ಗಂಗಾವತಿಯ ಇಸ್ಪೀಟ್ ಅಡ್ಡೆಯ ಮೇಲೆ ಪೋಲಿಸರ ದಾಳಿ: ಬರೊಬ್ಬರಿ ಹದಿನೈದುವರೆ ಲಕ್ಷ ರೂಪಾಯಿ ಜಪ್ತಿ
ಗಂಗಾವತಿ: ತಾಲ್ಲೂಕಿನ ತಿರುಮಲಾಪುರ ಗ್ರಾಮದ ರಾಮಕೃಷ್ಣರೆಡ್ಡಿ ರೆಸ್ಟೋರೆಂಟ್ ಸಮೀಪದ ಇಸ್ಪೀಟ್ ಅಡ್ಡೆಯ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಹದಿನೈದುವರೆ ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ, ಸ್ಥಳದಲ್ಲಿ ಇದ್ದಂತಹ ಒಂದು ಟೊಯೊಟಾ ಕಾರನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ರೆಸ್ಟೋರೆಂಟ್ ಸಮಿಪದ ಅಡ್ಡ ಒಂದರಲ್ಲಿ ಜುಗಾರಿ ದುನಿಯಾ ಗರಿಬಿಚ್ಚಿದ ಮಾಹಿತಿ ತಿಳಿದ ಗಂಗಾವತಿಯ ಗ್ರಾಮಾಂತರ ಪೋಲಿಸರು ಅಲರ್ಟ್ ಆಗಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೋಲಿಸರ ತಂಡ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಸಂಧರ್ಭದಲ್ಲಿ ಹಣದ ಸಮೇತ ಸಿಕ್ಕಿಬಿದ್ದ ಖತರ್ನಾಕ್ ಇಸ್ಪೀಟ್ ಫ್ಲಯರ್ ಗಳನ್ನು ಬಂಧಿಸಿದ್ದಾರೆ.
ಇಸ್ಪೀಟ್ ಅಡ್ಡೆ ತಲೆಎತ್ತಿ ನಿಂತದ್ದು ತಿರುಮಲಾಪುರ ಗ್ರಾಮದ ರಾಮಕೃಷ್ಣರೆಡ್ಡಿ ರೆಸ್ಟೋರೆಂಟಿನ ಸಮೀಪದ. ಇಸ್ಪೀಟ್ ಜೂಜಾಟದ ಖಚಿತ ಮಾಹಿತಿ ಮೇರೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪಿಐ ಮಂಜುನಾಥ ನೇತೃತ್ವದಲ್ಲಿನ ತಂಡ ದಾಳಿ ನಡೆಸಿದೆ.
ಈ ವೇಳೆ ಏಳು ಜನ ಆರೋಪಿಗಳನ್ನ ಬಂಧಿಸಿ, ಜಾಮೀನನ ಮೇಲೆ ಹೊರಬಿಡಲಾಗಿದೆ.
ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.