ವಿಶ್ವ ಗುಬ್ಬಚ್ಚಿ, ವಿಶ್ವ ಅರಣ್ಯ, ವಿಶ್ವ ಜಲ ಹಾಗೂ ವಿಶ್ವ ಪವನ ವಿಜ್ಞಾನ ದಿನಾಚರಣೆ
ಶಿವಮೊಗ್ಗ, ಮಾರ್ಚ್ 19: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗ 90.8 ಎಫ್‍ಎಂ ಹಾಗೂ ನಿರ್ಮಲ ತುಂಗಾ ಅಭಿಯಾನ ಶಿವಮೊಗ್ಗ ಹಾಗೂ ನಗರದ ಬೇರೆ ಬೇರೆ ಕಾಲೇಜುಗಳ ಸಹಯೋಗದೊಂದಿಗೆ ಮಾ. 20 ರಂದು ಬೆಳಗ್ಗೆ 11.00ಕ್ಕೆ ನಗರದ ಅಲ್ ಮೊಹಮೂದ್ ಬಿ.ಎಡ್. ಕಾಲೇಜು ಆವರಣದಲ್ಲಿ “ವಿಶ್ವ ಗುಬ್ಬಚ್ಚಿ ದಿನಾಚರಣೆ”ಯನ್ನು ಆಚರಿಸುತ್ತಿದ್ದು, ಉದ್ಘಾಟಕರಾಗಿ ಪರಿಸರ ಅಧ್ಯಯನ ಕೇಂದ್ರದ ಖಜಾಂಚಿ ಎಸ್. ಚಂದ್ರಶೇಖರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಜೀವ ವೈವಿಧ್ಯತಾ ಮತ್ತು ಸಂಶೋಧನಾ ಪ್ರಯೋಗಾಲಯದ ಡಾ|| ನಂದಾ ಎ. ಭಾಗವಹಿಸಲಿದ್ದಾರೆ.
ಮಾ. 21 ರಂದು ಮಧ್ಯಾಹ್ನ 3.00ಕ್ಕೆ ನಗರದ ಕುವೆಂಪು ಶತಮಾನೋತ್ಸವ ಬಿ.ಎಡ್. ಕಾಲೇಜು ಆವರಣದಲ್ಲಿ “ವಿಶ್ವ ಜಲ ದಿನಾಚರಣೆ”ಯನ್ನು ಆಚರಿಸಲಾಗುತ್ತಿದ್ದು, ಉದ್ಘಾಟಕರಾಗಿ ವಿಜ್ಞಾನ ಚಿಂತಕ ಡಾ|| ಶೇಖರ್ ಗೌಳೆರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ದಾವಣಗೆರೆಯ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಭಾಗವಹಿಸಲಿದ್ದಾರೆ.
ಮಾ. 22 ರಂದು ಬೆಳಗ್ಗೆ 11.00ಕ್ಕೆ ನಗರದ ಮೈತ್ರಿ ಬಿ.ಎಡ್. ಕಾಲೇಜು ಆವರಣದಲ್ಲಿ “ವಿಶ್ವ ಅರಣ್ಯ ದಿನಾಚರಣೆ”ಯನ್ನು ಹಮ್ಮಿಕೊಂಡಿದ್ದು, ಉದ್ಘಾಟಕರಾಗಿ ಗೌಡ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮತ್ತು ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ಹೂವಯ್ಯ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಡಿ.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಎಂ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಬಹುಮಾನ ವಿತರಕರಾಗಿ ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಅರುಣಾದೇವಿ ಭಾಗವಹಿಸಲಿದ್ದಾರೆ.
ಮಾ. 25 ರಂದು ಬೆಳಗ್ಗೆ 11.00ಕ್ಕೆ ಜವಾಹರ್ ನವೋದಯ ವಿದ್ಯಾಲಯ ಗಾಜನೂರು ಕಾಲೇಜಿನ ಆವರಣದಲ್ಲಿ “ವಿಶ್ವ ಪವನ ವಿಜ್ಞಾನ” ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಉದ್ಘಾಟಕರಾಗಿ ರೋಟರಿ ಗೌವರ್ನರ್ ನಿವೃತ್ತ ಪ್ರಾಂಶುಪಾಲ, ಸಹ್ಯಾದ್ರಿ ಕಾಲೇಜಿನ ಪ್ರೊ. ಎ.ಎಸ್. ಚಂದ್ರಶೇಖರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಜೆಎನ್‍ಎನ್‍ಸಿಇ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮತ್ತು ಪರಿಸರ ಚಿಂತಕ ಡಾ|| ಕೆ.ಎಲ್.ಶ್ರೀಪತಿ ಭಾಗವಹಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಕ.ರಾ.ಮಾ.ನಿ.ಮಂ.ಯ ಉಪ ಪರಿಸರ ಅಧಿಕಾರಿ ಶ್ರೀಮತಿ ಶಿಲ್ಪ ಕೆ. ಹಾಗೂ ಕಾರ್ಯಕ್ರಮದ ಸಂಯೋಜಕ ದಿನೇಶ್ ಹೊಸನಗರ ಇವರುಗಳು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಗುವುದು ಎಂದು ಕ.ರಾ.ಮಾ.ನಿ.ಮ. ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.