ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಆಟ್ಟಹಾಸ.! ಹವಾ ಮೆಂಟೇನ್ ಮಾಡಲುಹೊದ ರೌಡಿ ಶೀಟರ್ ಕೇರಂ ದಿನೇಶ್  ಲಾಂಗಿನೇಟಿಗೆ ಉಸಿರು ಬಿಟ್ಟಿದ್ದಾನೆ..!

ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಆಟ್ಟಹಾಸ.! ಹವಾ ಮೆಂಟೇನ್ ಮಾಡಲುಹೊದ ರೌಡಿ ಶೀಟರ್ ಕೇರಂ ದಿನೇಶ್  ಲಾಂಗಿನೇಟಿಗೆ ಉಸಿರು ಬಿಟ್ಟಿದ್ದಾನೆ ..!

ಸುಪಾರಿ ಕಿಲ್ಲರ್ ದಿನೇಶನ ಹತ್ಯೆಗೆ ಸ್ಕೆಚ್ ಹಾಕಿದವರು ಆತನ ಮಿತ್ರರೆ.! ಸ್ನೇಹಿತರಿಂದಲೆ ಹತ್ಯೆಯಾಗಿ ಸುಡುಗಾಡು ಸೇರಿದ ರೌಡಿಶೀಟರ್ ದಿನೇಶ..! ದಿನೇಶನಿಗೆ ಸಣ್ಣ ಸುಳಿವು ಇರಲಿಲ್ಲ ನನ್ನ ಸಾವಿಗೆ ಜೋತೆಗಿದ್ದ ನನ್ನ ಸ್ನೇಹಿತರೆ ಹೊಂಚು ಹಾಕಿ ಕುಳಿತಿದ್ದಾರೆಂದು.! ಸ್ಕೆಚ್ ಹಾಕಿ ಕೇವಲ ಮೂರೆ ನಿಮಿಷದಲ್ಲಿ ದಿನೇಶನನ್ನು ಮನಬಂದಂತೆ ಕೊಚ್ಚಿ ಉಸಿರು ನಿಲ್ಲಿಸಿದ್ದಾರೆ ಹಂತಕ ಸ್ನೇಹಿತರು.!? ಕೊನೆಗೂ ಮತ್ತೊಮ್ಮೆ ಸಾಬೀತಾಗಿದೆ ಪಾತಕಲೋಕದಲ್ಲಿ ಜೋತೆಗಿದ್ದವನೆ ಸ್ಕೆಚ್ ಹಾಕಿ ಕೊಲೆ ಮಾಡುವುದೆ ರೌಡಿಸಂನ ನಿಯತ್ತು.!!

ASHWASURYA/SHIVAMOGGA

✍️ ಸುಧೀರ್ ವಿಧಾತ

ಬೆಂಗಳೂರು:ರಾಜಧಾನಿಯಲ್ಲಿ ರೌಡಿಗಳು ಮತ್ತೆ ಆಟ್ಟಹಾಸ ಮೆರೆದಿದ್ದಾರೆ.ಏರಿಯಾದಲ್ಲಿ ಹವಾ ಮೆಂಟೇನ್ ಮಾಡೊ ವಿಷಯಕ್ಕೆ ಸಂಬಂದಿಸಿದಂತೆ ರೌಡಿಗಳ ಗ್ಯಾಂಗೊಂದು ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್​  ರೌಡಿ ಕೇರಂ ದಿನೇಶ್ ನನ್ನು ಸರಿಯಾದ ಸ್ಕೆಚ್ ಹಾಕಿ ಮಿಸುಕಾಡದಂತೆ ಲಾಕ್ ಮಾಡಿಕೊಂಡು ಬೆಂಗಳೂರಿನ ಕಮ್ಮನಹಳ್ಳಿಯ ಓಯೋ ಹೋಟೆಲ್‌ನಲ್ಲಿ  ಲಾಂಗು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ್ದಾರೆ. ಇತ್ತೀಚೆಗೆ ಭೂಗತ ಲೋಕದಲ್ಲಿ ರೌಡಿಗಳನ್ನ ರೌಡಿಗಳೆ ಮುಗಿಸಿ ಅಧಿಪತ್ಯ ಸಾಧಿಸುವ ನಿಟ್ಟಿನಲ್ಲಿ ನೆತ್ತರು ಹರಿಸುತ್ತಿದ್ದಾರೆ. ರೌಡಿಗಳಿಗೆ ರೌಡಿಗಳೆ ದುಶ್ಮನ್ ಗಳು. ಏರಿಯಾದಲ್ಲಿ ಹವಾ ಮೆಂಟೇನ್ ಹಫ್ತಾ ವಸೂಲಿಯ ಜೋತೆಗೆ ಡಾನ್ ಅಗಿ ಮೆರೆಯುವ ಹಾದಿಯಲ್ಲಿ ನೆತ್ತರ ಹೆಜ್ಜೆ ಇಡುತ್ತಿದ್ದಾರೆ.! ಈ ಹಾದಿಯಲ್ಲಿ ರಾತ್ರಿ ಮಲಗಿದ ರೌಡಿ ಬೆಳಿಗ್ಗೆ ಎನ್ನುವ ಹೊತ್ತಿಗೆ ಖಲ್ಲಾಸ್ ಆಗಿರುತ್ತಾನೆ.


ಇದಕ್ಕೊಂದು ತಾಜಾ ಉದಾಹರಣೆ ಏರಿಯಾದಲ್ಲಿ ಹವಾ ಮೆಂಟೇನ್‌ ಮಾಡುವುದಕ್ಕೆಂದು ಮಚ್ಚು ಮಸಿಯುತ್ತಿದ್ದ ಎರಡು ರೌಡಿಗಳ ಗ್ಯಾಂಗಿನ ರೌಡಿಗಳ ಪೈಕಿ ರೌಡಿಶೀಟರ್ ಸುಪಾರಿ ಕಿಲ್ಲರ್ ಕೇರಂ ದಿನೇಶ್‌ನನ್ನು ವಿರೋಧಿ ಪಡೆ ಸ್ಪೀಡ್ ದಿಲೀಪನ ಗ್ಯಾಂಗ್‌ನಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕೊಲೆಯಾದ ರೌಡಿಶೀಟರ್ ಸುಪಾರಿ ಕಿಲ್ಲರ್ ದಿನೇಶ್ ಅಲಿಯಾಸ್ ಕೇರಂ ದಿನೇಶ (31).ನನ್ನು ಏಳು ಮಂದಿಯ ಟೀಮ್ ನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.ಹತ್ಯೆಯಾದ ಕೆಲವು ಸಮಯದಲ್ಲೇ ಸ್ಥಳಕ್ಕೆ ಆಗಮಿಸಿದ ಬಾಣಸವಾಡಿ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಕೇಲವು ಮಾಹಿತಿ ಕಲೆಹಾಕಿದ್ದರು. ನಂತರ ಕೊಲೆಯಾದ ರೌಡಿಶೀಟರ್‌ನ ಜೊತೆಗೆ ಬಂದಿದ್ದವರೆ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ಬಾಣಸವಾಡಿಯ ಏರಿಯಾದಲ್ಲಿ ತಮ್ಮದೆ ಹವಾ ಮೆಂಟೇನ್ ಮಾಡುವ ವಿಚಾರದಲ್ಲಿ ಕೊಲೆಯಾದ ರೌಡಿಶೀಟರ್ ಕೇರಂ ದಿನೇಶ್ ಹಾಗೂ ದಿಲೀಪ್‌ ಅಲಿಯಾಸ್ ಸ್ಪೀಡ್ ದಿಲೀಪನ ಗ್ಯಾಂಗ್‌ ನಡುವೆ ಕೆಲವು ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿತ್ತು. ಈ ವಿಷಯ ಪೊಲೀಸರಿಗು ಗೋತ್ತಿತ್ತು ಈ ಕಾರಣಕ್ಕೆ ದಿಲೀಪ್ ಹಾಗೂ ದಿನೇಶ್ ನನ್ನು ಕರೆಸಿ ಸೈಲೆಂಟ್‌ ಆಗಿರುವಂತೆ ಖಡಕ್ ಸೂಚನೆಯನ್ನೂ ನೀಡಲಾಗಿತ್ತು. ಆದರೆ ಏರಿಯಾದಲ್ಲಿ ಹಿಡಿತ ಸಾಧಿಸಲು ಎರಡು ಟೀಮ್ ಗಳು ತಲೆ ಉರುಳಿಸಲು ತೆರೆಮರೆಯಲ್ಲಿ ಸಿದ್ಧರಾಗಿದ್ದರು.! ಆದರೆ ಕೇರಂ ದಿನೇಶನ ಜೊತೆಗಿದ್ದ ಹಳೆಯ ಸ್ನೇಹಿತರು ಆತನಿಂದ ದೂರವಾಗಿ ಸ್ಪೀಡ್‌ ದಿಲೀಪನ ಗ್ಯಾಂಗ್‌ ಸೇರಿದ್ದರು.ಜೋತೆಗೆ ಒಳಗೋಳಗೆ ಸ್ನೇಹಿತ ದಿನೇಶನಿಗೆ ದೀಲಿಪನ ಜೋತೆ ಸೇರಿ ಮುಹೂರ್ತ ಫಿಕ್ಸ್ ಮಾಡಿದ್ದರು.ನನ್ನ ಹತ್ಯೆಗೆ ಸ್ಕೆಚ್ ಹಾಕಿ ಕುಳಿತಿದ್ದಾರೆ ನನ್ನ ಸ್ನೇಹಿತರು ಎನ್ನುವ ಸಣ್ಣ ಸುಳಿವು ದಿನೇಶನಿಗೆ ಇರಲಿಲ್ಲ.! ಈ ಬಗ್ಗೆ ಸಣ್ಣ ಮಾಹಿತಿ ಇಲ್ಲದೇ ತನ್ನ ಸ್ನೇಹಿತರೆಂದು ಜೊತೆಗೆ ಕರೆದುಕೊಂಡು ಹೋಟೆಲ್ಲಿಗೆ ಹೋಗಿದ್ದ ಕೇರಂ ದಿನೇಶ.! ಅಷ್ಟೋತ್ತಿಗಾಗಲೆ ದಿನೇಶನ ಜೋತೆಗಿದ್ದೆ ಕೊಲೆಗೆ ಸ್ಕೆಚ್ ಹಾಕಿದ್ದ ಹಂತಕ ಸ್ನೇಹಿತರು ತಮ್ಮ ಸ್ಕೆಚ್ ನಂತೆ ಬುಧವಾರ ಮಧ್ಯಾಹ್ನ ಹೋಟೆಲ್ ನಲ್ಲಿ ಆತನ ಜೊತೆಗಿದ್ದೆ ದಿನೇಶನ ಮೇಲೆ ಏಕಾಏಕಿ ಲಾಂಗು ಮಚ್ಚುಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಅಂದು ನೆಡೆದದ್ದು ಎನು.?

ಇನ್ನು ಕೊಲೆಗೆ ಸಂಬಂಧಪಟ್ಟಂತೆ ಹೋಟೆಲ್​ ರಿಸಪ್ಷನಿಸ್ಟ್ ಮುರುಳೀಧರ್ ಮಾತನಾಡಿ, ಸರ್ವೀಸ್ ಅಪಾರ್ಟ್ಮೆಂಟ್​ನಲ್ಲಿ ಈ ಘಟನೆ ನಡೆದಿದೆ. ಮೊದಲು ಏಳು ಜನ ರೂಂ ಕೇಳಿಕೊಂಡು ಬಂದಿದ್ದಾರಂತೆ ಏನೋ ಮಾತನಾಡಬೇಕು ಎಂದು ರೂಂ ಕೇಳಿದರು, ಅದಾದ ಬಳಿಕ ಅಮೌಂಟ್ ಕೇಳಿದಾಗ ಫೋನ್ ಪೇ ಮಾಡುವುದಾಗಿ ಹೇಳಿದರು. ಆದರೆ, ಫೋನ್ ಪೇ ಇಲ್ಲ, ಕ್ಯಾಶ್ ಕೊಡಿ ಎಂದು ಹೇಳಿದೆ. ತಕ್ಷಣ ಹಣ ತರೋದಕ್ಕೆ ಇಬ್ಬರು ಆಚೆ ತೆರಳಿದರು. ನಂತರ ಮತ್ತೆ ಐದು ಜನ ಬಂದು ಬ್ಯಾಗ್​ನಲ್ಲಿದ್ದ ಮಚ್ಚನ್ನು ತೆಗೆದು ಸೋಫಾ ಮೇಲೆ ಕುಳಿತಿದ್ದ ದಿನೇಶ್​ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಹೇಳಿದರು.

ರೌಡಿಶೀಟರ್ ದಿನೇಶ್‌ನ ಜೊತೆಗಿದ್ದ ಸ್ನೇಹಿತರು ಹೋಟೆಲ್ ಓಯೋದಲ್ಲಿ ರೂಮ್ ಮಾಡಿದ್ದರು ರೂಮ್ ರೆಂಟ್ ಕೊಡಲು ಹಣವಿಲ್ಲವೆಂದು ಎಟಿಎಂ ಕಾರ್ಡ್ ಕೊಡುತ್ತೇವೆ ಎಂದು ರಿಸೆಪ್ಷನಿಷ್ಟ್ ಜೊತೆಗೆ ಮಾತಿಗೆ ಇಳಿದಿದ್ದರು. ಈ ವೇಳೆ ಅದೆ ಓಯೊ ಲಾಡ್ಜೀನಾ ಸೋಫಾದಲ್ಲಿ ಸುಪಾರಿ ಕಿಲ್ಲರ್ ದಿನೇಶ್ ಕೂತಿದ್ದ.! ಕ್ಯಾಶ್ ಕೌಂಟರ್ ನಲ್ಲಿ ಗಲಾಟೆ ಮಾಡುತ್ತಿದ್ದ ಸ್ನೇಹಿತರು ಏಕಾಏಕಿ ಮಚ್ಚು ಲಾಂಗುಗಳಿಂದ ದಿನೇಶನ ಮೇಲೆ ಮನಬಂದಂತೆ ಕೊಚ್ಚಿದ್ದಾರೆ ಮಿಸುಕಾಡಲು ಸಾಧ್ಯವಾಗದೆ ದಿನೇಶ ನೆತ್ತರ ಮಡುವಿನಲ್ಲಿ ಉಸಿರು ಚೆಲ್ಲಿದ್ದಾನೆ.ಹಂತಕರು ಕೇವಲ 3 ನಿಮಿಷದಲ್ಲಿ ನಟೋರಿಯಸ್ ರೌಡಿ ದಿನೇಶನನ್ನು ಕೊಂದು ಎಸ್ಕೇಪ್ ಆಗಿದ್ದರು.!

ಕೊಲೆಯಾದ ಸುಪಾರಿ ಕಿಲ್ಲರ್ ರೌಡಿಶೀಟರ್ ದಿನೇಶ್ ಡಿ.ಜೆ.ಹಳ್ಳಿಯ ಆನಂದಪುರ ನಿವಾಸಿಯಾಗಿದ್ದ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್‌ ಠಾಣೆ, ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗಳಲ್ಲಿ ದಿನೇಶ್‌ನ ವಿರುದ್ದ ರೌಡಿ ಶೀಟ್ ತೆರೆಯಲಾಗಿತ್ತು. ಇತನ ಸಹಚರರೇ ಏರಿಯಾದಲ್ಲಿ ಅಧಿಪತ್ಯ ಸಾಧಿಸುವ ನಿಟ್ಟಿನಲಿ ಸ್ನೇಹಿತನನ್ನೆ ಕೊಲೆ ಮಾಡಿದ್ದಾರೆ. ಇನ್ನು ತನ್ನ ಏರಿಯಾದಲ್ಲಿ ತನ್ನದೆ ಹವಾ ಮೆಂಟೇನ್‌ ಮಾಡುವುದಕ್ಕೆ ಮುಂದಾಗಿದ್ದ ದಿನೇಶ ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿಸುಕೊಂಡು ಜೀವವನ್ನೇ ಕಳೆದುಕೊಂಡು ಹೆಣವಾಗಿ ಮಲಗಿದ್ದಾನೆ.ಅವನು ಬಯಸಿದ್ದ ಏರಿಯಾದ ಡಾನ್ ಪಟ್ಟ, ಹವಾ ಮೆಂಟೇನ್ ಎನ್ನುವುದೇಲ್ಲ ಆತನ ನೆತ್ತಿರಿನ ಕೊಡಿಯಲ್ಲಿ ಒದ್ದೆಯಾಗಿ ಹೋಗಿದೆ ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ ಗಲಾಟೆ ಮಾಡದಂತೆ ಎಲ್ಲ ರೌಡಿಶೀಟರ್‌ಗಳಿಗೆ ಮನೆ ಮಬೆಗೆ ಬೇಟಿ ಕೊಟ್ಟು ಪೊಲೀಸರು ಎಚ್ಚರಿಕೆ ಕೊಟ್ಟಿದ್ದರು ಈ ಗ್ಯಾಪ್ ನಲ್ಲೆ ರೌಡಿಯೊಬ್ಬನ ಹತ್ಯೆಯಾಗಿದ್ದು ಪಾತಕಲೋಕದಲ್ಲಿ ರಿವೆಂಜಿನ ನೆರಳಲ್ಲಿ ಬದುಕುತ್ತಿರುವ ರೌಡಿಗಳಿಗೆ ಲೈಟಾಗಿ ನಡುಕ ಶುರುವಾಗಿದೆ.

ಸುಪಾರಿ ಕಿಲ್ಲರ್ ದಿನೇಶನ ಹತ್ಯೆ ಗೈದಾ 12 ಮಂದಿಯ ಬಂಧನ.!; ಸಹಚರರಿಂದಲೆ ಹತ್ಯೆಯಾದ ರೌಡಿಶೀಟರ್ ದಿನೇಶ್.

✍️ ಸುಧೀರ್ ವಿಧಾತ

ಕಮ್ಮನಹಳ್ಳಿಯ ಓಯೋ ಹೋಟೆಲ್ ನಲ್ಲಿ ರೌಡಿಶೀಟರ್ ದಿನೇಶನ ಹೆಣ ಬಿಳುತ್ತಿದ್ದಂತೆ ಘಟನಾ ಸ್ಥಳ ಪರಿಶೀಲಿಸಿದ ಬಾಣಸವಾಡಿಯ ಪೋಲಿಸರು ಹಂತಕರ ಹೆಡೆಮುರಿಕಟ್ಟಲು ಮುಂದಾಗಿದ್ದರು.


 ಬಾಣಸವಾಡಿಯ ಠಾಣೆಯ ಸರಹದ್ದಿನಲ್ಲಿ ನಡೆದಿದ್ದ ರೌಡಿ ದಿನೇಶ್‌ಕುಮಾರ್ ಅಲಿಯಾಸ್ ಕೇರಂ ದಿನೇಶ್ (34)ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
ದೇವರ ಜೀವನಹಳ್ಳಿಯ (ಡಿ.ಜಿ.ಹಳ್ಳಿ) ಆನಂದಪುರದ ನಿವಾಸಿ ದಿನೇಶ್‌ನನ್ನು ಕಮ್ಮನಹಳ್ಳಿ ಬಳಿಯ ಸರ್ವೀಸ್ ಅಪಾರ್ಟ್‌ಮೆಂಟ್‌ವೊಂದರ ಹೋಟೆಲ್ ಓಯೋದಲ್ಲಿ ಹತ್ಯೆ ಮಾಡಲಾಗಿತ್ತು.ತಕ್ಷಣವೇ ಕಾರ್ಯಚರಣೆಗೆ ಇಳಿದ ಪೋಲಿಸರ ತಂಡ 12 ಮಂದಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೌಡಿಗಳಾದ ದಿಲೀಪ್‌ ಸಾಗರ್ ಅಲಿಯಾಸ್ ಸ್ಪೀಡ್ ದಿಲೀಪ್, ಅಜಯ್ ಕ್ರಿಸ್ಟೊಫರ್, ಅರವಿಂದ್, ನಿಖಿಲ್ ಅಲಿಯಾಸ್ ವಿಕ್ಕಿ, ಗೌತಮ್, ದರ್ಶನ್, ಮೆಲ್ವಿನ್, ಕಾರ್ತಿಕ್, ಸತೀಶ್, ಕಿಶೋರ್, ದಿವಾಕರ್ ಹಾಗೂ ಶೇಖರ್ ಬಂಧಿತರು’ ಎಂದು ತಿಳಿದುಬಂದಿದೆ.

ದಿನೇಶನ ಸಹಚರರೆ ದಿನೇಶನಿಗೆ ಸ್ಕೆಚ್ ಹಾಕಿ ಕುಳಿತಿದ್ದರು. ರೌಡಿಗಳ ನಡುವೆ ಇತ್ತು ಹತ್ಯೆಯ ಸಂಚು.!

‘ಸುಲಿಗೆ, ದರೋಡೆಗೆ ಯತ್ನ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಿನೇಶ್‌ ಅಲಿಯಾಸ್ ಕೇರಂ ದಿನೇಶ್ ಆರೋಪಿಯಾಗಿದ್ದ. ಕಮರ್ಷಿಯಲ್ ಸ್ಟ್ರೀಟ್ ಹಾಗೂ ಜೆ.ಸಿ.ನಗರ ಠಾಣೆಗಳ ರೌಡಿ ಪಟ್ಟಿಯಲ್ಲಿ ದಿನೇಶನ ಹೆಸರು ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಿನೇಶ್ ನ ವಿರೋಧಿ ಗ್ಯಾಂಗಿನ ರೌಡಿ ದಿಲೀಪ್‌ ಸಾಗರ್ ವಿರುದ್ಧವೂ ಕೆಲವು ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ದಿನೇಶ್ ಹಾಗೂ ದಿಲೀಪ್‌ ಸಾಗರ್ ನಡುವೆ ಹಲವು ವರ್ಷಗಳಿಂದ ವೈಷಮ್ಯವಿತ್ತು.ಕೆಲವು ಬಾರಿ ಇಬ್ಬರ ಗ್ಯಾಂಗಿನ ನಡುವೆ ಲಾಂಗು ಮಚ್ಚುಗಳು ಮೆರದಾಡಿದ್ದವು.ಕೇವಲ ಏರಿಯಾ ಒಂದನ್ನು ತಮ್ಮ ತಮ್ಮ ಹಿಡಿತ ಸಾಧಿಸಲು ಎರಡು ಗ್ಯಾಂಗುಗಳು ಹವಣಿಸುತ್ತಿದ್ದವು ಈ ಕಾರಣದಿಂದಲೇ ಸ್ಕೆಚ್ ಹಾಕಿ ದಿನೇಶನನ್ನು ಕೊಚ್ಚಿ ಕೊಲೆಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿದುಬಂದಿದೆ.

ದಿನೇಶ್ ನಂಬಿಕೆ ಇಟ್ಟಿದ್ದ ಸಹಚರರಿಂದಲೇ ಹತ್ಯೆಯಾಗಿ ಹೋಗಿದ್ದಾನೆ.ದಿನೇಶನ ವಿರೋಧಿ ಪಡೆಯ ರೌಡಿ ಲೀಡರ್ ದಿಲೀಪ್‌ ಸಾಗರ್‌ ಹತ್ಯೆಗೆ ಸಂಚು ರೂಪಿಸಿದ್ದ ದಿನೇಶ್,ಈ ವಿಷಯವನ್ನು ತನ್ನ ಸಹಚರರಿಗೆ ಹೇಳಿದ್ದ.! ಎಲ್ಲರೂ ಸೇರಿ ದಿಲೀಪ್‌ನನ್ನು ಕೊಲೆ ಮಾಡೋಣವೆಂದು ಸುಪಾರಿ ಕಿಲ್ಲರ್ ದಿನೇಶ್‌ ಹೇಳಿದ್ದ. ಈ ಸಂಗತಿ ದಿಲೀಪನಿಗೆ ಗೊತ್ತಾಗಿತ್ತು.! ದಿಲೀಪ ತತ್ಕ್ಷಣವೇ ದಿನೇಶನನ್ನೆ ಮುಗಿಸಲು ಸ್ಕೆಚ್ ಹಾಕಿದ್ದನಂತೆ.!

ಕೂಡಲೇ ಕಾರ್ಯಚರಣೆಗೆ ಇಳಿದ ದಿಲೀಪ್ ತನ್ನ ಎದುರಾಳಿ ದಿನೇಶನ ಸಹಚರರನ್ನೇ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದ.! ದಿಲೀಪ್ ದಿನೇಶನ ಸಹಚರರಿಗೆ ಹಲವು ಆಮಿಷವೊಡ್ಡಿ ದಿನೇಶ್‌ನನ್ನೇ ಕೊಲೆ ಮಾಡುವಂತೆ ಅವರಿಗೆ ಸುಪಾರಿ ಕೊಟ್ಟಿದ್ದ. ದಿಲೀಪನ ಆಮಿಷಕ್ಕೆ ತಲೆದೂಗಿದ ಹಂತಕರು ಸ್ಕೆಚ್ ಹಾಕೀ ದಿನೇಶನ ಜೋತೆಗೆ ಮಾರ್ಚ್ 27ರಂದು ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿದ್ದ ಓಯೋ ಹೋಟೆಲ್ ಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ದಿನೇಶ ಜೋತೆಗೆಗಿದ್ದ ಸಹಚರರಿಂದಲೆ ಹತ್ಯೆಯಾಗಿ ಹೋಗಿದ್ದ.! ದಿಲೀಪ ದಿನೇಶನ ಸಹಚರರಿಗೆ‌ ಕೊಟ್ಟ ಸುಪಾರಿ ಸೆಕ್ಸೆಸ್ ಆಗಿತ್ತು ಹಂತಕರು ದಿನೇಶ್‌ನನ್ನು ಮಿಸುಕಾಡದಂತೆ ಮಾಡಿ ಮೂರೆ ನಿಮಿಷದಲ್ಲಿ ಕೊಂದು ಮುಗಿಸಿದ್ದರು.

ಈ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ಪೋಲಿಸರ ಐದು ತಂಡಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಕೆಲವರು, ಮೃತ ದಿನೇಶ್‌ ಸಹಚರರು’ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಬೆಂಗಳೂರಿನ ಬಾಣಸವಾಡಿ ಮತ್ತು ಡಿಜೆ ಹಳ್ಳಿಯ ಏರಿಯಾದಲ್ಲಿ ಡಾನ್ ಎಂದು‌ ಮೆರೆಯುತ್ತಿದ್ದ ನಟೋರಿಯಸ್ ರೌಡಿಶೀಟರ್ ಸುಪಾರಿ ಕಿಲ್ಲರ್ ದಿನೇಶ ಅಲಿಯಾಸ್ ಕೆರಂ ದಿನೇಶನ ಅಂತ್ಯವಾಗಿದೆ. ತನ್ನ ಮೂವತ್ತ ನಾಲ್ಕನೆ ವಯಸ್ಸಿನಲ್ಲಿ ಪಾತಕಲೋಕದಲ್ಲಿ ನೆತ್ತರ ಹೆಜ್ಜೆ ಹಾಕಿ ಹೋದ ದಿನೇಶನ ಅಂತ್ಯವು‌ ನೆತ್ತರ ಮಡುವಿನಲ್ಲೆ ಆಗಿದೆ. ರೌಡಿಸಂ ಲೋಕದಲ್ಲಿ ಅಧಿಪತ್ಯ ಸಾಧಿಸಲು ಹೋರಟ ರೌಡಿಯೊಬ್ಬನ ಅಂತ್ಯವಾಗಿದೆ…..

Leave a Reply

Your email address will not be published. Required fields are marked *

Optimized by Optimole
error: Content is protected !!