ದಟ್ಟ ಕಾಡಿನಲ್ಲಿ ಕಾಣೆಯಾದ ಹುಡುಗ!? ಎಂಟು ದಿನದ ನಂತರ ಪ್ರತ್ಯಕ್ಷ, ನಿಟ್ಟುಸಿರು ಬಿಟ್ಟ ಹೆತ್ತವರು

ಕಾಡಿನಲ್ಲಿ ಕಾಣೆಯಾಗಿದ್ದ ವಿವೇಕಾನಂದ

ಇದು ವಿಚಿತ್ರ ಎನಿಸಿದರೂ ಸತ್ಯ ಕಳೆದ ಎಂಟು ದಿನಗಳ ಹಿಂದೆ ಕುಂದಾಪುರ ತಾಲೂಕಿನ ಅಮಾಸೆ ಬೈಲ್ ಗ್ರಾಮಾ ಪಂಚಾಯತಿ ವ್ಯಾಪ್ತಿಯ ತೊಂಬಟ್ಟು ಗ್ರಾಮದ ವಿವೇಕಾನಂದ ಎನ್ನುವ ಸುಮಾರು 27 ವರ್ಷದ ಹುಡುಗನೊಬ್ಬ ಎಂದಿನಂತೆ ದನಗಳಿಗೆ ಸೊಪ್ಪು ತರಲು ತನ್ನ ಮನೆಯ ಮೂರು ಸಾಕು ನಾಯಿಯೊಂದಿಗೆ ಹತ್ತಿರದ ಕಾಡಿನೆಡೆಗೆ ಹೆಜ್ಜೆ ಹಾಕೀದ್ದಾನೆ ಅದೇನೊ ಸ್ವಲ್ಪ ದೂರ ಸಾಗುತ್ತಿದ್ದಂತೆ ಎರಡು ನಾಯಿಗಳು ಮನೆಯ ಕಡೆಗೆ ವಾಪಸ್ ಬಂದರೆ ಒಂದು ನಾಯಿ ಮಾತ್ರ ವಿವೇಕನ ಜೋತೆಗೆ ಹೆಜ್ಜೆ ಹಾಕಿದೆ…
ವಿವೇಕ್ ಕಾಡಿನೊಳಗೆ ಹೊದ ಸ್ವಲ್ಪ ಸಮಯದ ನಂತರ ಕೆಲವು ದಿನಗಳಿಂದ ಕ್ಷೀಣಿಸಿ ಹೋದ ಮಳೆರಾಯ ಇದ್ದಕ್ಕಿದ್ದಂತೆ ಅಬ್ಬರಿಸಿದ್ದಾನೆ….. ಅಷ್ಟೋತ್ತಿಗಾಗಲೆ ಸುಮಾರು ಎರಡು ಕಿಲೊ ಮೀಟರ್ ದೂರ ಕಾಡಿನೊಳಗೆ ಹೆಜ್ಜೆ ಹಾಕಿದ ವಿವೇಕ ಮತ್ತು ಅತನ ಜೊತೆಯಲ್ಲಿ ಸಾಗಿದ ನಾಯಿ ಮಳೆಯಿಂದ ರಕ್ಷಿಸಿಕೊಳ್ಳಲು ಕಾಡಿನ ಮಧ್ಯೆ ಇದ್ದ ಬಂಡೆಯ ತಳಗೆ ಆಶ್ರಯ ಪಡೆದಿದ್ದಾನೆ.

ಕತ್ತಲು ಅವರಿಸುತ್ತಿದ್ದಂತೆ ಮಳೆ ಕೂಡ ಅಬ್ಬರಿಸಿ ನಿಂತಿದೆ ಅಷ್ಟೋತ್ತಿಗಾಗಲೆ ಗಾಬರಿಗೊಂಡಿದ್ದ ವಿವೇಕ್ ಮನೆಯ ಹಾದಿ ತಪ್ಪಿದ್ದಾನೆ!? ಮೊದಲೇ ಪಶ್ಚಿಮ ಘಟ್ಟದ ತಪ್ಪಲು ಬಾರಿ ಗಾತ್ರದ ಮರಗಳ ಸಾಲು ಮನೆಯಲ್ಲಿ ಇದ್ದಂತಹ ನಾಯಿ‌ ಜಾನುವಾರುಗಳನ್ನು ಹೊತ್ತೈಯುವಂತಹ ಚಿರತೆ ಮತ್ತು ಹುಲಿಗಳು ಈ ಕಾಡಿನಲ್ಲಿ ಸಾಕಷ್ಟಿವೆ ಇವಲ್ಲೆದರ ನಡುವೆ ಮನೆಯ ಹಾದಿತಪ್ಪಿದ ವಿವೇಕ ಮತ್ತು ಆತನ ನಾಯಿ ರಾತ್ರಿ ಅಲ್ಲೆ ಕಳೆದಿದ್ದಾರೆ? ಮನೆಯ ಮಗ ಕಾಡಿಗೆ ಹೋಗಿ ಮನೆಗೆ ಬಾರದೆ ಇದ್ದಾಗ ಮನೆಯವರು ಗಾಬರಿಯಾಗಿದ್ದಾರೆ ಜೊತೆಗೆ ಕತ್ತಲು ಅವರಿಸಿದೆ ಅ ಕತ್ತಲಲ್ಲು ವಿವೇಕನ ಮನೆಯವರ ಜೊತೆಗೆ ಅಕ್ಕಪಕ್ಕದ ಮನೆಯವರು ಸೇರಿ ಎಷ್ಟೇ ಹುಡುಕಾಡಿದರು ವಿವೇಕನ ಸುಳಿವಿಲ್ಲ ಅಷ್ಟೋತ್ತಿಗಾಗಲೆ ಸುದ್ದಿ ಠಾಣೆಯ ಮೆಟ್ಟಿಲೇರಿತ್ತು ಮರುದಿನ ಪೋಲಿಸರೊಂದಿಗೆ ಸುಮಾರು 500 ಜನ ಅಕ್ಕಪಕ್ಕದ ಗ್ರಾಮದವರು ಸೇರಿ ವಿವೇಕನಿಗಾಗಿ ಸಂಪೂರ್ಣ ಕಾಡನ್ನೆ ಜಾಲಾಡಿದರು ಸುಳಿವಿಲ್ಲ. ವಿವೇಕನಿಗಾಗಿ ನಿತ್ಯ ನೂರಾರು ಜನ ಹುಡುಕಾಟ ನೆಡೆಸಿದ್ದಾರೆ ವಿವೇಕನ ಸಣ್ಣ ಸುಳಿವು ಸಿಗಲಿಲ್ಲ.ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ ಹೀಗೆ ಎಂಟು ದಿನಕಳೆದಿದೆ ಇನ್ನೇನು ಆಗುಂಬೆಯ ಕಾಡನ್ನು ಶೋಧಿಸಲು ಗ್ರಾಮದವರು ಮುಂದಾಗಿದ್ದರು ಅಷ್ಟೋತ್ತಿಗೆ ವಿವೇಕ ತನ್ನ ನಾಯಿಯೊಂದಿಗೆ ಸುಮಾರು ಎರಡು ಕಿಲೊ ಮೀಟರ್ ದೂರದಲ್ಲಿ ಕಾಡಿನಲ್ಲಿ ಹುಡುಕಾಡುತ್ತಿದ್ದವರಿಗೆ ಕಾಣಿಸಿಕೊಂಡಿದ್ದಾನೆ! ತಕ್ಷಣವೇ ಆತನನ್ನು ಕಂಡು ನಿಟ್ಟುಸಿರು ಬಿಟ್ಟ ಮನೆಯವರು ಮತ್ತು ಗ್ರಾಮದ ಜನ ಆತನನ್ನು ಕರೆದುಕೊಂಡು ಮನೆಗೆ ಬಂದಿದ್ದಾರೆ ಸುಮಾರು ಎಂಟು ದಿನಗಳ ಕಾಲ ದಟ್ಟ ಕಾಡಿನಲ್ಲಿ ಬದುಕುಸಾಗಿಸಿದ ವಿವೇಕ ಊಟ ಆಹಾರವಿಲ್ಲದೆ ‌ಬಳಲಿ ಹೋಗಿದ್ದಾನೆ ಜೋತೆಗೆ ಆತನ ನಾಯಿ ಕೂಡ ಬಳಲಿದೆ..! ಎಂಟು ದಿನಗಳ ವರೆಗೆ ವಿವೇಕ ಬರಿ ನೀರು ಕುಡಿದೆ ಜೀವಿಸಿದ್ದಾನೆ.
ಒಟ್ಟಿನಲ್ಲಿ ವಿವೇಕನ ಪ್ರಕರಣಕ್ಕೊಂದು ಬಿಗ್‌ ರೀಲಿಫ್ ಸಿಕ್ಕಿದೆ ಕಾಡಿನಲ್ಲಿ ಕಾಣೆಯಾದ ಮನೆಯ ಮಗ ಮರಳಿದ್ದಾನೆ ನಿತ್ರಾಣನಾದ ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!