ಕರ್ನಾಟಕ ಲೋಕಸಭಾ ಚುನಾವಣೆ ; ಹಂತಗಳು, ಕ್ಷೇತ್ರಗಳು, ಮತದಾನದ ದಿನಾಂಕದ ಮಾಹಿತಿ
ASHWASURYA/SHIVAMOGGA
✍️ ಸುಧೀರ್ ವಿಧಾತ
ನವದೆಹಲಿ : ಕಳೆದ ವಿಧಾನಸಭಾ ಚುನಾವಣೆಗೆ ಒಂದು ವರ್ಷದ ಹಿಂದೆ ಮತದಾನ ಮಾಡಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದ ಕರ್ನಾಟಕ ರಾಜ್ಯದ ಜನತೆ ಮತ್ತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಸಜ್ಜಾಗಬೇಕಿದೆ.
ಹೊಸದಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದರು. ದೇಶದಲ್ಲಿ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಬಲಪಂಥೀಯ ರಾಜಕೀಯದ ಬಲವಾದ ಉಪಸ್ಥಿತಿಯನ್ನು ಹೊಂದಿರುವ ದಕ್ಷಿಣ ಭಾರತದ ಏಕೈಕ ರಾಜ್ಯವಾದ ಕರ್ನಾಟಕವು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.ಈ ಇಪ್ಪತ್ತೆಂಟು ಕ್ಷೇತ್ರಗಳಿಗೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ರಾಜ್ಯದ ಮತದಾರರು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಮತಹಾಕಲು ಸಜ್ಜಾಗಬೇಕಿದೆ.
ಕರ್ನಾಟಕ ಲೋಕಸಭಾ ಚುನಾವಣೆ ದಿನಾಂಕ:
ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ.ಲೋಕಸಭಾ ಚುನಾವಣೆಯ ಎಲ್ಲಾ 543 ಕ್ಷೇತ್ರಗಳ ಮತ ಎಣಿಕೆ ಜೂನ್ 4 ರಂದು ನಡೆಯಲಿದ್ದು, ಜೂನ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ, 28 ಸ್ಥಾನಗಳಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯತೀತ) ತಲಾ ಒಂದೊಂದು ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಬಿಜೆಪಿ ಬೆಂಬಲಿತ ಒಬ್ಬ ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನವನ್ನು ಗೆದ್ದು ಬಿಗಿದ್ದರು.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪಟ್ಟಿ
- ಬಾಗಲಕೋಟೆ
- ಬೆಂಗಳೂರು ಸೆಂಟ್ರಲ್
- ಬೆಂಗಳೂರು ಉತ್ತರ
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ದಕ್ಷಿಣ
- ಬೆಳಗಾವಿ
- ಬಳ್ಳಾರಿ
- ಬೀದರ್
- ಬಿಜಾಪುರ
- ಚಾಮರಾಜನಗರ
- ಚಿಕ್ಕಬಳ್ಳಾಪುರ
- ಚಿಕ್ಕೋಡಿ
- ಚಿತ್ರದುರ್ಗ
- ದಕ್ಷಿಣ ಕನ್ನಡ
- ದಾವಣಗೆರೆ
- ಧಾರವಾಡ
- ಗುಲ್ಬರ್ಗಾ
- ಹಾಸನ
- ಹಾವೇರಿ
- ಕೋಲಾರ
- ಕೊಪ್ಪಳ
- ಮಂಡ್ಯ
- ಮೈಸೂರು
- ರಾಯಚೂರು
- ಶಿವಮೊಗ್ಗ
- ತುಮಕೂರು
- ಉಡುಪಿ, ಚಿಕ್ಕಮಗಳೂರು
- ಉತ್ತರ ಕನ್ನಡ