ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಎಂ ಶ್ರೀಕಾಂತ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡ ಕ್ಷಣ
ಆಗಸ್ಟ್ 24ರಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪ್ರಭಾವಿ ನಾಯಕ ಆಯನೂರು ಮಂಜುನಾಥ್ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇದರ ಬೆನ್ನಲ್ಲೇ ಶಿರಹಟ್ಟಿ ಬಿಜೆಪಿ ಮಾಜಿ ಶಾಸಕ ಎಸ್. ರಾಮಣ್ಣ ಲಮಾಣಿ ಹಾಗೂ ಹಿರಿಯೂರಿನ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು ಈಗ ಪಬಲ ಜನಪ್ರಿಯ ನಾಯಕ ಎಂ ಶ್ರೀಕಾಂತ್ ಕೂಡ ಸಾವಿರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಸೇರ್ಪಡೆಯಾದರು…
ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ
ಶಿವಮೊಗ್ಗದ ಜೆಡಿಎಸ್ ಪಕ್ಷ ಬರಿದಾಗಿದೆ ಒಬ್ಬೊಬ್ಬರಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಶಿವಮೊಗ್ಗ ಜೆಡಿಎಸ್ ಪಕ್ಷ ಯಜಮಾನನಿಲ್ಲದ ಮನೆಯಂತಾಗಿದೆ. ಹಾಲಿ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ, ಮಾಜಿ ಜೆಡಿಎಸ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಆರ್. ಎಂ. ಮಂಜುನಾಥ್ ಗೌಡ ಬಳಿಕ ಮಾಜಿ ಸಂಸದ ಆಯನೂರು ಮಂಜುನಾಥ್ ಈಗ ಶಿವಮೊಗ್ಗದ ಮತ್ತೊಬ್ಬ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಪ್ರಬಲ ನಾಯಕರಾಗಿರುವಂತ ಎಂ ಶ್ರೀಕಾಂತ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಇವರ ಸೇರ್ಪಡೆಯಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಅಂದು ಜೆಡಿಎಸ್ ತೊರೆದ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಿಂದ ಸ್ಫರ್ಧಿಸಿ ಗೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ ಎನ್ನುವುದನ್ನ ಇಲ್ಲಿ ನೆನಪಿಸಿಕೊಳ್ಳುಬಹುದು.
ಬುಧವಾರ ( ಅಕ್ಟೋಬರ್ 25 ) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಎಂ. ಶ್ರೀಕಾಂತ್, ತುಮಕೂರು ಮಾಜಿ ಶಾಸಕ ಎಸ್. ಶಫಿ ಅಹ್ಮದ್ ಸೇರಿದಂತೆ ಹಲವಾರು ನಾಯಕರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಎಂ. ಶ್ರೀಕಾಂತ್ ಸೇರಿದಂತೆ ಇನ್ನಿತರ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇದೊಂದು ವಿಶೇಷವಾದ ಸಂದರ್ಭವಾಗಿತ್ತು ವಿಜಯದಶಮಿಯಾಗಿ ಮೊದಲನೇ ದಿನವಾದ ಇಂದು ಜನತಾದಳದಿಂದ ಎಂ ಶ್ರೀಕಾಂತ್ ಅವರ ಜೋತೆಗೆ ಇವರ ಬೆಂಬಲಿತ ಸಾವಿರಾರು ಕಾರ್ಯಕರ್ತರು ಹಾಗೂ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಡಿ. ಕೆ. ಶಿವಕುಮಾರ್ ಮಾತನಾಡಿ, ಎಂ. ಶ್ರೀಕಾಂತ್ ನನ್ನ ಒಳ್ಳೆಯ ಗೆಳೆಯ ಹಾಗೂ ಒಳ್ಳೆಯ ಸಂಘಟನಾಗಾರ. ನಾಯಕರನ್ನು ಸೃಷ್ಟಿ ಮಾಡುವಂತಹ ಶಕ್ತಿ ಶ್ರೀಕಾಂತ್ ಅವರಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಆತ್ಮೀಯಾಗಿ ಸ್ವಾಗತಿಸುತ್ತೇನೆ. ಅವರಂತಹ ನಾಯಕರು ನಮ್ಮ ಪಕ್ಷದಲ್ಲಿರಬೇಕು ಎನ್ನುವುದು ನನ್ನ ಆಶಯ ಎಂದು ತಿಳಿಸಿದ್ದಾರೆ.
ಎಂ. ಶ್ರೀಕಾಂತ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ; ಜೆಡಿಎಸ್ ಪಕ್ಷದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಎಂ. ಶ್ರೀಕಾಂತ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. 2013ರ ಚುನಾವಣೆಯಲ್ಲಿ ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿ ಎದುರಿಸಿದ ಚುನಾವಣೆಯಲ್ಲಿ ಅದು ಪ್ರಚಾರಕ್ಕೆ ಸಿಕ್ಕ ಅಲ್ಪಾವಧಿಯ ಸಮಯದಲ್ಲೇ ಸ್ಫರ್ಧಿಸಿ 21,638 ಮತಗಳನ್ನು ಪಡೆದು ಸೋಲು ಕಂಡಿದ್ದರು.
2008ರ ಚುನಾವಣೆಯಲ್ಲಿ ಅವರು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಬಲ ಸ್ಪರ್ಧೆಯನ್ನು ಒಡ್ಡಿದ್ದರು. 2023ರ ಚುನಾವಣೆಯಲ್ಲಿ ಎಂ. ಶ್ರೀಕಾಂತ್ ಸ್ಪರ್ಧಿಸಿರಲಿಲ್ಲ. ಆಗ ಜೆಡಿಎಸ್ ಆರ್. ಎಂ. ಮಂಜುನಾಥ ಗೌಡರನ್ನು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿತು. ಇವರ ಮೊದಲು ಎಂ. ಶ್ರೀಕಾಂತ್ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದರು. ಮಂಜುನಾಥ ಗೌಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಬಳಿಕ ಪುನಃ ಶ್ರೀಕಾಂತ್ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು.
ಶ್ರೀಕಾಂತ್ ಅವರ ಜೊತೆಯಲ್ಲಿ ಜೆಡಿಎಸ್ ನಲ್ಲಿದ್ದ ಪ್ರಬಲ ನಾಯಕರು ಅದರಲ್ಲೂ ಮಾಜಿ ಮೇಯರ್ ನಾಗರಾಜ್ ಕಂಕಾರಿ, ಯುವ ನಾಯಕ ಶಿ ಜು ಪಾಶ, ಮಾಜಿ ಮೇಯರ್ ಪಾಲಾಕ್ಷೀ,ಮಾಜಿ ನಗರ ಸಭಾ ಸದಸ್ಯ ರಾಜಣ್ಣ ಇನ್ನಿತರ ಹಿರಿಯ ಕಿರಿಯ ಪ್ರಬಲ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಎಂ ಶ್ರೀಕಾಂತ್ ರಾಜ್ಯ ಕಂಡ ಪ್ರಬಲ ಯುವ ನಾಯಕರಲ್ಲಿ ಒಬ್ಬರು ಇವರು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷವನ್ನು ಮುಂಚೂಣಿಗೆ ತೆಗೆದುಕೊಂಡು ಹೊದದನ್ನು ಪ್ರತಿಯೊಬ್ಬರು ಗಮನಿಸಿದ್ದಾರೆ ಅ ಮಟ್ಟದ ನಾಯಕತ್ವದ ಗುಣವಿರುವ ಶ್ರೀಕಾಂತ್ ಅವರ ಬೆನ್ನಿಗೆ ಸಾವಿರಾರು ಕಾರ್ಯಕರ್ತರ ಬೆಂಬಲವಿದೆ ಅವರಿಗಾಗಿ ಶ್ರಮಿಸುವಂತಹ ಪಡೆ ಅವರ ಜೊತೆಗಿದೆ.
ಈಗಾಗಲೇ ತಮ್ಮ ಶಕ್ತಿ ಎನ್ನುವುದನ್ನು ಎಂ ಶ್ರೀಕಾಂತ್ ಸಾಕಷ್ಟು ಚುನಾವಣೆಗಳಲ್ಲಿ ತೋರಿಸಿದ್ದಾರೆ ಅದರಲ್ಲೂ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಶ್ರೀಕಾಂತ್ ಅವರಿಗೆ ಅವರದೆ ಅದ ವರ್ಚಸ್ಸಿದೆ ತಮ್ಮ ಕೈ ಕೇಳಗಿನ ಕಾರ್ಯಕರ್ತರನ್ನು ಗಮನಿಸಿ ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಲವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಶ್ರೀಕಾಂತ್ ಅವರನ್ನು ಗೆಲ್ಲಿಸಿಕೊಂಡು ಬರುವುದರ ಜೋತೆಗೆ ಪ್ರಮುಖ ಹುದ್ದೆಯಾದ ಮೇಯರ್ ,ಉಪ ಮೇಯರ್ ಹಾಗೂ ಇನ್ನಿತರ ಹುದ್ದೆಗಳಲ್ಲಿ ತಮ್ಮ ಬೆಂಬಲಿಗರು ರಾರಾಜಿಸುವಂತೆ ಮಾಡಿದ ಹಿರಿಮೆ ಎಂ ಶ್ರೀಕಾಂತ್ ಅವರದು
ಜೆಡಿಎಸ್ ಪಕ್ಷದಲ್ಲಿ ಪ್ರಬಲ ನಾಯಕರಾಗಿದ್ದ ಎಂ ಶ್ರೀಕಾಂತ್ ಈಗ ಸಾವಿರಾರು ಕಾರ್ಯಕರ್ತರ ಜೊತೆಗೆ ಕಾಂಗ್ರೆಸ್ ಸೇರಿದ್ದಾರೆ. ಇವರಿಗೆ ಕಾಂಗ್ರೆಸ್ ಪಕ್ಷ ಸರಿಯಾದ ಸ್ಥಾನಮಾನ ಕೊಟ್ಟು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದೆ ಅದರೆ ಹಾಲಿ ಶಿವಮೊಗ್ಗ ಜಿಲ್ಲೆಯ ಬಿಜೆಪಿಯ ಜನಪ್ರಿಯ ಸಂಸದರಾಗಿರುವ ಬಿ ವೈ ರಾಘವೇಂದ್ರ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಬಹುದು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರನ್ನೂ ಗುರುತಿಸಿ ಸರಿಯಾದ ಜವಬ್ದಾರಿ ನೀಡಿ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆ ಎದುರಿಸಿದ್ದೆ ಆದರೆ ಒಂದು ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸ ಬಹುದು ಎನ್ನುವುದನ್ನು ಅರಿಯ ಬೇಕಿದೆ.
ಒಟ್ಟಿನಲ್ಲಿ ಸದಾ ಸಾವಿರಾರು ಕಾರ್ಯಕರ್ತರು ಬೆನ್ನಿಗಿರುವಂತಹ ಜನ ನಾಯಕನೊಬ್ಬ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಇನ್ನೂ ಶಿವಮೊಗ್ಗದ ಕಾಂಗ್ರೆಸ್ ಕಛೇರಿ ಮತ್ತಷ್ಟು ಕಾರ್ಯಕರ್ತರಿಂದ ತುಂಬಿ ತುಳುಕಲಿದೆ ಕಾಂಗ್ರೆಸ್ ಪಕ್ಷಕ್ಕೆ ಶ್ರೀಕಾಂತ್ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ.
ಅದೇನೆ ಇರಲಿ ಪ್ರಬಲ ಯುವ ನಾಯಕರಾಗಿರುವ ಎಂ ಶ್ರೀಕಾಂತ್ ಅವರನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರು ಇವರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು
ನಾನು ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೆನೆ, ನಿಷ್ಠಾವಂತ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತೇನೆ: ಎಂ ಶ್ರೀಕಾಂತ್
ಶಿವಮೊಗ್ಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದ ಪ್ರಬಲ ನಾಯಕ ಎಂ. ಶ್ರೀಕಾಂತ್ ಅಕ್ಟೋಬರ್ 25 ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 23 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜೆಡಿಎಸ್ ಪಕ್ಷದಲ್ಲಿ ನಿರಂತರವಾಗಿ ದುಡಿದಿದ್ದೇನೆ. ಇನ್ನೂ ಮುಂದೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಘಟನೆ ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದಲ್ಲಿ ಹಿಂದಿನಿಂದಲೂ ಹೊಂದಾಣಿಕೆ ಮಾಡಿಕೊಂಡವನು. ಪಾಲಿಕೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೆ. ನಂತರ ಮೇಯರ್, ಉಪಮೇಯರ್ ಆಯ್ಕೆಯಲ್ಲಿಯು ನಾನು ಯಾವುದೇ ಅಧಿಕಾರದ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದರು.
ನನಗೆ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಒಡನಾಟ ಹೆಚ್ಚಿದೆ. ಎರಡು ವರ್ಷಗಳ ಹಿಂದೆಯೇ ಕಾಂಗ್ರೆಸ್‌ಗೆ ಸೇರಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ. ಈದೀಗ ಅಧಿಕೃತವಾಗಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ. ಇಲ್ಲಿ ನನಗೆ ಅಧಿಕಾರ ಪಡೆಯುವ ಯಾವ ಉದ್ಧೇಶವು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುಧೀರ್ ವಿಧಾತ ,ಶಿವಮೊಗ್ಗ