ಕರ್ತವ್ಯ ನಿರತ ಪೊಲೀಸ್​ ಪೆದೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಎಸ್​ಪಿ ಉಮಾ ಪ್ರಶಾಂತ್ ಮಾಧ್ಯಮದ ಮುಂದೆ ಹೇಳಿದಿಷ್ಟು:

ಕರ್ತವ್ಯ ನಿರತ ಪೊಲೀಸ್​ ಪೆದೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ: ಮಹಾನಗರ ಪಾಲಿಕೆ ಆವರಣದಲ್ಲಿ ಕರ್ತವ್ಯ ನಿರತ ಪೊಲೀಸ್ ಕಾನ್ಸ್​​ಟೇಬಲ್​ ಒಬ್ಬರಿಗೆ ತನ್ನ ಸರ್ವಿಸ್ ಬಂದೂಕಿನಿಂದ ಮಿಸ್ ಫೈರ್ ಆಗಿ ಗುಂಡು ಭುಜಕ್ಕೆ ತಗಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.ಪಾಲಿಕೆ ಆವರಣದಲ್ಲಿ ಇವಿಎಂ ಕಾವಲಿಗಿದ್ದ ಕಾನ್ಸ್‌ಟೇಬಲ್ ಗುರುಮೂರ್ತಿ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನೋಡನೆ ಹೋರಾಡುತ್ತಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

ಗುರುಮೂರ್ತಿ ಅವರ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿ ಈ ಅವಘಡ ಸಂಭವಿಸಿದೆ.
ದಾವಣಗೆರೆಯ ಡಿಎಆರ್ 2011ರ ಬ್ಯಾಚ್​ನ ಗುರುಮೂರ್ತಿ ಅವರನ್ನು ಮಹಾನಗರ ಪಾಲಿಕೆಯಲ್ಲಿ ಗಾರ್ಡ್ ​ಡ್ಯೂಟಿಗಾಗಿ ನಿಯೋಜಿಸಲಾಗಿತ್ತು.ಇವರ ಬಳಿ ಇದ್ದ ಬಂದೂಕಿನಿಂದ ಇದ್ದಕ್ಕಿದಂತೆ ಗುಂಡು ಹಾರಿದೆ. ಅವರ ಭುಜವನ್ನು ಗುಂಡು ಸಿಳಿದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ನೋಡಿದ ಸ್ಥಳೀಯರು ಹಾಗು ಪೊಲೀಸ್​ ಸಿಬ್ಬಂದಿಗಳು ತಕ್ಷಣವೇ ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ ತಕ್ಷಣವೇ
ಚಿಕಿತ್ಸೆ ನೀಡಲಾಗಿದ್ದು ಬದುಕುವ ಸಾಧ್ಯತೆ ಇದೆ ಸಾಕಷ್ಟು ರಕ್ತಸ್ರಾವ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಗುರುಮೂರ್ತಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರಾ ಅಥವಾ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿದೆಯಾ ಎಂಬುದು ವಿಚಾರಣೆಯ ಬಳಿಕವಷ್ಟೇ ಗೊತ್ತಾಗಲಿದೆ. ಬಂದೂಕಿನಿಂದ ಫೈರ್ ಅದ ಗುಂಡು ಬಿದ್ದ ಜಾಗವನ್ನು ಗಮನಿಸಿದರೆ ಗುಂಡು ಮಿಸ್ ಫೈರ್ ಆಗಿರುವ ಸಾಧ್ಯತೆ ಇದೆ. ಬಂದೂಕಿನಿಂದ ಸಿಡಿದ ಗುಂಡು ಗುರುಮೂರ್ತಿಯ ಭುಜವನ್ನು ಸಿಳಿದೆ. ಸದ್ಯ ಗುರುಮೂರ್ತಿ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ಮುಂದುವರಿದಿದೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಎಸ್ಪಿ ಉಮಾಪ್ರಶಾಂತ್ ಹಾಗೂ ಐಜಿಪಿ ತ್ಯಾಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಸ್​ಪಿ ಉಮಾ ಪ್ರಶಾಂತ್ ಮಾಧ್ಯಮದ ಮುಂದೆ ಹೇಳಿದಿಷ್ಟು:

ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಆಸ್ಪತ್ರೆ ಬಳಿ ಮಾತನಾಡಿದ ಎಸ್​​ಪಿ ಉಮಾಪ್ರಶಾಂತ್ ಅವರು ಪಾಲಿಕೆಯಲ್ಲಿ ಇವಿಎಂ ಕಾವಲು ಕಾಯಲು ನಮ್ಮ ಸಿಬ್ಬಂದಿ ಗುರುಮೂರ್ತಿ ಅವರನ್ನು ನೇಮಕ‌ ಮಾಡಿಲಾಗಿತ್ತು. ರಾತ್ರಿ 08:30 ಸುಮಾರಿಗೆ ಅವರಿಗೆ ಗುಂಡೇಟಿನಿಂದ ಗಾಯ ಆಗಿದೆ ಎಂದು ನಮಗೆ ಗೊತ್ತಾಗಿದೆ. ನಮ್ಮ ಸಿಬ್ಬಂದಿಯವರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ನಾವು ಗುರುಮೂರ್ತಿ ಅವರು ಸ್ವಲ್ಪ ಚೇತರಿಸಿಕೊಂಡ ನಂತರವಷ್ಟೇ ಗುಂಡಿನ ಸದ್ದಿನ ಹಿಂದಿನ ಸತ್ಯಾ ಸತ್ಯತೆ ಬಯಲಾಗಲಿದೆ. ವೈದ್ಯರು ಅವರಿಗೆ ಆಪರೇಷನ್ ಮಾಡಿದ್ದಾರೆ, ಚಿಕಿತ್ಸೆ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಆಕಸ್ಮಿಕವಾಗಿ ಗುಂಡು ಹಾರಿದೆ ಅಂತ ಹೇಳಲಾಗುತ್ತಿದೆ. ಆದರೆ ಅವರಿಗೆ ಪ್ರಜ್ಞೆ ಬಂದು ಮಾತನಾಡಿದಾಗ ನಮಗೆ ಮಾಹಿತಿ ಸಿಗುತ್ತೆ, ನಾವು ಸದ್ಯ ಯಾವುದೇ ವಿಚಾರಣೆ ಮಾಡಲು ಹೋಗಿಲ್ಲ, ನಮ್ಮ ತನಿಖಾ ಅಧಿಕಾರಿ ಬಂದಿದ್ದಾರೆ ವಿಚಾರಣೆ ಮಾಡಲಿದ್ದಾರೆ.ಆತನ ಸ್ಥಿತಿ ಗಂಭೀರವಾಗಿದೆ, ಆದ್ರೂ ವೈದ್ಯರು ಪ್ರಯತ್ನ ಮಾಡ್ತಿದ್ದಾರೆ. ಭುಜಕ್ಕೆ ತೀವ್ರ ಏಟಾಗಿದ್ದು, ಇದೀಗ ಅವರು ಚಿಕಿತ್ಸೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರಿಂದ ಮಾಹಿತಿ ಕಲೆಹಾಕಿ ಮುಂದೆ ಎಫ್​ಐಆರ್ ದಾಖಲಿಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ

Leave a Reply

Your email address will not be published. Required fields are marked *

Optimized by Optimole
error: Content is protected !!