ಅಮೆರಿಕ: ಕ್ಯಾಲಿಫೋರ್ನಿಯಾದ ಮನೆಯೊಂದರಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಶವ ಪತ್ತೆ!! ಶವದ ಪಕ್ಕದಲ್ಲಿತ್ತು ರಿವಲ್ವಾರ್!!?
News.Ashwasurya.in
SUDHIR VIDHATA
ಅಮೆರಿಕ: ಕೇರಳ ಮೂಲದ ಕುಟುಂಬವೊಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.! ಇದು ಆತ್ಮಹತ್ಯೆಯೊ ಕೊಲೆಯೊ ಎನ್ನುವುದು ಮಾತ್ರ ನಿಗೂಢವಾಗಿದೆ.ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದು
ಆನಂದ್ ಸುಜಿತ್ ಹೆನ್ರಿ (42), ಪತ್ನಿ ಆಲಿಸ್ ಪ್ರಿಯಾಂಕಾ (40), ಮತ್ತು ಅವರ 4 ವರ್ಷದ ಅವಳಿ ಮಕ್ಕಳಾದ ನೀಥಾನ್ ಮತ್ತು ನೋಹ್ ಗುರುತಿಸಲಾಗಿದೆ. ಇವರ
ಕುಟುಂಬದ ಸದಸ್ಯರೊಬ್ಬರು ಯೋಗಕ್ಷೇಮ ವಿಚಾರಿಸಲು ಎಷ್ಟೇ ಬಾರಿ ಪೋನ್ ಮಾಡಿದರು ಮನೆಯಲ್ಲಿ ಯಾರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬ ಸದಸ್ಯರು ಆತಂಕಕ್ಕೆ ಒಳಗಾಗಿ ಕ್ಯಾಲಿಫೋರ್ನಿಯಾದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರ ಮಾಹಿತಿ ಬಂದ ಕೂಡಲೆ ಕಾರ್ಯಚರಣೆಗೆ ಮುಂದಾದ ಸ್ಥಳೀಯ ಪೊಲೀಸರು ಮನೆಯ ಬಳಿ ಬಂದು ಎಷ್ಟೇ ಕಾಲಿಂಗ್ ಬೆಲ್ ಮಾಡಿದರು ಮನೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮನೆಯ ಕಿಟಕಿಯ ಬಾಗಿಲು ತೆರೆದು ನೋಡಿದಾಗ ಮೃತದೇಹಗಳು ಪತ್ತೆಯಾಗಿದೆ.
ಬಳಿಕ ಬಾಗಿಲು ಒಡೆದು ಒಳ ಪ್ರವೇಶಿಸಿದ ಪೊಲೀಸರಿಗೆ ಆತಂಕವಾಗಿತ್ತು ಇಬ್ಬರು ಅವಳಿ ಮಕ್ಕಳ ಮೃತದೇಹ ಬೆಡ್ ರೂಮ್ ನಲ್ಲಿ ಪತ್ತೆಯಾದರೆ ಗಂಡ ಹೆಂಡತಿಯ ಮೃತದೇಹ ಬಾತ್ ರೂಮ್ ನ ಒಳಗೆ ಪತ್ತೆಯಾಗಿದೆ. ಅಷ್ಟು ಮಾತ್ರವಲ್ಲದೆ ಬಾತ್ ರೂಮ್ ನಲ್ಲಿ 9 ಎಂಎಂ ಪಿಸ್ತೂಲ್ ಪತ್ತೆಯಾಗಿದ್ದು ಮೃತದೇಹಗಳ ಮೈಮೇಲೂ ಗುಂಡಿನ ಗಾಯಗಳು ಪತ್ತೆಯಾಗಿವೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಅನುಮಾನ ಹುಟ್ಟಿದೆ.!? ಮೇಲುನೋಟಕ್ಕೆ ಇದು ಆತ್ಮಹತ್ಯೆ ಎನ್ನುವಂತೆ ಕಾಣುತ್ತಿದ್ದರು ಕಾರಣ ಏನಿರಬಹುದು ಎನ್ನುವ ಕುರಿತು ತನಿಖೆ ಮುಂದುವರೆದಿದೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಮೃತದೇಹದ ಜೋತೆಗೆ ಸಿಕ್ಕ ರಿವಲ್ವಾರ್ ಹೊರತು ಪಡಿಸಿ ಇನ್ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಅಲ್ಲದೆ ಮನೆಯೊಳಗೆ ಯಾರೂ ಪ್ರವೇಶಿಸಿದ ಹಾಗೆಯೂ ಕಾಣಿಸುತ್ತಿಲ್ಲ! ಮನೆಯ ಕಿಟಕಿಯ ಬಾಗಿಲೊಂದು ಮಾತ್ರ ತೆರೆದಿತ್ತು ಹಾಗಾಗಿ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಕಾದಿದ್ದು ಮರಣೋತ್ತರ ಪರೀಕ್ಷಾ ವರದಿ ಪೋಲಿಸರ ಕೈ ಸೇರಿದ ಮೇಲೆ ಈ ಸಾವಿನ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.
ಕ್ಯಾಲಿಫೋರ್ನಿಯಾದಲ್ಲಿ ದಂಪತಿಗಳು 2020ರಲ್ಲಿ ಮನೆ ಖರೀಸಿದಿದ್ದರಂತೆ!? ಜೊತೆಗೆ ನೆರೆ ಹೊರೆಯವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದು ಹೇಳಲಾಗಿದೆ.
ಈ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಪೋಲಿಸರ ತನಿಖೆಯಿಂದ ಇದು ಕೊಲೆಯೊ ಅಥವಾ ಆತ್ಮಹತ್ಯೆಯೊ ಎನ್ನುವುದು ಬಯಲಾಗಬೇಕಿದೆ.