ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಗೆ ಮುಖ್ಯಧಿಕಾರಿಯಾಗಿ ಉತ್ಸಾಹ ಯುವಕ ನಾಗರಾಜ್ ಆಗಮನ
ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ ಯುವ ಅಧಿಕಾರಿ ನಾಗರಾಜ್ ಆಗಮನ: ಅಭಿವೃದ್ಧಿಯ ಪತದತ್ತ ಸಾಗಲಿದೇಯೆ ತೀರ್ಥಹಳ್ಳಿ ಪಟ್ಟಣ.?
ಅಶ್ವಸೂರ್ಯ/ತೀರ್ಥಹಳ್ಳಿ: ತೀರ್ಥಹಳ್ಳಿಯ ನರಸತ್ತು ಮಲಗಿದ್ದ ಪಟ್ಟಣ ಪಂಚಾಯಿತಿಗೆ ಶಕ್ತಿ ಬಂದಂತಾಗಿದೆ ಮುಖ್ಯಾಧಿಕಾರಿಯಾಗಿ ನಾಗರಾಜ್ ಅಧಿಕಾರ ಸ್ವೀಕರಿಸಿದ್ದಾರೆ, ಮುಖ್ಯಾಧಿಕಾರಿ ನಾಗರಾಜ್ ಈ ಹಿಂದೆ ಕರ್ತವ್ಯ ನಿರ್ವಹಿಸಿರುವ ಕಡೆ ಎಲ್ಲಾ ಸಾಕಷ್ಟು ಹೆಸರು ಗಳಿಸಿರುವ ಯುವ ಉತ್ಸಾಹಿ ಯುವಕರಾಗಿದ್ದಾರೆ. ನಾಗರಾಜ್ ಇವರನ್ನು ಸರ್ಕಾರ ಕಳೆದ 13ನೇ ತಾರೀಖಿನಂದು ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಗೆ ವರ್ಗಾವಣೆಮಾಡಿ ಆದೇಶ ಹೊರಡಿಸಿತ್ತು .. ನಾಗರಾಜ್ ಅವರು ಇಂದು(ಜುಲೈ,16 ) ರಂದು ಪಟ್ಟಣ ಪಂಚಾಯಿತಿಯ ಮುಖ್ಯಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ, ತೀರ್ಥಹಳ್ಳಿ ಸಮಸ್ತ ನಾಗರಿಕರ ಪರವಾಗಿ ಪಟ್ಟಣ ಪಂಚಾಯತ್ ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ ಜೋತೆಗೆ ನಿಮ್ಮ ಅಧಿಕಾರದ ಅವಧಿಯಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಅಭಿವೃದ್ಧಿಯ ಪತದತ್ತಸಾಗಿ ಮಾದರಿ ಪಟ್ಟಣ ಪಂಚಾಯಿತಿಯಾಗಿ ಹೆಗ್ಗಳಿಕೆಯನ್ನು ಗಳಿಸಲಿ ಎಂದು ತೀರ್ಥಹಳ್ಳಿಯ ಪಟ್ಟಣಕ್ಕೆ ಸ್ವಾಗತಿಸಿದ್ದಾರೆ…
ನಾಗರಾಜ್ ಅವರು ಈ ಹಿಂದೆ ಉಳ್ಳಾಲ ನಗರಸಭೆ ಸೋಮೇಶ್ವರ ಪುರಸಭೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾರ್ಕಳ ಪುರಸಭೆ ಮತ್ತು ಮೂಡುಬಿದರೆ ಪುರಸಭೆಗಳಲ್ಲಿ ಕರ್ತವ್ಯ ನಿರ್ವಹಿಸಿ ಜನಮನ ಗಳಿಸಿದ್ದಾರೆ.ನಾಗರಾಜ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಊರುಗಳಲೆಲ್ಲಾ ಉತ್ತಮವಾದಂತಹ ಕಾರ್ಯನಿರ್ವಹಿಸಿರುವ ಹಿನ್ನಲೆಯಲ್ಲಿ ಜನ ಸ್ನೇಹಿ ಅಧಿಕಾರಿ ಎಂದು ಹೆಸರು ಮಾಡಿದಂತಹ ವ್ಯಕ್ತಿಯಾಗಿದ್ದರೆ. ತೀರ್ಥಹಳ್ಳಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ನಾಗರಾಜ್ ಶಕ್ತಿ ತುಂಬಲಿ ಪಟ್ಟಣ ಪಂಚಾಯತಿ ಅಭಿವೃದ್ಧಿಯ ಕಡೆಗೆ ಸಾಗಲಿ…..