ಸಾಗರದ ಗಟಪತಿ ಬ್ಯಾಂಕ್ ಉಪಧ್ಯಾಕ್ಷರಾಗಿ ಎಸ್.ಎಂ, ರಮೇಶ್ ಆಯ್ಕೆ.

ಸಾಗರದ ಗಣಪತಿ ಬ್ಯಾಂಕ್ ಉಪಾಧ್ಯಕ್ಷರಾಗಿ ಎಸ್.ಎಂ. ರಮೇಶ್ ಆಯ್ಕೆ:
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಸಾಗರದ ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರಾಗಿ ಎಸ್.ಎಂ. ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನಲ್ಲಿ ನಡೆದ ಉಪಾಧ್ಯಕ್ಷ ಚುನಾವಣೆಯಲ್ಲಿ ರಮೇಶ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಬ್ಯಾಂಕಿನ ಆಡಳಿತ ಮಂಡಳಿ ರಮೇಶ್ ರಿಗೆ ಅಭಿನಂದನೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಬಿ. ದೇವೇಂದ್ರ,  ನಿರ್ದೇಶಕರುಗಳಾದ ಶೋಭಾ ಲಂಬೋಧರ್, ಸರಸ್ವತಿ ನಾಗರಾಜ್, ಆರ್. ವಿನಾಯಕರಾವ್, ಕೃಷ್ಣಮೂರ್ತಿ ಭಂಡಾರಿ,  ವಿ. ಶಂಕರ್, ವಿ. ಗುರು, ಉದಯಕಾಮತ್, ಬ್ಯಾಂಕಿನ ಸಿಇಓ ಲಲಿತಾಂಬಿಕೆ ಬಿ. ಭಾಗವಹಿಸಿದ್ದರು.

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!