ಷಷ್ಠಿಪೂರ್ತಿ ಆಚರಿಸಿಕೊಂಡ ನಟ ಶಿವರಾಜ್‌ಕುಮಾರ್ ದಂಪತಿ

ಷಷ್ಠಿಪೂರ್ತಿ ಆಚರಿಸಿಕೊಂಡ ನಟ ಶಿವರಾಜ್‌ಕುಮಾರ್ ದಂಪತಿ

ಅಶ್ವಸೂರ್ಯ/ಶಿವಮೊಗ್ಗ: ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವಕುಮಾರ್ ದಂಪತಿ ತಮಿಳುನಾಡಿನ ಪ್ರಸಿದ್ಧ ದೇವಾಲಯದಲ್ಲಿ ಷಷ್ಠಿಪೂರ್ತಿ ಆಚರಿಸಿಕೊಂಡಿದ್ದಾರೆ. ಬಾಲ್ಯದ ಗೆಳೆಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನೆಡೆಯಿತು.
ಒಂದು ಸಾವಿರ ವರ್ಷಗಳ ಇತಿಹಾಸವಿರುವ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಮಕ್ಕಳಾದ ನಿವೇದಿತಾ ಮತ್ತು ನಿರುಪಮಾ ಜೊತೆ ನಟ ಶಿವಣ್ಣ ದಂಪತಿಗಳು ಷಷ್ಠಿಪೂರ್ತಿ ಕಾರ್ಯಕ್ರಮ ಆಚರಿಸಿಕೊಂಡಿದ್ದಾರೆ.

ನಟ ಶಿವಕುಮಾರ್ ಅವರಿಗೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಕುಟಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಅಂದು ಶಿವಣ್ಣನ ಮದುವೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂಜಿಆರ್

ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಮದುವೆ ಮುಹೂರ್ತದಲ್ಲಿ ಮಾಡಲಾಗುವಂತೆ ಎಲ್ಲಾ ಶಾಸ್ತ್ರಗಳನ್ನು ಶಿವಣ್ಣ ದಂಪತಿಗಳ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಮಾಡಿದ್ದಾರೆ. ಪತ್ನಿ ಗೀತಾಗೆ ಮತ್ತೊಮ್ಮೆ ಶಿವಣ್ಣ ಮಾಂಗಲ್ಯ ಧಾರಣೆ ಮಾಡಿದ್ದಾರೆ. 

ಅಂದು ಮದುವೆಯ ಸಂಭ್ರಮದಲ್ಲಿ ಮಾವ ಎಸ್ ಬಂಗಾರಪ್ಪ ಮತ್ತು ತಂದೆ ಡಾ.ರಾಜ್ ಕುಮಾರ್ ಜೋತೆಯಲ್ಲಿ ಶಿವಣ್ಣ ದಂಪತಿಗಳು

1986ರಲ್ಲಿ ನಟ ಶಿವಕುಮಾರ್ ಜನಪ್ರಿಯ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಪುತ್ರಿ ಗೀತಾರನ್ನು 1986ರಲ್ಲಿ ಶಿವಣ್ಣ ಮದುವೆಯಾಗಿದ್ದ ರು.ಈ ದಂಪತಿಗಳು ತಮ್ಮ 38 ವರ್ಷದ ಸುಂದರ ದಾಂಪತ್ಯ ಜೀವನದಲ್ಲಿ ಹೆಜ್ಜೆಹಾಕಿದ್ದಾರೆ. ಈ ಸಂಧರ್ಭದಲ್ಲಿ ನಟ ಶಿವಣ್ಣನವರಿಗೆ ಆರವತ್ತು ವರ್ಷ ತುಂಬಿದ ಹಿನ್ನಲೆಯಲ್ಲಿ ಈ ಒಂದು ಷಷ್ಠಿಪೂರ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು…

Leave a Reply

Your email address will not be published. Required fields are marked *

Optimized by Optimole
error: Content is protected !!