ಮಧ್ಯಪ್ರದೇಶದ ಬಿಜೆಪಿ ಶಾಸಕ ಸಮಂದರ್ ಪಟೇಲ್ ಬಿಜೆಪಿ ತೊರೆದು 1200 ಕಾರುಗಳಲ್ಲಿ 5000 ಸಾವಿರ ಜನ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆ!

ಬಿಜೆಪಿ ತೊರೆದು1200 ಕಾರುಗಳಲ್ಲಿ 5000 ಸಾವಿರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಬಂದು ಕೈ ಸೇರ್ಪಡೆ!

ಬರೋಬ್ಬರಿ 1200 ಕಾರುಗಳಲ್ಲಿ 5000 ಸಾವಿರಕ್ಕೂ ಅಧಿಕ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಬಿಜೆಪಿ ನಾಯಕ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರು ತಮ್ಮ ಬೆಂಬಲಿಗರ ಜೊತೆ ರಸ್ತೆ ಉದ್ದಕ್ಕೂ ಮೆರವಣಿಗೆ ಮಾಡಿಕೊಂಡು ಬಲ ಪ್ರದರ್ಶನ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

ಮಧ್ಯಪ್ರದೇಶ: ಕರ್ನಾಟಕದ ರಾಜಕೀಯದಲ್ಲಿ ಆಪರೇಷನ್ ಹಸ್ತ ಮಾಡಲು ನಾಯಕರು ರೆಡಿಯಾಗಿದ್ದಾರೆ ಆದರೆ ಆಪರೇಷನ್ ಗೆ ಇನ್ನೂ ಮೊಹರ್ತ ಕೂಡಿಬಂದಿಲ್ಲ? ಆದರೆ ನಿತ್ಯ ಆಪರೇಷನ್ ಕೂಗು ಜೋರಾಗಿ ಕೇಳಿಬರುತ್ತಿದೆ. ಆದರೆ ಇದೇ ಸಮಯದಲ್ಲಿ ದೂರದ ಮಧ್ಯಪ್ರದೇಶದಲ್ಲಿ ಮಾತ್ರ ಆಪರೇಷನ್ ಹಸ್ತ ಕಾರ್ಯಚರಣೆ ನೆಡೆದು ಹೋಗಿದೆ! ಆಡಳಿತಾರೂಢ ಬಿಜೆಪಿಗೆ ದೊಡ್ಡ ಮಟ್ಟದ ಶಾಕ್ ಕಾಂಗ್ರೆಸ್ ಕೊಟ್ಟಿದೆ. ಆಪರೇಷನ್ ಹಸ್ತ ಕಾರ್ಯಚರಣೆಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯ ಪ್ರಬಲ ನಾಯಕನನ್ನೇ ಸೆಳೆದುಕೊಂಡಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪರಮಾಪ್ತರಾಗಿ ಗುರಿತಿಸಿಕೊಂಡಿದ್ದ ಸಮಂದರ್ ಪಟೇಲ್‌ರನ್ನೆ ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಮಂದರ್ ಪಟೇಲ್ ಬರೋಬ್ಬರಿ 1200 ಕಾರುಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಧ್ಯ ಪ್ರದೇಶ ಕಾಂಗ್ರೆಸ್ ಕಚೇರಿಗೆ ಮೆರವಣಿಗೆಯಲ್ಲಿ 5000 ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಆಗಮಿಸಿ ಕಾಂಗ್ರೆಸ್ ನಾಯಕರ‌ ಸಮ್ಮುಖದಲ್ಲಿ ಸಮಂದರ್ ಪಟೇಲ್ ಕಾಂಗ್ರೆಸ್ ಸೇರಿದ್ದಾರೆ.
ಬಿಜೆಪಿ ತೊರೆದ
ಮಧ್ಯಪ್ರದೇಶದ ಬಿಜೆಪಿ ಶಾಸಕ ಸಮಂದರ್ ಪಟೇಲ್ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ತಮ್ಮ ಕ್ಷೇತ್ರ ಜವಾದ್‌ನಿಂದ ಭೋಪಾಲ್‌ ವರೆಗೂ 1200 ಕಾರುಗಳಲ್ಲಿ ಬೆಂಬಲಿಗರೊಂದಿಗೆ ಮಧ್ಯಪ್ರದೇಶ ಬಿಜೆಪಿ ಕಚೇರಿಗೆ ಬಂದು, ರಾಜೀನಾಮೆ ಸಲ್ಲಿಸಿದ ನಂತರ ಅಲ್ಲಿಂದ ನೇರವಾಗಿ ತಮ್ಮ ಬೆಂಬಲಿಗರೊಂದಿಗೆ 1200 ಕಾರುಗಳೊಂದಿಗೆ ಕಾಂಗ್ರೆಸ್ ಕಚೇರಿಗೆ ತೆರಳಿ, ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಮಂದರ್ ಪಟೇಲ್ ಯಾರು?
ಸಮಂದರ್ ಪಟೇಲ್ ಮಧ್ಯಪ್ರದೇಶದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು, ಅದರಲ್ಲೂ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಪರಮಾಪ್ತರಲ್ಲಿ ಪ್ರಮುಖರು. ಜೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಿದ್ದಾಗ, ಸಮಂದರ್ ಪಟೇಲ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ನಾನು ಯಾವುದೇ ಷರತ್ತುಗಳಿಲ್ಲದೆ ಪಕ್ಷದ ಸಿದ್ಧಾಂತ, ತತ್ವಗಳನ್ನು ಒಪ್ಪಿ, ಬೇಷರತ್ತಾಗಿ ಮರಳಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಕಮಲನಾಥ್ ಹೇಳಿದ್ದಾರೆ. ಅವರ ಸತ್ಯವು ಅವರನ್ನು ಇಲ್ಲಿಗೆ ಕರೆತಂದಿದೆ. ಇದೀಗ ಅವರು ತಮ್ಮ ಕ್ಷೇತ್ರದ ಮತದಾರರಿಗೆ ಈ ಸತ್ಯವನ್ನು ಹೇಳುತ್ತಾರೆ ಎಂಬ ಸಂಪೂರ್ಣ ನಂಬಿಕೆ ಇದೆ ಎಂದು ಕಮಲನಾಥ್ ಮಾದ್ಯಮದವರ ಮುಂದೆ ಹೇಳಿದ್ದಾರೆ.
ಅಂದಹಾಗೆ ಸಮಂದರ್ ಪಟೇಲ್ ಒಬ್ಬರೇ ಅಲ್ಲ, ಈ ಹಿಂದೆ ಹಲವು ಸಿಂಧ್ಯಾ ಆಪ್ತರು ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ಸಿಗೆ ಈಗಾಗಲೇ ಸೇರ್ಪಡೆ ಗೊಂಡಿದ್ದಾರೆ. ಶಿವಪುರಿ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಕೋಲಾರಸ್ ಪ್ರದೇಶದಲ್ಲಿ ಸಿಂಧ್ಯಾ ಅವರ ಸಹಯೋಗಿ ಬೈಜನಾಥ್ ಸಿಂಗ್ ಯಾದವ್, ಸಿಂಧ್ಯಾ ಮತ್ತೋರ್ವ ಆಪ್ತ ರಾಕೇಶ್ ಗುಪ್ತಾ ಸೇರಿದಂತೆ ಹಲವರು ಈಗಾಗಲೇ ಬಿಜೆಪಿ ತೊರೆದಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!