ಇಪ್ಪತೈದರಿಂದ ಮೂವತ್ತು ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷಗಿರಿ ಪಟ್ಟ?: ಕೆಲವು ಪ್ರಾಮಾಣಿಕ ಕಾರ್ಯಕರ್ತರಿಗೂ ಅಧ್ಯಕ್ಷ ಗಿರಿ.! ಶೀಘ್ರದಲ್ಲೇ ಸಭೆ
ಶಾಸಕರು ಮತ್ತು ಕಾರ್ಯಕರ್ತರ ಬೇಡಿಕೆಯಂತೆ ರಾಜ್ಯದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆಗೆ ಆಡಳಿತರೂಡ ಕಾಂಗ್ರೆಸ್ ಪಕ್ಷವು ಮುಂದಾಗಿದ್ದು, ಮೊದಲ ಹಂತದಲ್ಲಿ 30 ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದಂತೆ.
ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದ್ದು, ಸಚಿವ ಸ್ಥಾನ ವಂಚಿತ ಶಾಸಕರುಗಳಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಇವರ ಜೊತೆಯಲ್ಲಿ ಕಾರ್ಯಕರ್ತರು ನಮನ್ನು ಗುರುತಿಸಿ ವೇದಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ
ಹೀಗಾಗಿ ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಶೀಘ್ರದಲ್ಲಿ ಸಭೆ ನಡೆಸಿ ಈಗಾಗಲೇ ಬೇಡಿಕೆ ಇಟ್ಟಿರುವವರ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿನ 80ಕ್ಕೂ ಹೆಚ್ಚಿನ ನಿಗಮ-ಮಂಡಳಿಗಳ ಪೈಕಿ 30 ನಿಗಮ-ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಅದರಲ್ಲಿ 22ರಿಂದ 25 ಮಂದಿ ವಿಧಾನಸಭೆ ಹಾಗೂ 5ರಿಂದ 7 ಮಂದಿ ವಿಧಾನಪರಿಷತ್ ಸದಸ್ಯರಾಗಿರಲಿದ್ದಾರೆ. ಇನ್ನು 15 ದಿನಗಳೊಳಗಾಗಿ ಅಧ್ಯಕ್ಷರ ಆಯ್ಕೆ ಅಂತಿಮಗೊಳಿಸಿ, ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲು ನಿರ್ಧರಿಸಲಾಗಿದೆಯಂತೆ.
ಇನ್ನೂ ಕಾರ್ಯಕರ್ತರ ಆಯ್ಕೆಗೆ ಸಮಿತಿ ರಚನೆ : ಶಾಸಕರ ಆಯ್ಕೆ ನಂತರದಲ್ಲಿ ಉಳಿದಂತಹ ನಿಗಮ ಮಂಡಳಿಗಳಿಗೆ ಕಾಂಗ್ರೆಸ್‌ನ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆಯೇ ಘೋಷಿಸಿದಂತೆ ಕಾರ್ಯಕರ್ತರ ಆಯ್ಕೆಗಾಗಿ ಪ್ರತ್ಯೇಕ ಸಮಿತಿ ರಚಿಸಲಾಗುತ್ತದೆ. ಸಮಿತಿಯು ಪಕ್ಷಕ್ಕಾಗಿ ಶ್ರಮಿಸಿದ ಹಾಗೂ ಲೋಕಸಭೆ ಚುನಾವಣೆ ದೃಷ್ಟಿಯನ್ನಿಟ್ಟುಕೊಂಡು ಪಕ್ಷಕ್ಕೆ ಲಾಭವಾಗುವಂತಹ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ಒಟ್ಟಿನಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಆಯ್ಕೆಯಾಗಲು ಕಣ್ಣಿಟ್ಟಿರುವ ಕಾರ್ಯಕರ್ತರು ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೆ ಬೆಂಗಳೂರಿನಲ್ಲಿ ಬಿಡು ಬಿಟ್ಟಿದ್ದಾರೆ ಕೇಲವರಂತು ಕೇಲವು ನಾಯಕರ ಬೆನ್ನಿಗೆ ಬಿದ್ದಿದ್ದಾರೆ.ಅದರಲ್ಲೂ ಡಿಕೆ ಶಿವಕುಮಾರ್ ಅವರ ಬೆನ್ನಿಗೆ ಆಕಾಂಕ್ಷಿಗಳ ದಂಡೆ ಡಿಕೆ ಹೊದಲ್ಲಿ ಬಂದಲ್ಲಿ ಬೆನ್ನಿಗೆ ಬಿದ್ದಿದ್ದಾರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾದ್ಯಮದ ಮುಂದೆ ಮಾತನಾಡಲು ನಿಂತರಂತು ಕೇಲವು ಮುಖಗಳು ಅವರ ಪಕ್ಕದಲ್ಲಿ ಇಣುಕುತ್ತಿರುತ್ತವೆ ಇದೇನು ಹಳೆಯ ದೃಶ್ಯಾವಳಿಗಳ ಎನ್ನುವಂತೆ ಬಾಸವಾಗುತ್ತದೆ ಕಾರಣ ಅವರ ಪಕ್ಕದಲ್ಲಿ ಅವೆ ಹಳೆಯ ಮುಖಗಳು ಪದೆ ಪದೆ ರಾರಾಜಿಸುತ್ತವೆ ಒಟ್ಟಿನಲ್ಲಿ ನಾಯಕರ ಅದರಲ್ಲೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೆನ್ನಿಗೆ ಬಿಳುವ ಕಾರ್ಯಕರ್ತರ ದಂಡು ನಿಗಮ ಮಂಡಳಿಗಳ ಅಧ್ಯಕ್ಷಗಿರಿ ಆಯ್ಕೆ ನಂತರದಲ್ಲಿ ಕಡಿಮೆ ಆಗಬಹುದು
ಸುಧೀರ್ ವಿಧಾತ, ಶಿವಮೊಗ್ಗ