ಕೇಂದ್ರ ಸರ್ಕಾರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಝಡ್ ಶ್ರೇಣಿಯ ಭದ್ರತೆ ನೀಡಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಇಲಾಖೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ದಿಢೀರ್ ಅಂತ ಝಡ್ ಶ್ರೇಣಿಯ ಭದ್ರತೆ ನೀಡಿದ್ದರ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗಳು ಶುರುವಾಗಿವೆ
ಯಡಿಯೂರಪ್ಪ ಅವರಿಗೆ ಜೀವ ಬೆದರಿಕೆ ಬಂದಿದೆಯಾ ಅಥವಾ ಅವರೇ ಝಡ್ ಶ್ರೇಣಿಯ ಭದ್ರತೆಯನ್ನು ಕೇಂದ್ರ ಗೃಹ ಇಲಾಖೆಯಿಂದ ಕೇಳಿದ್ರಾ ಎಂಬ ಪ್ರಶ್ನೆಗಳು ಮೂಡಿವೆ.
ಈ ಮೊದಲು ಯಡಿಯೂರಪ್ಪ ಅವರಿಗಿದ್ದ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿತ್ತು. ಇದೀಗ ಕೇಂದ್ರ ಗೃಹ ಇಲಾಖೆ ಉನ್ನತ ಮಟ್ಟದ ಭದ್ರತೆಯನ್ನು ನೀಡಿದೆ.
ಕೆಲವು ದುಷ್ಕರ್ಮಿಗಳಿಂದ ಯಡಿಯೂರಪ್ಪ ಅವರಿಗೆ ಜೀವ ಬೆದರಿಕೆ ಬಂದ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಈ ಭದ್ರತೆಯನ್ನು ನೀಡಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಯಡಿಯೂರಪ್ಪ ಅವರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾದ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಈ ಭದ್ರತೆಯನ್ನು ನೀಡಿದೆಯಂತೆ. ಈ ಸಂಬಂಧ ಗೃಹ ಸಚಿವಾಲಯದಿಂದಲೂ ಆದೇಶ ಹೊರ ಬಂದಿದೆ ಎಂದು ವರದಿಯಾಗಿದೆ.
ಶೀಘ್ರದಲ್ಲಿಯೇ ಬಿಎಸ್ ಯಡಿಯೂರಪ್ಪ ಅವರ ಭದ್ರತೆಗೆ ಪೊಲೀಸ್ ಕಮಾಂಡೋಗಳು ನಿಯೋಜನೆ ಆಗಲಿದ್ದಾರೆ. ಝಡ್ ಶ್ರೇಣಿಯ ಭದ್ರತೆಯಲ್ಲಿ 33 ಝಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಝಡ್ ಕೆಟಗರಿ ಭದ್ರತೆ ನೀಡಿರುವ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ
ಮಾಜಿ ಸಿಎಂ ಬಿಎಸ್‌ವೈಗೆ ಝಡ್ ಶ್ರೇಣಿಯ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ!!
news.ashwasurya. in
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಕೆಟಗರಿ ಭದ್ರತೆಯನ್ನು ನೀಡಿದೆ.
ರಾಜ್ಯದ ಒಳಗೆ ಯಡಿಯೂರಪ್ಪನವರಿಗೆ ಝಡ್ ವರ್ಗದ ಭದ್ರತೆ ಒದಗಿಸಿದ್ದು, ಸದ್ಯದಲ್ಲೇ ಸಿಆರ್‌ಪಿಎಫ್ ಸಿಬ್ಬಂದಿಯಿಂದ ಭದ್ರತೆ ಕ್ರಮ ಒದಗಿಸಲಾಗುತ್ತದೆ. ಎಲ್ಲಾ ಮಾಜಿ ಸಿಎಂಗಳ ಭದ್ರತೆಯನ್ನು ಕೇಂದ್ರ ಗೃಹ ಇಲಾಖೆ ವಾಪಸ್ ಪಡೆದಿತ್ತು. ಇದರಿಂದ ಸರ್ಕಾರಕ್ಕೆ ಭದ್ರತೆ ವಾಪಸ್ ಕೊಡುವಂತೆ ಯಡಿಯೂರಪ್ಪ, ಡಿವಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಪತ್ರ ಬರೆದಿದ್ದರು. ಇದೀಗ ಯಡಿಯೂರಪ್ಪನವರಿಗೆ ಝಡ್ ಕೆಟಗರಿಯ ಭದ್ರತೆ ಕೊಡಲಾಗಿದೆ.
ಗೃಹ ಸಚಿವಾಲಯದ ನಿರ್ದೇಶನದಂತೆ ಯಡಿಯೂರಪ್ಪ ಅವರ ಉನ್ನತೀಕರಿಸಿದ ಭದ್ರತಾ ವಿವರಗಳನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಕಮಾಂಡೋಗಳು ಒದಗಿಸುತ್ತಾರೆ. ಯಡಿಯೂರಪ್ಪ ಅವರ ರಕ್ಷಣೆಗೆ ಒಟ್ಟು 33 ಝೆಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ
ಸುದೀರ್ ವಿಧಾತ , ಶಿವಮೊಗ್ಗ