ಕುವೆಂಪು ವಿಶ್ವವಿದ್ಯಾನಿಲಯ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಸುವಂತೆ ಧರಣಿ.

ಕುವೆಂಪು ವಿಶ್ವವಿದ್ಯಾನಿಲಯ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆ ಈಡೇರಿಸುವಂತೆ ಧರಣಿ.

ಅಶ್ವಸೂರ್ಯ/ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯವು ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ, ಅತಿಥಿ ಉಪನ್ಯಾಸಕರ ವೇತನವನ್ನು ಸಿಂಡಿಕೇಟ್ ಸಭೆಯ ನಿರ್ಣಯದಂತೆ, ಗರಿಷ್ಠ 45,000 ರೂ ಗಳನ್ನು ನಿಗದಿ ಮಾಡಿ ನೀಡಿರುತ್ತಾರೆ. ಆದರೆ ಹಠಾತ್ತನೇ ಈ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಸಿಂಡಿಕೇಟ್ ಸಭೆಯ ಗಮನಕ್ಕೆ ತರದೆ, ಸರ್ಕಾರದ ಆದೇಶದ ಪ್ರಕಾರ ನಮ್ಮ ವೇತನವನ್ನು ಕಡಿತಗೊಳಿಸಿರುತ್ತಾರೆ. ಮುಂದುವರೆದಂತೆ ಸರ್ಕಾರವು ಪರಿಷ್ಕೃತ ಅತಿಥಿ ಉಪನ್ಯಾಸಕರ ವೇತನವನ್ನು ಜಾರಿಗೆ ತಂದಿದ್ದು, ಅದನ್ನು ಯಥಾವತ್ತಾಗಿ ನಿಗದಿಪಡಿಸಲು ವಿಳಂಬ ಧೋರಣೆಯನ್ನು ತೋರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರದ ಆದೇಶದ ಪ್ರಕಾರ ವೇತನವನ್ನು ಮತ್ತು ವಿವಿಧ ಸೌಲಭ್ಯ (ವಿಮಾ ಯೋಜನೆ, ಹಿಡಿಗಂಟು ಯೋಜನೆ, ಆಸ್ಪತ್ರೆ ಸವಲತ್ತು ಮುಂತಾದವುಗಳು) ಗಳನ್ನು ಜನವರಿ 2024 ರಿಂದಲೇ ಅನ್ವಯವಾಗುವಂತೆ, ತಕ್ಷಣ ಜಾರಿ ಮಾಡಿ ಬಾಕಿ ವೇತನವನ್ನು (arrears) ಈ ಕೂಡಲೇ ಪಾವತಿಸಬೇಕಾಗಿ ಆಗ್ರಹಿಸುತ್ತೇವೆ.

ವಿಶ್ವವಿದ್ಯಾನಿಲಯದಲ್ಲಿ ಸತತವಾಗಿ 15-20 ವರ್ಷಗಳಿಂದ, ಗೌರವಯುತವಾಗಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು. ವಿಶ್ವವಿದ್ಯಾನಿಲಯದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಯಶಸ್ವಿಯಾಗಿ ಕಾರ್ಯಗಳನ್ನು ಪೂರ್ಣಗೊಳಿಸಿರುತ್ತೇವೆ. ಆದರೆ ನಮ್ಮ ಈ ಸೇವೆಯ ಅನುಭವವು ಯಾವ ಸಂಸ್ಥೆಯಲ್ಲಿಯೂ ಕೂಡ ಪರಿಗಣನೆಗೆ ತೆಗೆದುಕೊಳ್ಳದಿರುವುದು ವಿಷಾದನೀಯ,

ಏಕೆಂದರೆ ನಮ್ಮ ಪದನಾಮ. ಹಾಗಾಗಿ ನಮ್ಮ ಸೇವಾ ಅನುಭವವನ್ನು ಪರಿಗಣಿಸಿ, ಸೇವಾ ಪ್ರಮಾಣ ಪತ್ರವನ್ನು ಕುಲಸಚಿವರು ಆಡಳಿತ ಇವರು ನೀಡಬೇಕಾಗಿ ಹಾಗೂ ಅತಿಥಿ ಉಪನ್ಯಾಸಕರ ಪದನಾಮದಿಂದ, ಸಹಾಯಕ ಬೋಧಕರು ಎಂದು ನಮ್ಮ ಪದನಾಮವನ್ನು ಬದಲಾವಣೆ ಮಾಡಲು ಕೋರಿಕೊಳ್ಳುತ್ತೇವೆ. (ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ಈ ಪದವನ್ನು ಬಳಸಲಾಗಿದೆ.) ಈಗಾಗಲೇ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಿಗೆ, 11 ತಿಂಗಳ ವೇತನ ನೀಡಲು ಸಿಂಡಿಕೇಟ್ ಸಭೆಯು ನಿರ್ಣಯ ಮಾಡಿದ್ದರು. ಇದುವರೆಗೂ ಅದರ ಬಗ್ಗೆ ಯಾವುದೇ ಆದೇಶ ನೀಡದೆ ವಿಳಂಬ ನೀತಿಯನ್ನು ತೋರಿಸುತ್ತಿದ್ದಾರೆ. ಮುಂದುವರೆದಂತೆ ವಿಶ್ವವಿದ್ಯಾನಿಲಯ ಕಳೆದ 15-20 ವರ್ಷಗಳಿಂದ, ಸತತವಾಗಿ 10 ತಿಂಗಳು ವೇತನವನ್ನು ನೀಡುತ್ತಿದ್ದು, ಈ ಶೈಕ್ಷಣಿ ವರ್ಷದಲ್ಲಿ ದಿಢೀರನೆ ಮೇ ತಿಂಗಳ ಸಂಬಳವನ್ನು ಕಡಿತ ಮಾಡಲು ಹೊರಟಿರುವುದು ಬಹಳ ಶೋಚನೀಯ ಸಂಗತಿಯಾಗಿದೆ. ವಿಶ್ವವಿದ್ಯಾನಿಲಯದ ಅಧಿಕಾರಿಗಳು ಈ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ಸತತವಾಗಿ ವೇತನವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. (ಡಿಸೆಂಬರ್ ನಿಂದ ಕೆಲಸ ಮಾಡಿದ ಅತಿಥಿ ಉಪನ್ಯಾಸಕರಿಗೆ ಸೆಪ್ಟೆಂಬ‌ರ್ ತನಕ ಮತ್ತು ಜನವರಿಯಿಂದ ಕೆಲಸ ಮಾಡಿದ ಅತಿಥಿ ಉಪನ್ಯಾಸಕರಿಗೆ ಅಕ್ಟೋಬರ್ ತನಕ ವೇತನ ವನ್ನು ನೀಡುವಂತೆ ಆಗ್ರಹಿಸಿದ್ದಾರೆ)
ಪ್ರತಿ ಶೈಕ್ಷಣಿಕ ವರ್ಷವೂ ಈ ಹಿಂದೆ ಕಾರ್ಯ ನಿರ್ವಹಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸಂದರ್ಶನ ಮಾಡಿ ಆಯ್ಕೆ ಮಾಡಿಕೊಂಡು ಬರುತ್ತಿದ್ದು, ಇದು ಹಲವು ವರ್ಷಗಳಿಂದ ವಿಶ್ವವಿದ್ಯಾನಿಲಯ ದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲದಂತಾಗಿದ್ದು ಮತ್ತು ಇದೊಂದು ಅತೀಶಯವಾದ ಶೋಚನೀಯ ಸಂಗತಿಯಾಗಿದೆ, ಹಾಗಾಗಿ ಸೇವಾ ಭದ್ರತೆಯ ಈತ ದೃಷ್ಟಿಯಿಂದ ಹಿಂದಿನ ವರ್ಷದಲ್ಲಿ ಕಾರ್ಯ ನಿರ್ವಹಿಸಿದ ಯುಜಿಸಿ ನಿಯಮದಂತೆ ಅರ್ಹತೆಯನ್ನು ಹೊಂದಿರುವ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ಸಾಲಿಗೂ ಯಾವುದೇ ಸಂದರ್ಶನ ವಿಲ್ಲದೆ ಮುಂದುವರೆಸಿ ಸೇವಾ ಭದ್ರತೆಯನ್ನು ಒದಗಿಸುವುದು. ಹಾಗೂ ಯುಜಿಸಿ ನಿಯಮದ ಅರ್ಹತೆ ಹೊಂದಿಲ್ಲದ ಮತ್ತು ಖಾಲಿ ಸ್ಥಾನಗಳಿಗೆ ಮಾತ್ರ ಸಂದರ್ಶನವನ್ನು ನೆಡೆಸಿ ಶೈಕ್ಷಣಿಕ ವರ್ಷದ ಮೊದಲ ದಿನದಿಂದಲೇ ಕೆಲಸಕ್ಕೆ ವರದಿ ಮಾಡಿಕೊಳ್ಳುವಂತೆ ಆಯ್ಕೆ ಮಾಡಿಕೊಳ್ಳಬೇಕೆಂದು ಆಗ್ರಹಿಸುತ್ತಿದ್ದೇವೆ.
ಮುಖ್ಯವಾಗಿ ವಿಶ್ವವಿದ್ಯಾನಿಲಯದ ಮಾನವ ಸಂಪನ್ಮೂಲ ವಿಭಾಗದಿಂದ, ಆಗುತ್ತಿರುವ ತಪ್ಪು ಗ್ರಹಿಕೆಗಳು ಮತ್ತು ವೇತನದ ಬಿಲ್ಲುಗಳ ಪ್ರಕ್ರಿಯೆ ಮಾಡಲು ತೋರುತ್ತಿರುವ ವಿಳಂಬ ನೀತಿಯನ್ನು ತಡೆಗಟ್ಟಿ, ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾಗೂ ವೇತನ ಬಿಲ್ಲು ನೀಡಿದ ಐದು ದಿನದೊಳಗೆ ವೇತನ ಕೊಡುವಹಾಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ.

ಅಥಿತಿ ಉಪನ್ಯಾಸಕರ. ಬೇಡಿಕೆಗಳು

  • 1 ಸರ್ಕಾರ ಜಾರಿಗೊಳಿಸಿರುವ ಅತಿಥಿ ಉಪನ್ಯಾಸಕರ ಸವಲತ್ತುಗಳನ್ನು ಮತ್ತು ವೇತನವನ್ನು ಕೂಡಲೇ ಜಾರಿಗೊಳಿಸುವುದು ಮತ್ತು ಜನವರಿ 2024 ರಿಂದಲೇ ಅನ್ವಯವಾಗುವಂತೆ ಬಾಕಿ ವೇತನವನ್ನು (arrears) ಪಾವತಿಸುವುದು .
  • 2. ಪ್ರತಿ ಶೈಕ್ಷಣಿಕ ವರ್ಷದ ಸಂದರ್ಶನವನ್ನು ರದ್ದುಗೊಳಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೂ ಅದೇ ಅತಿಥಿ ಉಪನ್ಯಾಸಕರನ್ನು ಮುಂದುವರೆಸಿ ಸೇವಾ ಭದ್ರತೆಯನ್ನು ಒದಗಿಸುವುದು.
  • 3. 11 ತಿಂಗಳ ವೇತನ ಜಾರಿಗೊಳಿಸುವುದು ಮತ್ತು ಸತತವಾಗಿ ವೇತನವನ್ನು ಪ್ರತಿ ತಿಂಗಳು ಐದನೇ ತಾರೀಕಿನ ಒಳಗೆ ನೀಡುವುದು.
  • 4. ಮಾನವ ಸಂಪನ್ಮೂಲ ವಿಭಾಗದಿಂದ ನಡೆಯುತ್ತಿರುವ ತಪ್ಪು ಗ್ರಹಿಕೆಗಳು ಮತ್ತು ವಿಳಂಬವನ್ನು ತಡೆಗಟ್ಟುವುದು.
  • 5. ಅತಿಥಿ ಉಪನ್ಯಾಸಕರ ಪಧನಾಮವನ್ನು, ಸಹಾಯಕ ಬೋಧಕರಾಗಿ ಬದಲಾವಣೆ ಮಾಡಿ, ಕುಲಸಚಿವರು (ಆಡಳಿತ) ಸೇವಾ ಅನುಭವದ ಪ್ರಮಾಣ ಪತ್ರವನ್ನು ನೀಡುವುದು.
  • 6. ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನಡೆಸಿಕೊಂಡು, ವಿಶ್ವವಿದ್ಯಾನಿಲಯದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ( ಮೌಲ್ಯಮಾಪನ, ಸ್ವಾಡ್ ಡ್ಯೂಟಿ ಮುಂತಾದವು ) ಬಳಸಿಕೊಳ್ಳುವುದು.
    ಕುವೆಂಪು ವಿಶ್ವವಿದ್ಯಾಲಯದ ಅಥಿತಿ ಉಪನ್ಯಾಸಕರು ತಮ್ಮ ಬೇಡಿಕೆಯನ್ನು ಮುಂದಿಟ್ಟು ಹೋರಾಟಕ್ಕೆ ಮುಂದಾಗಿದ್ದಾರೆ…

Leave a Reply

Your email address will not be published. Required fields are marked *

Optimized by Optimole
error: Content is protected !!