಿನಲ್ಲಿ ನಡೆಯುವ ಶ್ರೀ ಚೌಡೇಶ್ವರಿ ದೇವರ ಹಬ್ಬದ ಪ್ರಯುಕ್ತ ಊರಿಗೆ ಹೋಗಿದ್ದರು.

ಊರಿಗೆ ಹೋಗುವ ಮುನ್ನಾ ಅವರ ಸಂಬಂಧಿಗೆ ಮನೆಯ ಕೀಯನ್ನು ಕೊಟ್ಟು ರಾತ್ರಿ ಮಲಗಲು ತಿಳಿಸಿದ್ದರು. ಏ.24ರಂದು ರಾತ್ರಿ ಸುಮಾರು 10.30ರ ಸಮಯದಲ್ಲಿ ಇವರ ಮನೆಯಲ್ಲಿ ಮಲಗಿಕೊಳ್ಳಲು ಅವರ ಸಂಬಂಧಿಯು ಹೋದಾಗ ಮನೆಯಲ್ಲಿ ಬಿರುವಿನ ಬಾಗಿಲುಗಳು ತೆರೆದಿರುವುದು ಹಾಗೂ ಕೊಠಡಿಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಅನುಮಾನಗೊಂಡು ಕೂಡಲೆ ಫೋನ್‌ ಮಾಡಿ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಊರಿನಿಂದ ವಾಪಸ್‌‍ ಬಂದು ನೋಡಿದಾಗ ಮನೆಯಲ್ಲಿದ್ದ ಹಣ ಮತ್ತು ಚಿನ್ನದ ನಾಣ್ಯಗಳು ಸೇರಿ ಒಟ್ಟು 65 ಲಕ್ಷ ಮೌಲ್ಯದ ವಸ್ತುಗಳು ಕಳುವಾಗಿರುವುದು ಕಂಡುಬಂದ ಹಿನ್ನಲೆಯಲ್ಲಿ ತಕ್ಷಣವೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಕೆಂಗೇರಿ ಪೊಲೀಸರ ತಂಡ ತಡಮಾಡದೆ ಕಾರ್ಯಚರಣೆಗೆ ಇಳಿದು ತನಿಖೆ ಕೈಗೊಂಡಿದ್ದಾರೆ. ಈ ಕಳ್ಳತನ ಗೊತ್ತಿರುವರೆ ಮಾಡಿರಲು ಸಾಧ್ಯ ಎಂದು ಅರಿತ ತನಿಖಾ ತಂಡ ಮನೆ ಮಾಲಿಕರ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿದಾಗ ಮನೆ ಮಾಲೀಕರ ಪತ್ನಿಯ ತಂಗಿಯೇ ಕಳ್ಳತನ ಮಾಡಿರುವುದು ಬೆಳಕಿಗೆ ಬರುತ್ತದೆ. ಮನೆ ಯಜಮಾನಿಯ ಸಹೋದರಿ ಉಮಾಳನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತನ್ನಲ್ಲಿದ್ದ ನಕಲಿ ಕೀ ಬಳಸಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನದ ನಾಣ್ಯಗಳು ಹಾಗೂ ಮಂಚದ ಕೆಳಗೆ ಇಟ್ಟಿದ್ದ 52 ಲಕ್ಷ ನಗದು ಹಣವನ್ನು ಕಳುವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.ಈಕೆಯ ಮಾಹಿತಿ ಮೇರೆಗೆ ಹಣ ಹಾಗೂ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!