ಲಕ್ನೋ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿಯೊಬ್ಬಳ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಹಂತಕರ ಬೆನ್ನು ಬಿದ್ದ ಪೋಲಿಸರು ಮೂರು ದಿನಗಳ ಬಳಿಕ ಆಕೆಯ ಪ್ರಿಯತಮ ಮತ್ತು ನಾಲ್ವರು ಸಹಚರರನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ…..
ಪ್ರೀಯಕರ ಆದೇಶ್ ಸಹಚರರಾದ ದೀಪಕ್ ಆರ್ಯನ್ ಮತ್ತು ರೋಹಿತ್ ಸಂದೀಪ್
ಲಕ್ನೋ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿಯೊಬ್ಬಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಮೂರು ದಿನಗಳ ನಂತರ ಆಕೆಯ ಪ್ರಿಯಕರನು ಸೇರಿದಂತೆ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಹಿನ್ನೆಲೆ: 2015 ರಲ್ಲಿ ರಾಂಬಿರಿ ವಿನೋದ್ ಎನ್ನುವ ಹುಡುಗನ ಜೋತೆಗೆ ರಾಂಬಿರಿ ಎನ್ನುವ ಹುಡುಗಿಯ ಮದುವೆಯಾಗಿತ್ತು. ಅದೇಕೊ ವರ್ಷ ಉರುಳುವ ಮುನ್ನವೇ ದಂಪತಿಗಳ ಬದುಕಿನಲ್ಲಿ ಹೊಂದಾಣಿಕೆ ಇಲ್ಲದೆ ವಿಚ್ಚೇದನ ಪಡೆದು ದೂರವಾಗಿದ್ದರು.
ವಿಚ್ಚೇದನ ಪಡೆದ ನಂತರ ರಾಂಬಿರಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದಳು. ಅ ಸಮಯದಲ್ಲಿ ರಾಂಬಿರಿ ಆದೇಶ್ ಎನ್ನುವ ಯುವಕನ ಜೋತೆಗೆ ಸಲಿಗೆಗೆ ಬಿದ್ದಳು. ಇಬ್ಬರ ನಡುವಿನ ಸಲಿಗೆ ಪ್ರೀತಿಯ ಸುಳಿಗೆ ಸಿಲುಕಿತ್ತು. ಇಬ್ಬರ ನಡುವೆ ಮದುವೆಯೊಂದನ್ನು ಬಿಟ್ಟು ಎಲ್ಲವು ಮುಗಿದು ಹೋಗಿತ್ತು ಈ ಕಾರಣದಿಂದಲೇ ರಾಂಬಿರಿ ಗರ್ಭಿಣಿಯಾಗಿದ್ದಾಳೆ. ಹೆತ್ತವರ ಎದುರು ಮಾನ ಹೋಗುವ ಮೊದಲು ನನ್ನನ್ನು ಮದುವೆಯಾಗು ಎಂದು ರಾಂಬಿರಿ ಆದೇಶ್ ಬಳಿ ಪದೇ ಪದೇ ಒತ್ತಾಯಿಸುತ್ತಿದ್ದಳಂತೆ. ತೆವಲು ತೀರಿದ ಮೇಲೆ ಈಕೆಯನ್ನು ಮದುವೆಯಾಗಲು ಇಷ್ಟವಿಲ್ಲದ ಆದೇಶ್ ಪ್ರಿಯತಮೆಗೆ ಚಟ್ಟಕಟ್ಟಲು ರೇಡಿಯಾದ ಇತ ತೇವಲಿಗಷ್ಟೆ ಆಕೆಯನ್ನು ಮೊಹಿಸಿದ್ದನಂತೆ ತೇವಲು ತೀರಿದ ಮೇಲೆ ಆಕೆ ಬೇಡವಾಗಿದ್ದಾಳೆ. ಆಕೆಯಿಂದ ಮದುವೆಯಾಗುವಂತೆ ಮತ್ತಷ್ಟು ಒತ್ತಡ ಬರಬಹುದೆಂದು ತಿರ್ಮಾನಿಸಿದ್ದ ಹಂತಕ ತನ್ನ ಸ್ನೇಹಿತರೊಂದಿಗೆ ಸೇರಿ ಪ್ರೀತಿಸಿದಾಕೆಯನ್ನೆ ಕೊಲೆಗೈಯುವ ಸಂಚನ್ನು ರೂಪಿಸಿಯೆ ಬಿಟ್ಟಿದ್ದ ಎಂದು ಈ ಪ್ರಕರಣದ ತನಿಖೆ ಮಾಡಿದ ಪೊಲೀಸರೆ ಮಾದ್ಯಮ ಮುಂದೆ ಹೇಳಿದ್ದಾರೆ.!
ಹತ್ಯೆಯ ಮುನ್ನ
ಜು.2 ರಂದು ಆದೇಶ್ ತನ್ನ ಪ್ರಿಯತಮೆ ರಾಂಬಿರಿಯನ್ನು ಹೊಲ ಒಂದರ ಹತ್ತಿರ ಬರುವಂತೆ ಖುಷಿಯಿಂದಲೆ ಕರೆದಿದ್ದ. ಈಕೆಯ ಹತ್ಯೆಮಾಡಲು ಸಹಾಯಕ್ಕಾಗಿ ತನ್ನ ನಾಲ್ವರು ಸ್ನೇಹಿತರನ್ನು ಮೊದಲೇ ಅಲ್ಲಿಗೆ ಬರುವಂತೆ ಕರೆಸಿದ್ದ ಪಾಪಿ. ಪ್ರೀತಿಸಿದವನು ಕರೆದನೆಂದು ಓಡೋಡಿ ಹೋದ ರಾಂಬಿರಿಗೆ ಎದುರಾಗಿದ್ದು ತನ್ನ ಸಾವಿನ ಸುಳಿವು. ರಾಂಬಿರಿ ಆದೇಶನ ಹೇಳಿದ ಹೊಲದ ಬಳಿಗೆ ತಲುಪುತ್ತಿದ್ದಂತೆ ಹಂತಕರು ತಯಾರಾಗಿ ನಿಂತಿದ್ದರು ರಾಂಬಿರಿ ಮೇಲೆ ಹಲ್ಲೆಗೈದು, ಇಟ್ಟಿಗೆಯಿಂದ ಹೊಡೆದು ಸ್ಥಳದಲ್ಲೇ ಸಾಯಿಸಿ ಬಿಟ್ಟಿದ್ದಾರೆ. ಇದಾದ ಬಳಿಕ ಶವವನ್ನು ಹೊಲದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾಂಬಿರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಮೃತಳ ಕುಟುಂಬ ದೂರು ನೀಡಿದ್ದಾರೆ.
ಪೊಲೀಸರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ವಶಕ್ಕೆ ಪಡೆದ ಬಳಿಕ ಪ್ರಿಯಕರ ಆದೇಶ್ ಆತನ ಸ್ನೇಹಿತರಾದ ದೀಪಕ್, ಆರ್ಯನ್, ಸಂದೀಪ್ ಮತ್ತು ರೋಹಿತ್ ರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿದೆ.
ಸುಧೀರ್ ವಿಧಾತ, ಶಿವಮೊಗ್ಗ