ವಿನೋದ್ ರಾಜ್
ರಾತ್ರೋರಾತ್ರಿ ಸಾಗರದ ಬಿಜೆಪಿಯ ಕಾರ್ಯಕರ್ತ ವಿನೋದ್ ರಾಜ್ ಅವರನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ.! ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಬಿ ವೈ ರಾಘವೇಂದ್ರ ಮತ್ತು ಪಕ್ಷದ ಮುಖಂಡರು
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ವಿನೋದ್ ರಾಜ್ ಬಿನ್ ಲೇಟ್ ಭಾಸ್ಕರ್ ಶೆಟ್ಟಿ 29 ವರ್ಷ ಗಾಣಿಗರ ಜಾತಿ, ಕಾರ್ ಡ್ರೈವಿಂಗ್ ಮತ್ತು ಸಿಮೆಂಟ್ ಇಟ್ಟಿಗೆ ತಯಾರಿಸುವ ಕೆಲಸ. ಎಸ್.ಎನ್. ನಗರ, ಬಡಾವಣೆ ಸಾಗರ ಟೌನ್, ಇವರ ಮೇಲೆ ವಿನಾಕಾರಣ ಇಲ್ಲದ ಸಲ್ಲದ ಆರೋಪವನ್ನು ಮಾಡಿ ಸಾಗರ ಉಪ ವಿಭಾಗಾಧಿಕಾರಿಯರು ಪೋಲೀಸ್ ಕಾಯ್ದೆಯಂತೆ ಬೀದರ್ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
ಶಿವಮೊಗ್ಗ ಜಿಲ್ಲೆ ನಿವಾಸಿಯಾದ ಭಾರತೀಯ ಜನತಾ ಪಾರ್ಟಿಯ ಪ್ರಮುಖ ಕಾರ್ಯಕರ್ತರಾಗಿ ಕಳೆದ ಹಲವಾರು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ.
ಕೂಡಲೇ ಗಡಿಪಾರು ಆದೇಶವನ್ನು ರದ್ದುಪಡಿಸಬೇಕೆಂದು ಈ ಮೂಲಕ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಬಿಜೆಪಿಯ ಸಂಸದ ಬಿ ವೈ ರಾಘವೇಂದ್ರ ಅವರು ಮತ್ತು ಜಿಲ್ಲಾ ಬಿಜೆಪಿಯ ಪ್ರಮುಖರು,ಮುಖಂಡರು ಹಾಗೂ ಕಾರ್ಯಕರ್ತರು ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಕುಳಿತು ಹೋರಾಟದ ಮೂಲಕ ಮನವಿ ಸಲ್ಲಿಸಲಾಗಿದೆ.