news.ashwasurya.in
ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರೌಡಿಗಳು ಆಟ್ಟಹಾಸ ಮೇರೆದಿದ್ದಾರೆ. ರೌಡಿಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನಿವಾಸದ ಸಮೀಪವೇ ದುಷ್ಕರ್ಮಿಗಳ ಗುಂಪು ರೌಡಿಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ
–
ದುಷ್ಕರ್ಮಿಗಳು ಅಟ್ಯಾಕ್ ಮಾಡುತ್ತಿದ್ದಂತೆ ತಪ್ಪಿಸಿಕೊಳ್ಳಲು ಜೈ ಪ್ರಕಾಶ್ ಪ್ರಯತ್ನಿಸಿದ್ದು, ಈ ವೇಳೆ ವಿಜಯ ಸಾಗರ ಹೋಟೆಲ್ ಗೆ ನುಗ್ಗಿದ್ದ ಜೈ ಪ್ರಕಾಶ್ ನನ್ನು ಹೋಟೆಲ್ನಲ್ಲೇ ಕೊಚ್ಚಿ ಕೊಲೆ ಮಾಡಿದ್ದಾರೆ.
ಅಡುಗೋಡಿ ಪೋಲಿಸ್ ಸ್ಟೇಷನ್, ಬೆಂಗಳೂರು
ಬೆಂಗಳೂರು ಆಡುಗೋಡಿ ಠಾಣಾ ವ್ಯಾಪ್ತಿಯ ಲಕ್ಕಸಂಧ್ರ ಸರಹದ್ದಿನಲ್ಲಿ ರೌಡಿಶೀಟರ್ ಜೈಪ್ರಕಾಶ್ ಅಲಿಯಾಸ್ ಅಪ್ಪಿ ಎಂಬಾತನ ಕೊಲೆ ಪ್ರಕರಣವೊಂದು ನಡೆದಿದೆ, ಆಡುಗೋಡಿ ಪೊಲೀಸರು ಮತ್ತು ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾನುವಾರ ಸಂಜೆ 6 ಗಂಟೆ ಸುಮಾರಿಗೆ ಮೃತ ರೌಡಿಶೀಟರ್ ಹೋಟೆಲ್ ಒಳಗೆ ಟೀ ಕುಡಿಯಲು ಹೋಗಿದ್ದಾನೆ, ಇದೆ ವೇಳೆ ಮೊದಲೇ ಸ್ಕೆಚ್ ಹಾಕಿ ಕುಳಿತಿದ್ದ ಹಂತಕರ ಪಡೆ ಹತಾರದೊಂದಿಗೆ ಹೋಟೆಲ್ ಒಳಗೆ ನುಗ್ಗಿ ಏಕಾಏಕಿ ರೌಡಿಶೀಟರ್ ನ ಮೇಲೆ ಮನಬಂದಂತೆ ದಾಳಿ ನೆಡೆಸಿದ್ದಾರೆ; ದುಷ್ಕರ್ಮಿಗಳ ತಂಡ ಅಪ್ಪಿಯ ದೇಹದ ಮೇಲೆ ಎಲ್ಲೆಂದರಲ್ಲಿ ಲಾಂಗ್ ಬಿಸಿದ್ದಾರೆ. ಮಾರಾಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ ಹೊಡೆತಕ್ಕೆ ಜೈಪ್ರಕಾಶ್ ಅಲಿಯಾಸ್ ಅಪ್ಪಿ ನೆಲಕ್ಕೂರುಳಿದ್ದಾನೆ! ಆತನ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ತಿಳಿಯುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.
ಹನುಮ ಜಯಂತಿ ದಿನದಂದೆ ಹೊಯಿತೊಂದು ಜೀವ!!
ಹನುಮ ಜಯಂತಿ ಹಿನ್ನೆಲೆಯಲ್ಲಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜೈಪ್ರಕಾಶ್ ಅಲಿಯಾಸ್ ಅಪ್ಪಿ!
ಒಂದು ಕಡೆ ಹನುಮ ಭಕ್ತರ ಭಜನೆ ಮುಗಿಲು ಮುಟ್ಟಿದ್ದರೆ ಇನ್ನೊಂದು ಕಡೆ ಹನುಮ ಭಕ್ತನನ್ನು ಕೊಂದ ಹಂತಕರ ತಂಡ ಕೇಕೆ ಹಾಕಿದ್ದರು…
ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಹತ್ಯೆಯಾದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ನೆಡೆದ ಸ್ಥಳದಲ್ಲಿ ಜನರ ಗುಂಪು ಸೇರಿದ್ದ ಕಾರಣಕ್ಕೆ ಪೊಲೀಸರು ಚದುರಿಸಿ ಮೃತ ದೇಹವನ್ನು ಶಿಫ್ಟ್ ಮಾಡುವ ಕಾರ್ಯ ಮಾಡಿದ್ದರಂತೆ
ಹನುಮಜಯಂತಿ ಹಿನ್ನೆಲೆಯಲ್ಲಿ ಲಕ್ಕಸಂದ್ರ ಬಸ್ ನಿಲ್ದಾಣ ಬಳಿಯ ಆಂಜನೇಯ ದೇವಸ್ಥಾನಕ್ಕೆ ಜೈಪ್ರಕಾಶ್ ಆಗಮಿಸಿದ್ದ. ಜಯಂತಿ ಹಿನ್ನೆಲೆಯಲ್ಲಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನಂತೆ.! ಆತ ಇರುವುದನ್ನು ಪಕ್ಕಾ ಮಾಡಿಕೊಂಡ ದುಷ್ಕರ್ಮಿಗಳ ಗ್ಯಾಂಗ್ ಕೇಲವು ಹೊತ್ತಿನಿಂದ ಜೈ ಪ್ರಕಾಶ್ ನನ್ನ ಅಬ್ಸರ್ವ್ ಮಾಡಿದ್ದಾರೆ, ಸರಿಯಾದ ಸಮಯಕ್ಕಾಗಿ ಹೊಂಚುಹಾಕಿದ್ದ ಹಂತಕರು ಸಂಜೆ ಆರು ಗಂಟೆ ಸುಮಾರಿಗೆ ಏಕಾಏಕಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. ಮಿಸುಕಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಜೀವಬಿಟ್ಟಿದ್ದಾನೆ ಅಪ್ಪಿ!!
ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಜೈಪ್ರಕಾಶನನ್ನು ದುಷ್ಕರ್ಮಿಗಳು ಅಟ್ಯಾಕ್ ಮಾಡುತ್ತಿದ್ದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ, ತಪ್ಪಿಸಿಕೊಳ್ಳವ ಬರದಲ್ಲಿ ಅಲ್ಲೆ ಇದ್ದ ವಿಜಯ ಸಾಗರ ಹೋಟೆಲ್ಲಿಗೆ ನುಗ್ಗಿದ್ದಾನೆ.ಹಂತಕರು ಕೂಡ ಹೋಟೆಲ್ ನುಗ್ಗಿ ಜೈಪ್ರಕಾಶನನ್ನು ಹೋಟೆಲ್ನಲ್ಲೇ ಕೊಚ್ಚಿ ಕೊಲೆ ಮಾಡಿದ್ದಾರೆ.
ರೌಡಿಶೀಟರ್ ಜೈಪ್ರಕಾಶ್ ಹತ್ಯೆಗೆ ಕಾರಣ?
ಮೃತ ರೌಡಿಶೀಟರ್ 2006ರಲ್ಲಿ ರಮೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದನಂತೆ. ಹಳೆ ದ್ವೇಷ ಹಿನ್ನೆಲೆ ರೌಡಿಶೀಟರ್ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಐದು ತಂಡ ರಚನೆ
ಘಟನೆ ಬಗ್ಗೆ ಮಾಹಿತಿ ನೀಡಿ ಮಾತನಾಡಿರುವ ಡಿಸಿಪಿ ಸಿಕೆ ಬಾಬ, ಜೈಪ್ರಕಾಶ್ ಅಲಿಯಾಸ್ ಅಪ್ಪಿ ಎನ್ನುವ ರೌಡಿಶೀಟರ್ ಒಬ್ಬನ ಕೊಲೆಯಾಗಿದೆ. ಇವತ್ತು ಹನುಮ ಜಯಂತಿ ಹಿನ್ನಲೆ ಅನ್ನದಾನ ಮಾಡುತ್ತಿದ್ದರು. ಯಾರೋ ನಾಲ್ಕೈದು ಮಂದಿ ಅಟ್ಯಾಕ್ ಮಾಡಿ ಹತ್ಯೆಮಾಡಿ ಹೋಗಿದ್ದಾರೆ. ತನ್ನ ಮೇಲೆ ಅಟ್ಯಾಕ್ ಆಗುವ ಆನುಮಾನವಿದ್ದ ಕಾರಣಕ್ಕೆ ಜೈಪ್ರಕಾಶ್ ಒಂದೇ ಏರಿಯಾದಲ್ಲಿ ಇರುತ್ತಿರಲಿಲ್ಲ,ಒಂದು ಕಡೆ ವಾಸಕೂಡ ಮಾಡ್ತಿರಲಿಲ್ಲ. ನಾವು ಪ್ರಕರಣವನ್ನು ಸೂಕ್ಷ್ಮವಾಗಿ ತೆಗೆದುಕೊಂಡಿದ್ದೇವೆ ಈ ಹತ್ಯೆಮಾಡಿದ ಹಂತಕರ ಪತ್ತೆಗೆ ಮುಂದಾಗಿದ್ದೇವೆ. ಐದು ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಮಾಡ್ತೇವೆ ಎಂದು ತಿಳಿಸಿದ್ದಾರೆ