ಅಭ್ಯರ್ಥಿ ಆಯ್ಕೆ ಮಾಡಿದ್ದು ನಾವಲ್ಲ ಹೈಕಮಾಂಡ್: ಈಶ್ವರಪ್ಪ ಪಕ್ಷದ ನಿರ್ಧಾರ ಗೌರವಿಸಲಿ- ಬಿ ವೈ ವಿಜಯೇಂದ್ರ.
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ /ಶಿವಮೊಗ್ಗ
ಕಲ್ಬುರ್ಗಿ: ಮಾರ್ಚ್ 16: ಪುತ್ರ ಕಾಂತೇಶ್ ಗೆ ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಕೆ.ಎಸ್ ಈಶ್ವರಪ್ಪ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಬಿ ವೈ ವಿಜಯೇಂದ್ರ, ಬಸವರಾಜ್ ಬೊಮ್ಮಾಯಿಯನ್ನು ಹಾವೇರಿ ಅಭ್ಯರ್ಥಿ ಮಾಡಿದ್ದು ನಾವಲ್ಲ. ಹಾವೇರಿ ಅಲ್ಲದೆ 28 ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಹೈಕಮಾಂಡ್. ಈಶ್ವರಪ್ಪ ಪಕ್ಷದ ನಿರ್ಧಾರ ಗೌರವಿಸಬೇಕು. ಕೇಂದ್ರ ನಾಯಕರು ಬೊಮ್ಮಾಯಿಗೆ ಟಿಕೆಟ್ ನೀಡಿದ್ದಾರೆ ಎಂದರು.
ಕೆಎಸ್ ಈಶ್ವರಪ್ಪ ಬಂಡಾಯವೆದ್ದಿರುವ ಕುರಿತು ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೆ.ಎಸ್ ಈಶ್ವರಪ್ಪಗೆ ನೋವಾಗಿದೆ ನಿಜ. ಸಮಾಧಾನ ಮಾಡುತ್ತೇವೆ. ಕಳೆದ ಬಾರಿ ಟಿಕೆಟ್ ತಪ್ಪಿದೆ ಹೀಗಾಗಿ ನೋವಿನಿಂದ ಮಾತನಾಡಿದ್ದಾರೆ. ಅವರಿಗೆ ಸರಿಯಾದ ಗೌರವ ಸಿಗಬೇಕು. ಅನ್ನೋದರಲ್ಲಿ ತಪ್ಪಿಲ್ಲ ಬಿಎಸ್ ಯಡಿಯೂರಪ್ಪ , ಈಶ್ವರಪ್ಪ ಮಧ್ಯೆ ಇರೋದು ವೈಯಕ್ತಿಕ ವಿಚಾರ. ಅದರ ಬಗ್ಗೆ ಮಾತನಾಡಲ್ಲ. ಕಾಂತೇಶ್ ಸ್ಥಾನದ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.