ದಾವಣಗೆರೆ ಅಬಕಾರಿ ಇಲಾಖೆಯ ನಾಲ್ಕು ಮಿಕಾಗಳು ಲೋಕಾಯುಕ್ತ ಬಲೆಗೆ!!

ಲೋಕಾಯುಕ್ತ ಬಲೆಗೆ ಬಿದ್ದ ಮಿಕಾಗಳು

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತರು

ಮದ್ಯದ ಅಂಗಡಿ ಆರಂಭಿಸಲು ಪರವಾನಿಗೆ ನೀಡಿಲು ಹರಿಹರ ಮೂಲದ ಡಿ.ಜಿ.ರಘುನಾಥ ಎಂಬುವರಿಂದ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಅಬಕಾರಿ ಡಿಸಿ ಸ್ವಪ್ನ ಹಾಗೂ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಣ್ಣೆನಗರಿ ದಾವಣಗೆರೆ ನಗರದ ದೇವರಾಜ್ ಅರಸು ಬಡಾವಣೆಯಲ್ಲಿರುವ ಅಬಕಾರಿ ಕಚೇರಿಯಲ್ಲೆ ಸಿಬ್ಬಂದಿ ಎಚ್ ಎಂ ಅಶೋಕ್ ಎಂಬುವರ ಮೂಲಕ ಅಬಕಾರಿ ಡಿಸಿ ಸ್ವಪ್ನ ಲಂಚಸ್ವೀಕರಿಸುವ ಸಮಯದಲ್ಲಿ ಬಲೆಗೆ ಬಿದ್ದಿದ್ದಾರೆ. ಲಂಚದಲ್ಲಿ ಪಾಲು ಹೊಂದಿದ್ದ ಹರಿಹರ ಅಬಕಾರಿ ಇಲಾಖೆ ನಿರೀಕ್ಷಕಿ ಶೀಲಾ, ಕಚೇರಿ ಸಿಬ್ಬಂದಿ ಶ್ರೀಶೈಲಾ ಆರೋಪಿಗಳನ್ನು ಲೋಕಾಯುಕ್ತರ ತಂಡ ಬಂಧಿಸಿದ್ದಾರೆ.

ರಂಗನಾಥ್ ಎಂಬುವವರು ಹರಿಹರದ ಅಮರಾವತಿ ಏರಿಯಾದಲ್ಲಿ ಮದ್ಯದಂಗಡಿ ಆರಂಭಿಸಲು ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದರು. ಪರವಾನಿಗೆ ನೀಡಲು ಹರಿಹರ ಅಬಕಾರಿ ಇಲಾಖೆ ನಿರೀಕ್ಷಕಿ ಶೀಲಾ, ಕಚೇರಿ ಸಿಬ್ಬಂದಿ ಶ್ರೀಶೈಲಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅರ್ಜಿದಾರರಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳ ವಿರುದ್ಧ
ಭ್ರಷ್ಟಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ದಾವಣಗೆರೆ ಅಬಕಾರಿ ಇಲಾಖೆಯ ನಾಲ್ಕು ಮಿಕಾಗಳು ಲೋಕಾಯುಕ್ತ ಬಲೆಗೆ!!

ದಾವಣಗೆರೆ: ಅಬಕಾರಿ ಉಪ ಆಯುಕ್ತೆ ಸೇರಿದಂತೆ ಅಬಕಾರಿ ಇಲಾಖೆಯ ನಾಲ್ವರು ಅಧಿಕಾರಿಗಳು ಲೋಕಾಯುಕ್ತ ಖೆಡ್ಡಕ್ಕೆ ಬಿದ್ದಿದ್ದಾರೆ.
ಜಿಲ್ಲಾ ಅಬಕಾರಿ ಇಲಾಖೆಯ ದೊಡ್ಡ ಮಿಕಾ ಉಪ ಆಯುಕ್ತೆ ಸ್ವಪ್ನಕ್ಕ ಲಂಚದ ಹಣ ತೆಗೆದುಕೊಂಡು ಕನಸು ಕಾಣುವ ಮೊದಲೆ ಲೋಕಾಯುಕ್ತರ ತಂಡ ಜೈಲುದಾರಿ ತೋರಿಸಿದೆ ಇನ್ನೂ ಪ್ರಥಮ ದರ್ಜೆ ಸಹಾಯಕ ಅಶೋಕ ಎಚ್.ಎಂ., ಹರಿಹರ ಅಬಕಾರಿ ವಲಯ ಕಚೇರಿಯ ಅಬಕಾರಿ ನಿರೀಕ್ಷಕಿ ಶೀಲಾ, ದ್ವಿತೀಯ ದರ್ಜೆ ಸಹಾಯಕಿ ಶೈಲಶ್ರೀ ಅವರನ್ನು ಲೋಕಾಯುಕ್ತ ತಂಡ ವಶಕ್ಕೆ ಪಡೆದಿದೆ.

ಹರಿಹರದ ಅಮರಾವತಿ ಬಳಿ ಸಿಎಲ್- 7 ಬಾರ್ & ರೆಸ್ಟೋರೆಂಟ್ ಗೆ ಸಂಭಂದಿಸಿದಂತೆ ಪರವಾನಗಿ ಮಾಡಿಕೊಡಲು ಡಿ.ಜಿ. ರಘುನಾಥ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅಬಕಾರಿ ಅಧಿಕಾರಿಗಳು ಮೂರು ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಗರದ ದೇವರಾಜ ಅರಸು ಬಡಾವಣೆಯಲ್ಲಿ ಇರುವ ಅಬಕಾರಿ ಇಲಾಖೆ ಕಚೇರಿಯಲ್ಲಿ ಆರೋಪಿ ಅಶೋಕ್ ಎಚ್.ಎಂ. ಲಂಚ ಪಡೆಯುತ್ತಿರುವ ಸಮಯಕ್ಕೆ ಸರಿಯಾಗಿ ಲೋಕಾಯುಕ್ತ ಅಧಿಕಾರಿಗಳು ಮತ್ತು ಪೊಲೀಸರ ತಂಡ ಹಣದ ಸಮೇತ ನಾಲ್ವರನ್ನು ಬಂಧಿಸಿದ್ದಾರೆ.

ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದ ತಂಡ ನಡೆಸಿದ ಈ ದಾಳಿಯಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು, ಮಧುಸೂಧನ್, ಎಚ್.ಎಸ್. ರಾಷ್ಟ್ರಪತಿ, ಹಾವೇರಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಪಂಡಿತ್ ಅವರ ನೇತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ ಜಂಷಿದಾ ಖಾನಂ, ಧನರಾಜ್,ವೀರೇಶಯ್ಯ ,ಆಂಜನೇಯ ಮಲ್ಲಿಕಾರ್ಜುನ, ಬಸವರಾಜ, ಗಿರೀಶ್, ವಿನಾಯಕ, ಕೃಷ್ಣನಾಯ್ಕ, ಮೋಹನ್,ಲಿಂಗೇಶ್ ಕೋಟಿನಾಯ್ಕ, ಮಾಲತೇಶ ಅರಸೀಕೆರೆ, ಎಸ್.ಎಸ್.ಕಡಕೋಳ, ಮಹಾಂತೇಶ್, ಮಹಾಂತೇಶ ಕಂಬಳಿ,ಸರೋಜ, ಲಕ್ಷ್ಮವ್ವ , ಹರ್ಷಿಯಾ, ಕಾರ್ಯಾಚರಣೆಯಲ್ಲಿದ್ದರು ಎಂದು ತಿಳಿದುಬಂದಿದೆ

ಸುಧೀರ್ ವಿಧಾತ ,ಶಿವಮೊಗ್ಗ

ಶಿವಮೊಗ್ಗ ಅದ್ದೂರಿ ದಸರಾ ಕಾರ್ಯಕ್ರಮ

Leave a Reply

Your email address will not be published. Required fields are marked *

Optimized by Optimole
error: Content is protected !!