ಹೈದರಾಬಾದ್: ನಡುರಸ್ತೆಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ.! ಆಘಾತಕಾರಿ ವಿಡಿಯೋ ವೈರಲ್.!!
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಹೈದರಾಬಾದ್:ಹಾಡಹಗಲೆ ಹೈದರಾಬಾದ್‌ನ ಮೆಡ್ಚಲ್ ಪ್ರದೇಶದಲ್ಲಿ ಭಾನುವಾರ ನಡೆದ ಬರ್ಬರ ಹತ್ಯೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಸುಮಾರು 25 ವರ್ಷದ ಯುವಕನೊಬ್ಬನನ್ನು ನಡು ಹಾದಿಯಲ್ಲೆ ಇಬ್ಬರು ಹಂತಕರು ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಕೊಲೆಯಾದ ಯುವಕ ಉಮೇಶ್ ಎಂದು ತಿಳಿದುಬಂದಿದೆ.!
ಉಮೇಶ್ ಎಂಬ ಯುವಕ ಕಾಮರೆಡ್ಡಿ ಜಿಲ್ಲೆಯ ಮಚಾ ರೆಡ್ಡಿ ಗ್ರಾಮದ ನಿವಾಸಿಯಾಗಿದ್ದು, ಮೆಡ್ಚಲ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನಂತೆ.ಭಾನುವಾರ ಬೆಳಿಗ್ಗೆ ಇಬ್ಬರು ಹಂತಕರು ಆತನನ್ನು ಹಿಂಬಾಲಿಸಿ ಬಂದು ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಈ ಭೀಕರ ಅಪರಾಧದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸಾರ್ವಜನಿಕರ ಸಮ್ಮುಖದಲ್ಲೆ ನಡುರಸ್ತೆಯಲ್ಲಿ ಈ ಹತ್ಯೆ ನಡೆದಿದ್ದು,ಸ್ಥಳದಲ್ಲಿದ್ದ ಸಾರ್ವಜನಿಕರು, ವಾಹನ ಸವಾರರಲ್ಲಿ ಭಯ ಹುಟ್ಟಿಸಿದೆ. ಕೊಲೆ ಮಾಡಿದ ನಂತರ ಇಬ್ಬರು ಸ್ಥಳದಿಂದ ನಡೆದುಕೊಂಡು ಹೋಗಿ ಎಸ್ಕೇಪ್ ಆಗಿದ್ದಾರೆ.
ಮೆಡ್ಚಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಹಂತಕರ ಬಂಧನಕ್ಕೆ ಭಲೇ ಬಿಸಿದ್ದಾರೆ.ಈ ಹತ್ಯೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೊಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಿದಾಡುತ್ತಿದೆ.
ಇನ್ನೊಂದು ವೈರಲ್ ವಿಡಿಯೋದಲ್ಲಿ, ಉಮೇಶ್ ಅವರ ದೇಹ ರಸ್ತೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಮತ್ತು ಅವರ ಕುಟುಂಬಸ್ಥರು ದುಃಖಿಸುತ್ತಿರುವುದು ಕಂಡುಬಂದಿದೆ.
ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಂತಕರು ಸಿಕ್ಕ ನಂತರವಷ್ಟೆ ಹತ್ಯೆ ಹಿಂದಿನ ಅಸಲಿ ಕಥೆ ಹೋರ ಬಿಳಲಿದೆ.