ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ( ರಿ ) ಸುರತ್ಕಲ್ ದ.ಕ ಇವರ ಆಶ್ರಯದಲ್ಲಿ. ಸುರತ್ಕಲ್ ನಲ್ಲಿ ದ್ವೀತಿಯ ವರ್ಷದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ.ಜುಲೈ 28 ರಂದು ಬನ್ನಿ ಭಾಗವಹಿಸಿ.
ಅಶ್ವಸೂರ್ಯ/ಶಿವಮೊಗ್ಗ: ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ( ರಿ) ಸುರತ್ಕಲ್, ದಕ್ಷಿಣ ಕನ್ನಡ ಇವರ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ದ್ವಿತೀಯ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ, ಮಂಗಳೂರು ಇದರ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಇದೆ ಜುಲೈ 28 ನೇ ತಾರೀಖು ಭಾನುವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ
ಸ್ಥಳ: ವಿದ್ಯಾದಾಯಿನೀ ಪ್ರೌಢಶಾಲಾ ವಜ್ರಮಹೋತ್ಸವ ಸಭಾಂಗಣ, ಸುರತ್ಕಲ್
ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು
- ರೋ। ಡಾ| ಅರವಿಂದ್ ಭಟ್ ಡೆಂಟಲ್ ಸರ್ಜನ್, ಸುರತ್ಕಲ್ ನೆರವೇರಿಸದರೆ
- ಅಧ್ಯಕ್ಷತೆಯನ್ನು
- ಶ್ರೀ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷರು, ಸುರತ್ಕಲ್ ಸ್ಪೋರ್ಟ್ಸ್ & ಕಲ್ಬರಲ್ ಕ್ಲಬ್ (ರಿ.) ವಹಿಸಲಿದ್ದಾರೆ.
ಇನ್ನೂ ಈ ಒಂದು ಕಾರ್ಯಕ್ರಮಕ್ಕೆ
ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ…
- ಶ್ರೀ ಮನೋಜ್ ಕುಮಾರ್ ನಾಯ್ಕ್ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಉತ್ತರ ಉಪವಿಭಾಗ, ಪಣಂಬೂರು,
- ಶ್ರೀ ಶ್ರೀರಂಗ ಎಚ್. ಕಾರ್ಯದರ್ಶಿ, ಹಿಂದೂ ವಿದ್ಯಾದಾಯಿನಿ ಸಂಘ (ರಿ.) ಸುರತ್ಕಲ್,
- ಡಾ| ಅಗಸ್ಟಿನ್ ಮೆಡಿಕಲ್ ಆಫೀಸರ್, ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು
- ಶ್ರೀ ಎಂ. ಸುಧಾಕರ ಮಲ್ಯ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ
ತಾವೆಲ್ಲರೂ ಈ ಒಂದು ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ, ರಕ್ತದಾನಿಗಳಾಗಿ ಈ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ
- ಎಸ್. ಮಹೇಶ್ ಕುಮಾರ್ ಮಹಾಪೋಷಕರು
- ಮಹಾಬಲ ಪೂಜಾರಿ ಕಡಂಬೋಡಿ
- ನಾಗರಾಜ್ ಕಡಂಬೋಡಿ ರಕ್ತದಾನ ಶಿಬಿರದ ಸಂಚಾಲಕರು ಅಧ್ಯಕ್ಷರು
ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸುರತ್ಕಲ್ ಸ್ಪೋರ್ಟ್ಸ್ & ಕಲ್ಬರಲ್ ಕ್ಲಬ್ (ರಿ.)
ರಕ್ತದಾನ ಮಾಡಿದವರಿಗೆ ಹೆಲ್ತ್ ಬೆನಿಫಿಟ್ ಕಾರ್ಡ್ ವಿತರಣೆ ಮಾಡಲಾಗುವುದು.
ರಕ್ತದಾನ ಶ್ರೇಷ್ಠದಾನ, ರಕ್ತದಾನ ಮಾಡಿ ನಾಲ್ಕು ಜೀವಗಳನ್ನು ಉಳಿಸಿ
ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ( ರಿ.) ಆಶ್ರಯದಲ್ಲಿ ನಡೆಯುವ ದ್ವಿತೀಯ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಅಂಚೆ ಜನ ಸಂಪರ್ಕ ಅಭಿಯಾನಕ್ಕೆ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಸಂಸ್ಥೆಯ ಹೆಮ್ಮೆಯ ಮಹಾಪೋಷಕರಾದ ಮಾನ್ಯ ಶ್ರೀ.ಎಸ್.ಮಹೇಶ್ ಕುಮಾರ್ ನಿಮ್ಮೆಲ್ಲರ ಸಹಕಾರ ಕೋರುತಿದ್ದಾರೆ ಮತ್ತು ಅಂಚೆ ಜನ ಸಂಪರ್ಕದ ಉಪಯೋಗವನ್ನು ಪಡೆದು ಕೊಳ್ಳಲು ಮನವಿ ಮಾಡಿದ್ದಾರೆ.