ಎಪಿಎಂಸಿಯ ಎರಡು ತಿಮಿಂಗಿಲಗಳು ಲೋಕಾಯುಕ್ತ ಭಲೇಗೆ : ಇನ್ನೂಳಿದ ಎಪಿಎಂಸಿಯ ಲಂಚಬಾಕರಿಗೆ ನಡುಕ ಶುರುವಾಗಿದೆ.
ರವೀಂದ್ರ ವೀರಭದ್ರಪ್ಪ ನೇರಳೆ, ನಾಗರತ್ನ ಟ್ರೇಡರ್ಸ್ ಮಾಲೀಕರು, ಭದ್ರ ನಿಲಯ, ಎಂ.ಐ.ಜಿ.-31, 2ನೇ ಹಂತ, ಕೆ.ಹೆಚ್.ಬಿ. ಕಾಲೋನಿ, ಗೋಪಾಳ, ಶಿವಮೊಗ್ಗ ಇವರು, 2017-18ನೇ ಸಾಲಿನಲ್ಲಿ ಸದರಿ ತರಕಾರಿ ಮಾರುಕಟ್ಟೆಯ ಪ್ರಾಂಗಣದಲ್ಲಿರುವ 16ನೇ ಸಂಖ್ಯೆಯ ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ಲೀವ್ ಅಂಡ್ ಲೈಸೆನ್ಸ್ ಶುಲ್ಕದ ಆಧಾರದಲ್ಲಿ ಹಂಚಿಕೆ ಮಾಡುವ ಸಂಬಂಧ ಕರೆದಿದ್ದ ಟೆಂಡರ್‌ಗೆ ಅರ್ಜಿಯನ್ನು ಸಲ್ಲಿಸಿದ್ದು, ದಿನಾಂಕ: 29-01- 2020ರಂದು ಘನ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿ.ಪಿ.ಸಂ: 57838-43/2018ರ ತೀರ್ಪಿನಂತೆ 55 ತಿಂಗಳ ಅವಧಿಗೆ ಮಳೆಗೆ ಸಂಖ್ಯೆ 16ನ್ನು ಫಿರ್ಯಾದುದಾರರಿಗೆ ಹಂಚಿಕೆ ಮಾಡಿದ್ದು, ಅದರಲ್ಲಿ ಈರುಳ್ಳಿ, ಆಲೂಗೆಡ್ಡೆ ಮತ್ತು ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ದಿ:03-08-2023ರಂದು ಘನ ಉಚ್ಛ ನ್ಯಾಯಾಲಯವು ರಿಟ್ ಪಿಟಿಷನ್ ನಂ: 11234/2021ಇಸವಿಯಲ್ಲಿ ಶಿವಮೊಗ್ಗ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿರುವ 16 ಮಳಿಗೆಗಳಲ್ಲಿ 14 ಮಳಿಗೆಗಳನ್ನು ಹೊಸದಾಗಿ ಹಂಚಿಕೆ ಮಾಡುವಂತೆ ಸೂಚಿಸಿದ್ದರಿಂದ ದಿ:30-01-2024ರಂದು ಆ ಸಂಬಂಧ ಶಿವಮೊಗ್ಗ ಎ.ಪಿ.ಎಂ.ಸಿ. ಯಿಂದ ಪ್ರಕಟಣೆ ಹೊರಡಿಸಿದ್ದು, ಅದಕ್ಕೆ ಫಿರ್ಯಾದುದಾರರು ನಿಯಮಾನುಸಾರ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿರುತ್ತಾರೆ. ಮಳೆಗೆ ಹಂಚಿಕೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಫಿರ್ಯಾದಿಯು ದಿ:29-02-2024ರಂದು ಶಿವಮೊಗ್ಗ ಎ.ಪಿ.ಎಂ.ಸಿ. ಕಛೇರಿಗೆ ಹೋಗಿ ಕಾರ್ಯದರ್ಶಿ ಶ್ರೀ ಕೋಡಿಗೌಡ ಇವರನ್ನು ಭೇಟಿಯಾಗಿ ವಿಚಾರಿಸಿದಾಗ ನಿಮಗೆ ಮಳಿಗೆ ಆಗುತ್ತದೆ, ಆದರೆ ಹೆಡ್ ಆಫೀಸ್‌ಗೆ ಹೋಗಿ ಸರಿ ಮಾಡಿಕೊಳ್ಳಿ, ಖರ್ಚು ಬರುತ್ತದೆ, ಸ್ವಲ್ಪ ನೋಡ್ಕೊಬೇಕು, ಅದನ್ನು ಯೋಗೇಶ್‌ಗೆ ಹೇಳಿದ್ದೇನೆ ಅವರತ್ತ ಮಾತನಾಡಿಕೊಳ್ಳಿ ಎಂದು ಹೇಳಿದ್ದು, ನಂತರ ಕಮೀಷನ್ ಏಜೆಂಟ್ ಲೈಸೆನ್ಸ್‌ನ ಕೇಸ್ ವರ್ಕರ್ ಯೋಗೇಶ್ ಇವರನ್ನು ಭೇಟಿ ಮಾಡಿ ಕೇಳಿದಾಗ ಅವರು ರೂ. 2.ಲಕ್ಷಕ್ಕೆ ಬೇಡಿಕೆಯಿಟ್ಟು, ಬಳಿಕ ಫಿರ್ಯಾದಿಯ ಕೋರಿಕೆ ಮೇರೆಗೆ ರೂ.1.ಲಕ್ಷಕ್ಕೆ ಒಪ್ಪಿಕೊಂಡಿರುತ್ತಾರೆ. ಮಳಿಗೆಗಳ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ಎ.ಪಿ.ಎಂ.ಸಿ. ಕಛೇರಿಯ ಕಾರ್ಯದರ್ಶಿ ಕೋಡಿಗೌಡ ಮತ್ತು ಕಮೀಷನ್ ಏಜೆಂಟ್ ಲೈಸೆನ್ಸ್‌ನ ಕೇಸ್ ವರ್ಕರ್ ಯೋಗೇಶ್ ಇವರುಗಳಿಗೆ ಲಂಚದ ಹಣ ನೀಡಲು ಇಷ್ಟವಿರದ ಫಿರ್ಯಾದಿಯು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟ ಮೇರೆಗೆ ಇಂದು
ದಿನಾಂಕ: 04-03-2024ರಂದು ಗುನ್ನೆ ಸಂಖ್ಯೆ 03/2024,ಕಲಂ 07(A), ಪಿಸಿ ಆ್ಯಕ್ಟ್ (ತಿದ್ದುಪಡಿ ಕಾಯ್ದೆ 1988 ) ಪ್ರಕಾರ ಪ್ರಕರಣ ದಾಖಲಿಸಲಾಗಿರುತ್ತದೆ.
ಅದರಂತೆ ಇಂದು ದಿ:04-03-2024ರಂದು ಆರೋಪಿ-1 ಶ್ರೀ ಕೋಡಿಗೌಡ, ಬಿನ್. ಲೇಟ್ ಕೋಡಿಗೌಡ, ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ ಇವರು ಲಂಚದ ಹಣ ರೂ. 1ಲಕ್ಷದಲ್ಲಿ ಮುಂಗಡವಾಗಿ 50,000/-ರೂಪಾಯಿ ಲಂಚದ ಹಣವನ್ನು ಫಿರ್ಯಾದಿಯಿಂದ ಪಡೆಯುವಾಗ ನಮ್ಮ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಅವರಿಂದ ರೂ.50,000/-ಗಳ ಲಂಚದ ಹಣವನ್ನು ಜಪ್ತಿಪಡಿಸಿಕೊಂಡು ಅವರನ್ನು ಮತ್ತು ಆರೋಪಿ-2 ಶ್ರೀ ಯೋಗೇಶ್ ಬಿನ್. ಲೇಟ್ ಕೆ.ಟಿ. ಅಶೋಕ, ಕಮೀಷನ್ ಏಜೆಂಟ್ ಲೈಸೆನ್ಸ್‌ನ ಕೇಸ್ ವರ್ಕರ್, ಶಿವಮೊಗ್ಗ ಇವರನ್ನು ಸಹಾ ಬಂಧಿಸಿದ್ದು, ಮುಂದಿನ ತನಿಖೆಯನ್ನು ಶ್ರೀ ಹೆಚ್.ಎಸ್. ಸುರೇಶ್, ಪಿಐ-2, ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರು ಕೈಗೊಂಡಿರುತ್ತಾರೆ. ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಪೊಲೀಸ್ ಉಪಾಧೀಕ್ಷಕರಾದ ಶ್ರೀ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು,ಎಪಿಎಂಸಿಯ ಈ ಬಾರಿ ತಿಮಿಂಗಿಲಗಳನ್ನು ಲೋಕಾಯುಕ್ತ ಖೆಡ್ಡಕ್ಕೆ ಕೇಡವಿಕೊಂಡ ಸಂಧರ್ಭದಲ್ಲಿ ಶಿವಮೊಗ್ಗ ಲೋಕಾಯುಕ್ತ ಕಛೇರಿಯ, ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಮಹಂತೇಶ, ಸಿ.ಹೆಚ್.ಸಿ., ಶ್ರೀ ಸುರೇಂದ್ರ, ಸಿ.ಹೆಚ್.ಸಿ., ಶ್ರೀ ಯೋಗೀಶ್, ಸಿ.ಹೆಚ್.ಸಿ., ಶ್ರೀ ಬಿ.ಟಿ. ಚನ್ನೇಶ, ಸಿಪಿಸಿ, ಶ್ರೀ ಪ್ರಶಾಂತ್‌ಕುಮಾರ್, ಸಿಪಿಸಿ, ಶ್ರೀ ಅರುಣ್‌ಕುಮಾರ್, ಸಿಪಿಸಿ, ಶ್ರೀ ದೇವರಾಜ, ಸಿ.ಪಿ.ಸಿ., ಶ್ರೀ ರಘುನಾಯ್ಕ, ಸಿ.ಪಿ.ಸಿ., ಶ್ರೀಮತಿ ಪುಟ್ಟಮ್ಮ, ಪಿಸಿ, ಶ್ರೀ ಕೆ.ಸಿ. ಜಯಂತ್, ಎಪಿಸಿ, ಶ್ರೀ ವಿ. ಗೋಪಿ, ಎಪಿಸಿ ಮತ್ತು ಶ್ರೀ ಪ್ರದೀಪ್ ಕುಮಾರ್, ಎಪಿಸಿ, ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸುತ್ತಾರೆ.