5 ಕೆಜಿ ಆಲೂಗಡ್ಡೆ ಲಂಚವಾಗಿ ಬೇಡಿಕೆ ಇಟ್ಟ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು.!!

5 ಕೆಜಿ ಆಲೂಗಡ್ಡೆಯನ್ನು ಲಂಚವಾಗಿ ಬೇಡಿಕೆ ಇಟ್ಟ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು.!

ಅಶ್ವಸೂರ್ಯ/ಶಿವಮೊಗ್ಗ: ಲಕ್ನೋದಲ್ಲಿ ಲಂಚವಾಗಿ 5 ಕೆಜಿ ಆಲುಗಡ್ಡೆಗೆ ಬೇಡಿಕೆಯಿಟ್ಟಿದ್ದ ಸಬ್‌ಇನ್‌ಸ್ಪೆಕ್ಟರ್‌ ಒಬ್ಬರನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ. ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಜಾಲತಾಣದ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು ಲಂಚಕ್ಕಾಗಿ ‘ಆಲೂಗಡ್ಡೆ’ ಎಂಬ ಪದವನ್ನು ಕೋಡ್‌ ಆಗಿ ಬಳಸಲಾಗಿದೆ.! ಆದರೆ 5 ಕೆಜಿ ಆಲೂಗಡ್ಡೆ ಎಂದರೆ ಎಷ್ಟು ಹಣವೆಂದು ತಿಳಿದು ಬಂದಿಲ್ಲ. ಹಿರಿಯ ಅಧಿಕಾರಿಗಳು ಈ ಘಟನೆಯ ತನಿಖೆ ಕೈಗೊಂಡ ಹಿನ್ನೆಲೆಯಲ್ಲಿ ಲಂಚದ ಬೇಡಿಕೆ ಬಯಲಾಗಿದೆ.! ಈ ಘಟನೆ ಗೆ ಸಂಬಂಧಪಟ್ಟ
ಸೌರಿಖ್ ಪೊಲೀಸ್ ಠಾಣಾ ವ್ಯಾಪ್ತಿಯ ಭವಲ್‌ಪುರ ಚಾಪುನ್ನಾ ಚೌಕಿಯಲ್ಲಿ ನಿಯೋಜನೆಗೊಂಡಿದ್ದ ಸಬ್‌ಇನ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣವನ್ನು ಇಲಾಖಾ ತನಿಖೆಗೂ ಸೂಚಿಸಲಾಗಿದೆ.

ವೈರಲ್ ಆಡಿಯೋದಲ್ಲಿ ಆರೋಪಿ ಸಬ್‌ಇನ್‌ಸ್ಪೆಕ್ಟರ್‌ ರೈತರೊಬ್ಬರಿಂದ 5 ಕೆಜಿ ಆಲೂಗಡ್ಡೆಗೆ ಬೇಡಿಕೆ ಇಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಕಷ್ಟ ಎಂದು ರೈತ ಹೇಳುತ್ತಾರೆ. 5 ಕೆಜಿ ಬದಲಿಗೆ 2 ಕೆಜಿ ನೀಡುತ್ತೇನೆಂದು ರೈತರ ಹೇಳುತ್ತಾರೆ. ಅದಕ್ಕೆ ಪೊಲೀಸ್‌ ಅಧಿಕಾರಿ ಕೋಪಗೊಂಡು, ಕೊನೆಗೆ 3 ಕೆಜಿಗೆ ಒಪ್ಪಂದ ಅಂತಿಮವಾಗುತ್ತದೆ. ಎಂದು ತಿಳಿದುಬಂದಿದೆ.!

Leave a Reply

Your email address will not be published. Required fields are marked *

Optimized by Optimole
error: Content is protected !!