ಹತ್ಯೆಯಾದ ಸ್ಥಳವನ್ನು ಪರಿಶೀಲಿಸುತ್ತಿರುವ ಪೋಲಿಸರು
ರೌಡಿಗಳಾಗಲು ಹೊರಟ ಯುವಕರನ್ನು, ಸಿನಿಮಾ ಶೈಲಿಯಲ್ಲಿ ಸ್ನೇಹಿತನ ಕೊಲೆ ಮಾಡಿದ ಕಿರಾತಕರು.!!
news.ashwasurya.in
ಚಿಕ್ಕಮಗಳೂರು: ಸಿನಿಮಾ ನೋಡಿ ಪ್ರೇರಣೆಯಾದ ಪುಡಿ ರೌಡಿಗಳ ಗ್ಯಾಂಗ್ ಡಾನ್ ಆಗಿ ಮರೆಯಲು ಜೋಗಿ ಸಿನೆಮಾ ಮಾದರಿಯಲ್ಲೇ ತಮ್ಮದೆ ಸ್ನೇಹಿತನೊಬ್ಬನ ಕೊಲೆಮಾಡಿ ಮುಗಿಸಿದ್ದಾರೆ.!!
ಈ ಘಟನೆ ನೆಡದದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಈ ಬರ್ಬರ ಕೃತ್ಯಕ್ಕೆ ಬಲಿಯಾದವನು ದರ್ಶನ್. ಸ್ನೇಹಿತರೆ ಇತನ ಕತ್ತುಸೀಳಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮದುಗಿರಿ ಮೂಲದ ದರ್ಶನ್ ಸ್ನೇಹಿತರಿಂದ ಕೊಲೆಯಾದ ಯುವಕನಾಗಿದ್ದು ಇತ್ತೀಚೆಗಷ್ಟೇ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿ ಬೇಲ್ ಪಡೆದು ಹೊರಗೆ ಬಂದಿದ್ದ. ದರ್ಶನ್ ಕಡೂರಿನ ಹೊಸೂರು ಗ್ರಾಮದಲ್ಲಿ ಅಜ್ಜಿಯ ಜೊತೆ ವಾಸವಾಗಿದ್ದ. ದರ್ಶನ್ ಜೊತೆಗೆ ಆತನ ಸ್ನೇಹಿತರು ಹಾಗೂ ಪುಡಿ ರೌಡಿಗಳಾಗಿದ್ದ ಮನೋಜ್ ಹಾಗೂ ಕೌಶಿಕ್ ಕೂಡಾ ಅಜ್ಜಿ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ದರ್ಶನ್ ಜೊತೆ ಒಂದು ತಿಂಗಳಿನಿಂದ ಒಂದೇ ತಟ್ಟೆಯಲ್ಲಿ ಊಟ ಮಾಡಿಕೊಂಡಿದ್ದ ಮನೋಜ್ ಹಾಗೂ ಕೌಶಿಕ್ ಈಗ ಸ್ನೇಹಿತ ದರ್ಶನ್ ಗೆ ಮುಹೂರ್ತವಿಟ್ಟು ಕೊಲೆ ಮಾಡಿ ಅಂದರ್ ಆಗಿದ್ದಾರೆ. ಜೈಲಿನಿಂದ ಬಂದಿದ್ದ ದರ್ಶನ್ ಡಾನ್ ಆಗಿ ಮೇರಿಯಲು ಮುಂದಾಗಿದ್ದ ಈ ಕಾರಣದಿಂದಲೇ ಕೌಶಿಕ್ ಹಾಗೂ ಮನೋಜ್ ಮೇಲೆ ಹಿಡಿತ ಸಾದಿಸಲು ಯತ್ನಿಸಿದ್ದೆ ಈ ಕೊಲೆಗೆ ಕಾರಣವಾಗಿದೆಯಂತೆ.? ದರ್ಶನ್‌ನನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ನಮಗಿಂತ ದೊಡ್ಡ ಹೆಸರು ಮಾಡ್ತಾನೆ ಅಂತ ಕೌಶಿಕ್ ಮತ್ತು ಮನೋಜ್ ಇಬ್ಬರೂ ದರ್ಶನ್ ಕಥೆ ಮುಗಿಸಲು ಮುಂದ್ದಾಗಿದ್ದಾರೆ.ತಮ್ಮ ಗೆಳೆಯರಾದ ಬೆಂಗಳೂರಿನ ಕಿರಣ್ ಮತ್ತು ರಾಜು ಎಂಬವರನ್ನು ಕರೆಸಿಕೊಂಡು ಜೊತೆ ಸೇರಿ ಫೆ.15ರ ತಡರಾತ್ರಿ ಈ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನ್ ನನ್ನು ಎಣ್ಣೆಹೊಡೊಯಲು ಕರೆದುಕೊಂಡು ಹೋಗಿ ಆತ ಎಣ್ಣೆಯ ನಶೆಯಲ್ಲಿರುವ ಸಮಯದಲ್ಲಿ ಸ್ನೇಹಿತನ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆ ನಂತರ ವಿಷಯ ತಿಳಿದ ಪೋಲಿಸರು ಹತ್ಯೆಯಾದ ಸ್ಥಳಕ್ಕೆ ಆಗಮಿಸಿ ಸ್ಥಳೀಯರಿಂದ ಒಂದಷ್ಟು ಮಾಹಿತಿಯನ್ನು ಕಲೆಹಾಕಿದ ನಂತರ ಕೊಲೆಯಾದ 12 ಗಂಟೆಯಲ್ಲೇ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಯಾವ ಕಾರಣಕ್ಕೆ ಈ ಹತ್ಯೆನೆಡೆದಿದೆ ಎಂದು ಪೋಲಿಸರು ಹಂತಕರನ್ನು ವಿಚಾರಣೆಗೆ ಒಳಪಡಿಸಿದಾಗ ಮೇಲೆ ಹೇಳಿದಂತೆ ಕೊಲೆಯ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಈ ಹತ್ಯೆ ನೆಡೆದಿರುವುದು ಯಾವುದೇ ಕಾರಣಕ್ಕೊ ಅಥವಾ ರಿವೆಂಜಿಗೂ ಅಲ್ಲ ಇಲ್ಲಿ ತಾವುಗಳು ಡಾನ್ ಆಗಿ ಮರೆಯಲು ಸ್ನೇಹಿತ ಅಡ್ಡಲಾಗಿ ನಿಂತಿದ್ದಾನೆ ಎನ್ನುವ ಕಾರಣಕ್ಕೆ ಒಂದೆ ತಟ್ಟೆಯಲ್ಲಿ ಒಟ್ಟಿಗೆ ಉಟಮಾಡಿದ ಸ್ನೇಹಿತನನ್ನೆ ಆತನ ಆಪ್ತಮಿತ್ರರೆ ಕುಡಿಸಿ ಕೆಡವಿಕೊಂದಿದ್ದಾರೆ ಎನ್ನುವುದು ಮಾತ್ರ ದುರಂತವೆ ಹೌದು. ನೆತ್ತರ ಪಾತಕಲೋಕದಲ್ಲಿ ಅಣ್ಣ ತಮ್ಮ ಸ್ನೇಹಿತ ಎನ್ನುವ ಯಾವುದೇ ಮುಲಾಜಿಲ್ಲಾ ಎನ್ನುವುದಕ್ಕೆ ಈ ಹತ್ಯೆಯು ಒಂದು. ಈ ಹತ್ಯೆಗಳು ಪಾತಕಲೋಕದಲ್ಲಿ ಕಾರಣವಿಲ್ಲದೆ ಸಾಲು ಸಾಲಾಗಿ ನೆಡೆದು ಹೋಗಿದೆ ನೆಡೆಯುತ್ತಲೆ ಇದೆ ಇದೆ ರೌಡಿಸಂ ನ ನಿಯತ್ತು…!!