ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಸಮೀರ್ ಬರ್ಬರ ಹತ್ಯೆ.!
ಅಶ್ವಸೂರ್ಯ/ಶಿವಮೊಗ್ಗ : ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಕರಾವಳಿಯ ಮಂಗಳೂರಿನಲ್ಲಿ ನೆಡೆದಿದೆ.
ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಕಡಪ್ಪರ ಸಮೀರ್ ಎಂಬಾತನನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ರೌಡಿಗಳ ಗ್ಯಾಂಗ್ ಒಂದು ಬರ್ಬರವಾಗಿ ಹತ್ಯೆಗೈದು ರಿವೆಂಜ್ ತೀರಿಸಿಕೊಂಡಿದೆ ಎಂದು ವರದಿಯಾಗಿದೆ.
ಹತ್ಯೆಯಾದ ಸಮೀರ್
ರಾತ್ರಿ 10ರ ಸುಮಾರಿಗೆ ತಾಯಿ ಜೊತೆಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭದಲ್ಲಿ ಹಿಂಬದಿಯಿಂದ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ರೌಡಿಗಳ ಗ್ಯಾಂಗ್ ಸಮೀರ್ ನಾರಿನಿಂದ ಇಳಿಯುತ್ತಿದ್ದಂತೆ ತಲವಾರಿನಿಂದ ಕೊಚ್ಚಲು ಮುಂದಾಗಿದ್ದಾರೆ.ತಕ್ಷಣವೇ ಅಪಾಯವನ್ನು ಅರಿತ ಸಮೀರ್ ಸ್ಥಳದಿಂದ ಓಡಲು ಯತ್ನಿಸಿದ್ದಾನೆ,
ಈ ವೇಳೆಯಲ್ಲಿ ಎಲ್ಲದಕ್ಕೂ ಸಿದ್ಧವಾಗಿ ಬಂದಿದ್ದ ಹಂತಕರ ತಂಡ ಆತನನ್ನು ಅಟ್ಟಾಡಿಸಿದ್ದಾರೆ. ಸಮೀರ್ ಹತ್ಯೆಗೆ ಬಂದಿದ್ದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್ನಿನಿಂದ 500 ಮೀ ದೂರದಲ್ಲಿರುವ ವಿ.ಕೆ.ಫರ್ನಿಚರ್ ಹಿಂಭಾಗದವರೆಗೂ ಅಟ್ಟಾಡಿಸಿಕೊಂಡು ಹೋಗಿ ಅಲ್ಲಿ ಮನಬಂದಂತೆ ಆತನ ಮೇಲೆ ತಲವಾರಿನಿಂದ ಕೊಚ್ಚಿ ಹತ್ಯೆಮಾಡಿದ್ದಾರೆ.
ಟಾರ್ಗೆಟ್ ಇಲ್ಯಾಸ್
2018 ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ನನ್ನು ಜೆಪ್ಪುವಿನ ಫ್ಲಾಟ್‍ವೊಂದರಲ್ಲಿ ದಾವುದ್, ಸಮೀರ್, ರಿಯಾಝ್, ನಮೀರ್ , ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್ ಆಲಿ ಎಂಬವರು ಸೇರಿಕೊಂಡು ಹತ್ಯೆ ನಡೆಸಿದ್ದರು. ಪ್ರಕರಣದಲ್ಲಿ ಸಮೀರ್ ಎರಡನೇ ಆರೋಪಿಯಾಗಿದ್ದು, ದಾವುದ್ ಮತ್ತು ಸಮೀರ್ ಇಬ್ಬರು ನೇರವಾಗಿ ಇಲ್ಯಾಸ್ ವಾಸವಾಗಿದ್ದ ಫ್ಲ್ಯಾಟ್ ಗೆ ನುಗ್ಗಿ ಆತನನ್ನು ಹತ್ಯೆ ನಡೆಸಿರುವುದು ತನಿಖೆಯಲ್ಲಿ ಬಯಲಾಗಿತ್ತು. ಪ್ರಕರಣ ಸಂಬಂಧ ಜೈಲುಪಾಲಾಗಿದ್ದ ಸಮೀರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣದಲ್ಲಿ ಸಮೀರ್ ಎರಡನೇ ಆರೋಪಿಯಾಗಿದ್ದು, ದಾವುದ್ ಮತ್ತು ಸಮೀರ್ ಇಬ್ಬರು ನೇರವಾಗಿ ಫ್ಲ್ಯಾಟ್ ಪ್ರವೇಶಿಸಿ ಇಲ್ಯಾಸ್ನನ್ನು ಆತನ ಮನೆಯ ಬಾಗಿಲಲ್ಲೆ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿತ್ತು. ಪ್ರಕರಣ ಸಂಬಂಧ ಜೈಲುಪಾಲಾಗಿದ್ದ ಸಮೀರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ. ಬಿಡುಗಡೆಯಾದ ಸಮೀರ್ ತನ್ನ ತಾಯಿ ಮಡದಿ ಮಕ್ಕಳೊಂದಿಗೆ ಊಟಕ್ಕೆಂದು ರೆಸ್ಟೊರೆಂಟ್ ಗೆ ತೆರಳಿದ ವೇಳೆ ಹತ್ಯೆಯಾಗಿದೆ.
ಕೊಲೆಯಾದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಠಾಣಾ ಪೊಲೀಸರು ಆರೋಪಿಗಳಿಗಾಗಿ ಭಲೇ ಬಿಸಿದ್ದಾರೆ.
ಸಮೀರ್ ಹತ್ಯೆ ಪ್ರಕರಣ. ಪೊಲೀಸ್ ಕಮಿಷನರ್ ಹೇಳಿದ್ದೇನು?
ಮಂಗಳೂರು ಭಾನುವಾರ ರಾತ್ರಿ ರೌಡಿಗಳ ಗ್ಯಾಂಗ್ ನಿಂದ ಹತ್ಯೆಗೀಡಾದ ಕಡಪ್ಪರ ಸಮೀರ್ ಪ್ರಕರಣದ ಆರೋಪಿಗಳಿಗಾಗಿ ಪೋಲಿಸರ ತಂಡ ಕಾರ್ಯಚರಣೆಗೆ ಇಳಿದಿದೆ ಎಂದು ದ.ಕ ಜಿಲ್ಲಾ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಹತ್ಯೆಯಾದ ಕಡಪ್ಪರ ಸಮೀರ್ ಮೇಲೆ 9 ಪ್ರಕರಣಗಳು ಇದೆ. 2018ರಲ್ಲಿ ಟಾರ್ಗೆಟ್ ತಂಡದ ಇಲ್ಯಾಸ್ ಎಂಬ ರೌಡಿಶೀಟರ್ ನ ಮನೆಗೆ ನುಗ್ಗಿ ಕೊಲೆ ಮಾಡಿದ್ದರು. ಆ ಪ್ರಕರಣದಲ್ಲಿ ಸಮೀರ್ A1 ಆರೋಪಿ ಆಗಿದ್ದಾನೆ.
ಜೂನ್ ತಿಂಗಳಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಈ ಪ್ರಕರಣ ನೆಡೆದಿದ್ದು ಈತನ ಮೇಲೆ 399, 402 ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದರು. ಕೆಲ ದಿನಗಳ ಹಿಂದೆ ಸಮೀರ್ ಬಿಡುಗಡೆಯಾಗಿ ಹೋರಬಂದಿದ್ದ.
ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಸಮೀರ್ ತನ್ನ ತಾಯಿ, ಪತ್ನಿ, ಮಕ್ಕಳೊಂದಿಗೆ ಕಾರಲ್ಲಿ ಕಲ್ಲಾಪು ಬಳಿಯ ಫಾಸ್ಟ್ ಫುಡ್ ಸೆಂಟರ್ ವೊಂದಕ್ಕೆ ಉಪಾಹಾರಕ್ಕೆ ತೆರಳಿದ್ದ ವೇಳೆ ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ರೌಡಿಗಳ ಗ್ಯಾಂಗ್ ಒಂದು ಸಮೀರ್ ನನ್ನು ಆತನ ತಾಯಿಯ ಎದುರಲ್ಲೇ ಮಾರಕಾಸ್ತ್ರಗಳನ್ನು ಹಿಡಿದು ಹತ್ಯೆಗೈಯಲು ಅಟ್ಟಾಡಿಸಿದ್ದಾರೆ. ತಪ್ಪಿಸಿಕೊಳ್ಳಲು ಸಮೀರ್ ರೈಲ್ವೇ ಟ್ರ್ಯಾಕ್ ಕಡೆ ಓಡುತ್ತಿದ್ದಾಗ ದುಷ್ಕರ್ಮಿಗಳು ಆತನನ್ನು ಕೊಚ್ಚಿ ಬರ್ಬರವಾಗಿ ಹತ್ಯೆಮಾಡಿದ್ದಾರೆ. ತಕ್ಷಣವೇ ತಾವು ಬಂದಿದ್ದ ಸ್ವಿಫ್ಟ್ ಕಾರಿನಲ್ಲಿ ಹಂತಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 103 ಕೇಸ್ ದಾಖಲು ಮಾಡಿ ಮುಂದಿನ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.