ಬಿಲ್ಡರ್ ಸಂತೋಷ್ ಮನೆಯಲ್ಲಿ ಐಟಿ ದಾಳಿಯಾಗಿ ಸಿಕ್ಕ 40 ಕೋಟಿ ರೂಪಾಯಿ ಹಣ ಮಾಜಿ ಎಂಎಲ್ಸಿ ಕಾಂತರಾಜುವಿಗೆ ಸೇರಿದ್ದು ಎಂದು ಸುದ್ದಿ ಹರಡುತ್ತಿರುವಾಗಲೆ. ಕಾಂತರಾಜು ಅವರು
ನನಗೂ ಬಿಲ್ಡರ್ ಸಂತೋಷ್ ಮನೆಯಲ್ಲಿ ಸಿಕ್ಕ ಹಣಕ್ಕೂ ಯಾವುದೇ ಸಂಬಂಧ ಇಲ್ಲ. ಆತ ಯಾರೂ ಅನ್ನೋದು ನನಿಗೆ ಗೊತ್ತಿಲ್ಲ. ನನಗೆ ಅಣ್ಣ ತಮ್ಮಂದಿರೂ ಯಾರು ಇಲ್ಲ ಎಂದು ಹೇಳಿದ್ದಾರೆ?
ಬೆಂಗಳೂರು: ಬಿಲ್ಡರ್ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಮಾಜಿ ಎಂಎಲ್ಸಿ ಕಾಂತರಾಜು ಸುದ್ದಿ ಹರಡುತ್ತಿದ್ದ ಹಾಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕೇತಮಾರನಹಳ್ಳಿಯಲ್ಲಿರುವ ಬಿಲ್ಡರ್ ಸಂತೋಷ್ ಕೃಷ್ಣಪ್ಪ ಒಡೆತನದ ಫ್ಲ್ಯಾಟ್ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದರು ದಾಳಿ ಸಮಯದಲ್ಲಿ ಮನೆಯಲ್ಲಿ ಸುಮಾರು 40 ಕೋಟಿ ರೂಪಾಯಿಗೂ ಅಧಿಕ ನಗದು ಹಣ ಮತ್ತು ಅಪಾರ ಪ್ರಮಾಣದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಐಟಿ ದಾಳಿ ವೇಳೆ ಈ ಹಣ ಕಾಂತರಾಜು ಅವರಿಗೆ ಸೇರಿದ್ದು ಎಂದು ಸಂತೋಷ್ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಾಂತರಾಜು ಆಪ್ತರನ್ನ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಬಿಲ್ಡರ್ ಸಂತೋಷ್ ಕೃಷ್ಣಪ್ಪ ಐಟಿ ದಾಳಿಯಲ್ಲಿ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆ ಕಾಂತರಾಜು ಸ್ಪಷ್ಟನೆ ನೀಡಿದ್ದಾರೆ. ಸಂತೋಷ್ ಮನೆಯಲ್ಲಿ ಸಿಕ್ಕ ಹಣಕ್ಕೂ ನಗೂ ಸಂಬಂಧ ಇಲ್ಲ. ನನಗೆ ಯಾವ ಅಧಿಕಾರಿಗಳು ಇನ್ನೂ ಫೋನ್ ಮಾಡಿಲ್ಲ. ಹಬ್ಬ ಇರೋದರಿಂದ ನಿನ್ನೆಯಿಂದ ನಾನು ನೆಲಮಂಗಲದ ಮನೆಯಲ್ಲಿಯೇ ಇದ್ದೇನೆ ಎಂದು ಹೇಳಿದ್ದಾರೆ.
ಸಂತೋಷ್ ಯಾರೆಂದು ಸಹ ನನಗೆ ಗೊತ್ತಿಲ್ಲ,
ಬಿಲ್ಡರ್ ಸಂತೋಷಿಗೂ ನನಗೂ ಸಂಬಂಧ ಇಲ್ಲ. ಆತ ಯಾರೂ ಅನ್ನೋದು ಗೊತ್ತಿಲ್ಲ. ನನಗೆ ಅಣ್ಣ ತಮ್ಮಂದಿರೂ ಯಾರು ಇಲ್ಲ ನಮ್ಮ ತಂದೆ-ತಾಯಿಗೇ ನಾನೊಬ್ಬನೇ ಮಗ. ಅಲ್ಲಿ ಯಾರು ಹೋಗಿದ್ದಾರೆ ಎನ್ನುವುದು ನನಗೆ ಸರಿಯಾಗಿ ಮಾಹಿತಿ ಇಲ್ಲ ಎಂದ್ದಿದ್ದಾರೆ.
ನನಗೆ ಯಾವುದೇ ಅಧಿಕಾರಿಗಳಿಂದ ಕರೆ ಬಂದಿಲ್ಲ. ಅನಾವಶ್ಯಕವಾಗಿ ನನ್ನ ಹೆಸರನ್ನು ಈ ಪ್ರಕರಣದಲ್ಲಿ ತಳಕು ಹಾಕಲಾಗಿದೆ. ಯಾರು ಹೀಗೆ ಮಾಡ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ನನಗೆ ಐಟಿ ದಾಳಿಯ ಬಗ್ಗೆಯೇ ಗೊತ್ತಿರಲಿಲ್ಲ ಮಾಧ್ಯಮಗಳಲ್ಲಿ ನೋಡಿದ ಮೇಲೆ ಗೊತ್ತಾಗಿದ್ದು. ಸುಖ ಸುಮ್ಮನೆ ನನ್ನ ಹೆಸರನ್ನು ತಳಕು ಹಾಕಲಾಗಿದೆ ಕೆಲವೇ ಗಂಟೆಗಳಲ್ಲಿಯೇ ಸುದ್ದಿಗೋಷ್ಠಿ ಕರೆದು ಹೇಳುವೆ. ಇನ್ನೂ ನಿಮ್ಮ ಕಾರೊಂದು ಸಂತೋಷ್ ಫ್ಲ್ಯಾಟ್ ಬಳಿಯಲ್ಲಿತ್ತು ಅಲ್ಲವಾ ಎನ್ನುವ ಪ್ರಶ್ನೆಗೆ ಕಾಂತರಾಜು ಉತ್ತರ ನೀಡಿಲ್ಲ ಹಾಗಾದರೆ ಬಿಲ್ಡರ್ ಸಂತೋಷ ಮನೆಯ ಬಳಿ ಇದ್ದ ಕಾರು ಯಾರದಿರಬಹುದು ಎನ್ನುವ ಪ್ರಶ್ನೆ ಉಧ್ಭವವಾಗಿದೆ? ಎಲ್ಲದಕ್ಕೂ ಉತ್ತರ ಸದ್ಯದಲ್ಲೇ ಹೊರ ಬರಲಿದೆ.
ಐಟಿ ದಾಳಿ ಮತ್ತೊಂದು ಭರ್ಜರಿ ಬೇಟೆ: ಬಿಲ್ಡರ್ ಮನೆಯಲ್ಲಿ ಇತ್ತು 40 ಕೋಟಿ ರೂಪಾಯಿ!!
ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಮಂಚದ ಕೆಳಗೆ 42 ಕೋಟಿ ನಗದು ಪತ್ತೆ ಮಾಡಿದ್ದ ಐಟಿ ಅಧಿಕಾರಿಗಳು ಎರಡೇ ದಿನ ಮತ್ತೊಂದು ಭರ್ಜರಿ ಬೇಟೆ ಆಡಿದ್ದಾರೆ.
ಎರಡೇ ದಿನದಲ್ಲಿ ಐಟಿ ಅಧಿಕಾರಿಗಳು ಮತ್ತೊಂದು ಪಕ್ಕಾ ಮಾಹಿತಿಯ ಆಧಾರ ಮೇಲೆ ಭರ್ಜರಿ ಬೇಟೆ ಆಡಿದ್ದಾರೆ. ಗುತ್ತಿಗೆದಾರ ಸಂತೋಷ್ ಮನೆಯಲ್ಲಿ 40 ಕೋಟಿ ನಗದು ಪತ್ತೆಯಾಗಿದೆ!
ಈ ಮೂಲಕ ಥಟಿ ಅಧಿಕಾರಿಗಳಿಂದ ಬೆಂಗಳೂರಿನಲ್ಲಿ ಮತ್ತೊಂದು ಭರ್ಜರಿ ಬೇಟೆ ಮಾಡಿದಂತಾಗಿದೆ, ರಾಜಾಜಿನಗರ ಕೇತಮಾರನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲ್ಯಾಟ್ ನಲ್ಲಿ 40 ಕೋಟಿ ರೂ. ಪತ್ತೆಯಾಗಿದ್ದು ಇದು ಬಿಲ್ಡರ್ ಸಂತೋಷ್ ಮನೆಯಾಗಿದ್ದು ಹಣ ಮಾತ್ರ ವಿಧಾನ ಪರಿಷತ್ ಮಾಜಿ ಸದಸ್ಯರೊಬ್ಬರಿಗೆ ಸೇರಿದ್ದು ಎನ್ನುವ ಮಾತು ಕೇಳಿಬರುತ್ತಿದೆ!! ಐಟಿ ಅಧಿಕಾರಿಗಳು ಉದ್ಯಮಿ ಸಂತೋಷ್ ವಿಚಾರಣೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವೆರೆಸಿದ್ದಾರೆ.
ಸುಧೀರ್ ವಿಧಾತ ,ಶಿವಮೊಗ್ಗ