ರಾಜ್ಯದ 48ಕ್ಕೂ ಹೆಚ್ಚು ಕಡೆ 200 ಮಂದಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ. ಬೆಚ್ಚಿಬಿದ್ದ ಭ್ರಷ್ಟರ ವಲಯ..!
ಬೆಂಗಳೂರು : ಭ್ರಷ್ಟಾಚಾರ ಮಟ್ಟ ಹಾಕುವ ನಿಟ್ಟಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿನ ನಿತ್ಯ ಭ್ರಷ್ಟರ ಬೇಟೆಗೆ ಮುಂದಾಗಿದ್ದಾರೆ ಗುರುವಾರ ಬೆಳಗ್ಗೆ ರಾಜ್ಯದ ಉದ್ದಗಲಕ್ಕೂ ಹಲವೆಡೆ ಮಿಂಚಿನ ಕಾರ್ಯಾಚರಣೆ ನಡೆಸಿ ಭ್ರಷ್ಟರನ್ನು ಖೆಡ್ಡಕ್ಕೆ ಕೆಡವಿ ಕೊಂಡಿದ್ದಾರೆ. ರಾಜರೋಷವಾಗಿ ಭ್ರಷ್ಟಚಾರದಲ್ಲಿ ಮುಳುಗಿದ್ದ ಸರ್ಕಾರಿ ಅಧಿಕಾರಿಗಳಿಗೆ ಬಗಿನಿ ಗೂಟ ಹೊಡೆದಿದ್ದಾರೆ.
ಚಿತ್ರದುರ್ಗ, ಬೀದರ್, ಮೈಸೂರು, ರಾಮನಗರ, ತುಮಕೂರು,ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಕೊಡಗು ಸೇರಿದಂತೆ ಸುಮಾರು 48ಕ್ಕೂ ಹೆಚ್ಚು ಕಡೆ 200ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ ಮತ್ತು ಬೆಳಗಾವಿ ಪಾಲಿಕೆಯ ಇನ್ನಿತರ ಇಲಾಖೆಯ ಭ್ರಷ್ಟರನ್ನು ಬಲಿ ಹಾಕಿದ್ದಾರೆ. ಅದರಲ್ಲೂ ಬೃಹತ್ ಬೆಂಗಳೂರಿನ ಬಿಬಿಎಂಪಿಯ ಭ್ರಷ್ಟರನ್ನು ಬೇಟೆ ಅಡಿದ್ದಾರೆ. ನಿತ್ಯ ಲೋಕಾಯುಕ್ತ ಕಛೇರಿಗೆ ಭ್ರಷ್ಟರ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ. ಬಂದಂತಹ ಕೆಲವು ದೂರುಗಳನ್ನು ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೃಹತ್ ಬೆಂಗಳೂರಿನ ಮಹದೇವಪುರ ವಿಭಾಗದ ಕಂದಾಯ ನಿರೀಕ್ಷಕ ಬಯಂಕರ ಕೂಳುಬಾಕ ನಟರಾಜ್ ಅವರ ಕೆಅರ್ ಪುರ ಸೇರಿದಂತೆ ಸ್ವಂತ ಊರಾದ ಕನಕಪುರದಲ್ಲಿ ಲೋಕಾಯುಕ್ತ ಖಡಕ್ ಡಿವೈಎಸ್‍ಪಿ ವೆಂಕಟೇಶ್ ಮತ್ತು ಗೌತಮ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇತನ
ಕನಕಪುರದ ಪೈಪ್ ಲೈನ್ ರಸ್ತೆಯಲ್ಲಿರುವ ಹಲವಾರು ವಾಣಿಜ್ಯ ಕಟ್ಟಡಗಳು, ಗ್ರಾನೈಟ್ ಪ್ಯಾಕ್ಟರಿ ತೋಟದ ಮನೆ ಸೇರಿದಂತೆ ಅಲ್ಲಿರುವ ಅವರ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ. ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇನ್ನೂ ವಿವಿಧ ಬ್ಯಾಂಕ್‍ಗಳಲ್ಲಿ ಹೂಡಿಕೆ ಮಾಡಿರುವ ಹಣ ಹಾಗೂ ರಾಜ್ಯದ ಇತರೆಡೆ ಸಂಪಾದಿಸಿದ ಚರ ಹಾಗೂ ಸ್ಥಿರ ಆಸ್ತಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಮನೆಯಲ್ಲಿಯು ಲಕ್ಷಾಂತರ ರೂಪಾಯಿ ನಗದು ಹಣ ಕೂಡ ಪತ್ತೆಯಾಗಿದೆ. ಅವಲಹಳ್ಳಿ ಹಾಗೂ ಗಿರಿನಗರ ಮನೆಗಳು ಸೇರಿದಂತೆ ಹಲವಾರು ಫ್ಲಾಟ್‍ಗಳನ್ನೂ ಬೇನಾಮಿ ಹೆಸರಿನಲ್ಲಿ ಖರೀದಿಸಿರುವುದು ತಿಳಿದುಬಂದಿದೆ.
ಈ ಭ್ರಷ್ಟ ಅಧಿಕಾರಿ
ಇತ್ತೀಚೆಗೆ ವ್ಯಕ್ತಿ ಒಬ್ಬರಿಂದ ಫ್ಲಾಟ್ ನೋಂದಣಿ ಮಾಡುವುದಕ್ಕೆ ಐವತ್ತು ಲಕ್ಷ ಲಂಚದ ಹಣಕ್ಕೆ ಬೇಡಿಕೆಯಿಟ್ಟು ಅದನ್ನು ತೆಗೆದುಕೊಳ್ಳುವ ಸಂಧರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಖದೀಮ,
ಇನ್ನೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಆಗಿರುವ ಕೆ. ಮಹೇಶ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಕಾರಿ ಅಭಿಯಂತರಾಗಿರುವ ಅವರ ಪತ್ನಿ ಹೆಚ್. ಭಾರತೀಯವರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆ ಇವತ್ತಿನ ಕಲೆಕ್ಷನ್ ಚನ್ನಾಗಿ ಆಗಲಿ ಎಂದು ರಾಯರನ್ನು ನೆನೆಯುವ ಮೊದಲೇ ಬೆಳಿಗ್ಗೆ ಶಾಕ್ ನೀಡಿದ್ದಾರೆ.
ಲೋಕಾಯುಕ್ತ ಎಸ್‍ಪಿ ವಾಸುದೇವರಾಮ್, ಡಿವೈಎಸ್‍ಪಿ ಮೃತ್ಯುಂಜಯ ಅವರ ನೇತೃತ್ವದ ತಂಡ ಇವರ ನಿವಾಸಗಳು ಹಾಗೂ ಇವರುಗಳು ಕಾರ್ಯನಿರ್ವಹಿಸುತ್ತಿದ್ದ ಕಚೇರಿಗಳ ಮೇಲೂ ದಾಳಿ ನಡೆಸಿದ್ದಾರೆ. ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ವಿವಿಧೆಡೆ ನಿವೇಶನಗಳನ್ನು ಖರೀದಿಸಿರುವುದು ಗೊತ್ತಾಗಿದೆ. ಇವರುಗಳು ಅಕ್ರಮವಾಗಿ ಸಂಪಾದಿಸಿದ ಸಾಕಷ್ಟು ದಾಖಲೆಯನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇನ್ನೂ ಮುಂದುವರೆದಂತೆ ಲೋಕಾಯುಕ್ತ ದಾಳಿಯಲ್ಲಿ ಪ್ರಮುಖವಾಗಿ ಬೆಳಗಾವಿ ಪಾಲಿಕೆಯ ಆಯುಕ್ತ ಸಂತೋಷ್ ಅವರಿಗೂ ಬೆವರು ಇಳಿದಿದೆ. ಇವರ ಧಾರವಾಡದಲ್ಲಿರುವ ನಮನೆ ಹಾಗೂ ಸಿದ್ದಾಪುರ ಬಡಾವಣೆಯ ಮಿಚಿಗನ್ ಲೇಔಟ್‍ನಲ್ಲಿರುವ ಮನೆಯ ಮೇಲೂ ಹಾಗೂ ಕಚೇರಿಗಳ ಮೇಲು ದಾಳಿ ನಡೆಸಲಾಗಿದೆ.
ಈತ ಈ ಹಿಂದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಸಮಯದಲ್ಲೂ ಸಂತೋಷ್ ಮೇಲೆ ಸಾಕಷ್ಟು ದೂರುಗಳು ಬಂದಿದ್ದವು. ಇವನೊಬ್ಬ ಮಹಾನ್ ಭ್ರಷ್ಟ ಅಧಿಕಾರಿ ಎನ್ನುವುದರಲ್ಲಿ ಅನೂಮಾನವಿಲ್ಲ ಸಿಕ್ಕಿದ ಕಡೆ ಎಲ್ಲ ನಾಲಿಗೆ ಚಾಚುವ ಜಯಮಾನದವನು ಎಂದು ಈತ ಕರ್ತವ್ಯ ನಿರ್ವಹಿಸಿದ ಊರುಗಳ ಇವನ ಕಛೇರಿಯ ಅವರಣದಲ್ಲಿನ ಲಂಚದ ಕಮಟು ವಾಸನೆ ಇಂದಿಗೂ ಬಡಿಯುತ್ತಿದೆಯಂತೆ..!! ಆ ಮಟ್ಟದ ಭ್ರಷ್ಟಾಚಾರವನ್ನು ಮಾಡಿದ್ದಾನೆ. ಇನ್ನೂ ಇತನ ಸಹೋದರ ಸಂಬಂಧಿಗಳ ನಿವಾಸಗಳ ಮೇಲೂ ಕೂಡ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿದೆ. ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದುಮನೆಯಲ್ಲಿ ಚಿನ್ನಾಭರಣಗಳು ಸೇರಿದಂತೆ ಹಲವು ಐಷರಾಮಿ ವಸ್ತುಗಳ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.ಇನ್ನೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ವಿಭಾಗದ ಜಂಟಿ ನಿರ್ದೇಶಕ ನಾಗರಾಜು ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಿಲ್ಲಾ ಲೋಕಾ ಎಸ್‍ಪಿ ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಇತನ
ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಬಂಗಲೆ ಹಾಗೂ ಟೂಡಾ ಕಚೇರಿ ಹಾಗೂ ಅರಸಿಕೆರೆಯ ನಿವಾಸ ಮೇಲೆ ದಾಳಿ ನಡೆಸಿ ದಾಖಲಾತಿಗಳನ್ನು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಇತನು ಭ್ರಷ್ಟರಲ್ಲೆ ಭ್ರಷ್ಟ ಎನ್ನುವುದರಲ್ಲಿ ಸಂಶಯವಿಲ್ಲ ಈತ ಲಂಚದ ಹಣ ನೆಕ್ಕಿ
ಹಲವೆಡೆ ಕೃಷಿ ಜಮೀನು, ವಾಣಿಜ್ಯ ಕಟ್ಟಡಗಳು ಸೇರಿದಂತೆ ಹಲವಾರು ಆಸ್ತಿಯನ್ನು ಖರೀದಿಸಿದ್ದಾನೆ ಇದನ್ನು ಪತ್ತೆಹಚ್ಚಲಾಗಿದ್ದು ತನಿಖೆ ಕಾರ್ಯ ಮುಂದುವರೆದಿದೆ.
ಇನ್ನೂ ನೀವು ಗಾಬರಿಯಾಗಲು ಬಹುದು ಬೀದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆಯ ಪೊಲೀಸ್ ಪೇದೆ ವಿಜಯ್ ಕುಮಾರನ ಅಕ್ರಮ ಹಣಸಂಪಾನೆಯ ಪರ್ವವನ್ನು ನೋಡಿದರೆ ನೀವೆ ಬೇರಗಾಗುತ್ತಿರಾ..!! ಇವನ ಹುಮ್ನಾಬಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿರುವ ನಿವಾಸ ಹುಚಕನಹಳ್ಳಿ ಗ್ರಾಮದಲ್ಲಿರುವ ಮನೆ ಸೇರಿದಂತೆ ಇನ್ನೂ ಹಲವುಕಡೆ ದಾಳಿ ನಡೆಸಲಾಗಿದೆ. ಸಾಕಷ್ಟು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪೋಲಿಸ್ ಪೇದೆ ಒಬ್ಬ ಕೋಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿ ಒಡೆಯನಾಗಿರುವುದನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಇನ್ನೂ ಲೋಕಾಯುಕ್ತರ ಮುಂದುವರೆದ ದಾಳಿಯಲ್ಲಿ ರಾಯಚೂರಿನ ನಿರ್ಮಿತಿ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕನಾಗಿರುವ ಮಂಜುನಾಥ್ ಬನ್ನಿಕೊಪ್ಪ ಅವರ ಕೊಪ್ಪಳದಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಎಸ್‍ಪಿ ಅರಸಿದ್ದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇವರ ಮನೆಯಲ್ಲೂ ಕೂಡ ಆಸ್ತಿ ಪಾದ್ರಿಗಳ ದಾಖಲೆಗಳು, ಕಚೇರಿಯಲ್ಲಿ ಕಡತಗಳು ಪತ್ತೆಯಾಗಿವೆ. ಇದರ ಜೋತೆಗೆ ಚಿನ್ನಾಭರಣಗಳು, ಬೆಳ್ಳಿ ಸಾಮಗ್ರಿಗಳು, ಐಷರಾಮಿ ವಸ್ತುಗಳು ಕೂಡ ಪತ್ತೆಯಾಗಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆಸಲಾಗಿದೆ ಅದರಲ್ಲೂ ಈತನ ವ್ಯಾಪಕ ಅಕ್ರಮ ಸಂಪಾದನೆ ಪತ್ತೆಯಾಗಿದೆ. ಸುಮಾರು 6 ಕೋಟಿ ಮೊತ್ತದ ಲಾಡ್ಜ್ ಕೂಡ ಈ ಖದೀಮ ಹೊಂದಿರುವುದು ಪತ್ತೆಯಾಗಿದ್ದು ತನಿಖೆಯ ಕಾರ್ಯ ಮುಂದುವರೆದಿದೆ.
ಇನ್ನೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆಯ ಆರ್‍ಎಫ್‍ಓ ಸತೀಶ್ ಎಂಬ ಕೂಳು ಬಾಕನ ಕಥೆಯು ಭರ್ಜರಿಯಾಗಿದೆ ಇವನ ಶಿವಮೊಗ್ಗ ಹಾಗೂ ಚನ್ನಗಿರಿಯಲ್ಲಿರುವ ಮನೆ ಮತ್ತು ಕಚೇರಿಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ. ಹಲವಾರು ಕಡೆ ಕೃಷಿ ಜಮೀನು ಹಾಗೂ ನಿವೇಶನಗಳನ್ನು ಹೊಂದಿರುವುದು ತಿಳಿದುಬಂದಿದೆ. ಅದರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.ದಾಳಿ ಮುಂದುವರೆದಂತೆ ಕೊಡಗಿನಲ್ಲಿ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಅಲ್ಲಿ ಅಪಾರ ಪ್ರಮಾಣದ ನಗದು ಹಣ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದ್ದು ಸಾಕಷ್ಟು ಮಾಹಿತಿಯನ್ನು ಕಾಲೆ ಹಾಕಿ ತನಿಖೆಯನ್ನು ಮುಂದುವರೆಸಿದ್ದಾರೆ.
ಸುಧೀರ್ ವಿಧಾತ, ಶಿವಮೊಗ್ಗ