ಶಿವಮೊಗ್ಗ: ಸಕ್ರೆಬೈಲ್ ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಹಣಕ್ಕೆ ಬೇಡಿ ಇಟ್ಟ ಖದೀಮರು.!
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ :ಶಿವಮೊಗ್ಗ ಏಳೆಂಟು ಕಿಲೊ ಮೀಟರ್ ದೂರವಿರುವ ತುಂಗಾನಗರ ಠಾಣಾ ವ್ಯಾಪ್ತಿಯ ಸರಹದ್ದಿನ ಸಕ್ರೆಬೈಲ್ ನಲ್ಲಿ ಮೀನುಟದ ಹೊಟೇಲ್‌ನಲ್ಲಿ ಯುವಕ,ಯುವತಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡ ನಾಲ್ವರು ಖದೀಮರ ತಂಡ ಹಣಕ್ಕೆ ಅ ಜೋಡಿಗಳಿಗೆ ಬೆದರಿಸಿ ಬೇಡಿಕೆ ಇಟ್ಟಿರುವ ಆರೋಪದ ಸಂಬಂಧ ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವಕ ಮತ್ತು ಯುವತಿ ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್ ಒಂದಕ್ಕೆ ಊಟಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.
ಯುವಕ ಯುವತಿ ಊಟದ ಕೊಠಡಿಯಲ್ಲಿ ಕುಳಿತಿದ್ದರಂತೆ ಯುವಕ ಬಿಯರ್ ತರಿಸಿದ್ದನಂತೆ. ಆ ಸಂದರ್ಭ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ಯುವಕ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಯುವಕ ಮತ್ತು ಯುವತಿಯನ್ನು ಬಲವಂತವಾಗಿ ಆಟೋದಲ್ಲಿ ಶಿವಮೊಗ್ಗಕ್ಕೆ ಕರೆತಂದು ವಿವಿಧೆಡೆ ಸುತ್ತಾಡಿಸಿದ್ದಾರೆ.
ಹಣ ಕೊಡದೆ ಇದ್ದರೆ ತೆಗೆದಿರುವ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಲಾಗಿದೆ. ಈ ವೇಳೆ ಯುವತಿಯ ಬಳಿ ಇದ್ದ 24 ಸಾವಿರ ರೂ ಹಣ, ಯುವಕನ ಮೊಬೈಲ್‌ನಿಂದ ಗೂಗಲ್ ಪೇ ಮೂಲಕ 1500 ರೂ. ಹಣ ವರ್ಗಾಯಿಸಿ ಕೊಂಡಿದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವಕ ಮತ್ತು ಯುವತಿಯನ್ನು ಆಟೋದಲ್ಲಿ ಕರೆತಂದು ಎಂಆರ್‌ಎಸ್ ಸರ್ಕಲ್ ಬಳಿ ಬಿಟ್ಟು, ಅವರ ಬೈಕ್ ಕೊಟ್ಟು ಕಳುಹಿಸಲಾಗಿದೆ. ರಾತ್ರಿಯೊಳಗೆ ಒಂದೂವರೆ ಲಕ್ಷ ರೂ. ಹಣ ಕೊಡದೆ ಇದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಒಡ್ಡಿದಾರೆ. ಎಂದು ಆರೋಪಿಸಲಾಗಿದೆ.
ಯುವಕನಿಗೆ ಕರೆ ಮಾಡಿದ್ದ ಅಪರಿಚಿತರು ಹಣ ತಂದು ಕೊಡುವಂತೆ ಬೆದರಿಸಿದ್ದರು. ಆರು ಸಾವಿರ ರೂ. ಹಣದೊಂದಿಗೆ ಯುವಕ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಹೋಗಿದ್ದ. ಆಟೋದಲ್ಲಿ ಬಂದ ಯುವಕರಿಗೆ ಹಣ ಆರು ಸಾವಿರ ರೂ. ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಒಂದೂವರೆ ಲಕ್ಷ ರೂ. ಹಣ ನೀಡುವಂತೆ ಆಗ್ರಹಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಲಾಗಿದೆ.
ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸಕ್ರೆಬೈಲ್, ಗಾಜನೂರು ಸುತ್ತ ಮುತ್ತ ಮೀನುಟದ ಹೊಟೆಲ್ ಗಳು ನಾಯಿ ಅಣಬೆಯಂತೆ ಒಂದರ ಪಕ್ಕ ಒಂದರಂತೆ ತಲೆಎತ್ತಿ ನಿಂತಿವೆ.! ಇವುಗಳಲ್ಲಿ ಕೆಲವೊಂದು ಪಾರ್ಟ್ ಟೈಮ್ ಪ್ರೇಮಿಗಳಿಗೆ ಒಂದು ರೀತಿಯಲ್ಲಿ ಅಡ್ಡವಾಗಿದೆ.!ಅದರಲ್ಲೂ ಹೆಂಡ ಕುಡುಕರ ಕೇಂದ್ರವಾಗಿದೆ. ಇಲ್ಲಿ ರಾತ್ರಿ ಹಗಲೆನ್ನದೆ ಕೆಲವು ಹೊಟೆಲ್ ಗಳಲ್ಲಿ ಹೆಂಡ ಬಿಕರಿ ಯಾಗುತ್ತದೆ.ನಗರದಲ್ಲಿ ನೆಡೆಯುವ ಸಾಕಷ್ಟು ಕ್ರೈಮ್ ಗಳಿಗೆ ಡೀಲ್ ಕುದುರುವುದು ಇಲ್ಲಿಯ ಕೇಲವು ಹೊಟೆಲ್ ಗಳಲ್ಲಿ.!ಇತ್ತೀಚೆಗಂತೂ ಇಲ್ಲಿಯ ಕೆಲವು ಹೊಟೆಲ್ ಗಳ ವಾತವರಣವೆ ಕುಲಗೆಟ್ಟು ಹೋಗಿದ್ದು.ಒಂದು ಕಡೆ ಪ್ರೀತಿ ಪ್ರೇಮದ ಹೆಸರಿನಲ್ಲಿ ತೆವಲು.! ಇನ್ನೊಂದು ಮಗ್ಗುಲಲ್ಲಿ ಹೆಂಡದ ಅಮಲೆರಿಸಿಕೊಳ್ಳುವವರ ತಿಮುರು ಶುದ್ಧ ಮೀನುಟದ ಹೊಟೆಲ್ ಗಳನ್ನು ಗಬ್ಬೆದ್ದು ನಾರುವಂತೆ ಮಾಡಿದೆ.ತುಂಗಾನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಖಡಕ್ ಅಧಿಕಾರಿ ಕೆ ಟಿ ಗುರುರಾಜ್ ಇಂತಹ ಹೊಟೆಲ್ ಗಳಲ್ಲಿ ಹೆಂಡಮಾರುವುದಕ್ಕೆ ಕಡಿವಾಣ ಹಾಕಿದರೆ ಶಿವಮೊಗ್ಗ ನಗರದಲ್ಲಿ ನೆಡೆಯುವ ಒಂದಷ್ಟು ಕ್ರೈಂ ಬೆಳವಣಿಗೆಗೆ ಬ್ರೇಕ್ ಹಾಕಬಹುದಾಗಿದೆ.