ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ ಮತ್ತು ಮಗಳು ಮನೆಯಲ್ಲೇ ನಿಗೂಢವಾಗಿ ಸಾವು..!?
ಅಶ್ವಸೂರ್ಯ/ಶಿವಮೊಗ್ಗ ; ಭಾರತೀಯ ಮೂಲದ ದಂಪತಿಗಳು ಮತ್ತು ಅವರ ಮಗಳು ಕೆನಡಾದ ತಮ್ಮ ನಿವಾಸದಲ್ಲಿ ನಿಗೂಢವಾಗಿ ಶವವಾಗಿದ್ದಾರೆ.! ಮನೆಯಲ್ಲಿ ಮೂರು ಜನರ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಥಳೀಯ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಮಾರ್ಚ್ 7 ರಂದು ಒಂಟಾರಿಯೊ ಪ್ರಾಂತ್ಯದ ತಮ್ಮ ಮನೆಯಲ್ಲಿ ಬೆಂಕಿಯಿಂದ ಸುಟ್ಟ ಸ್ಥಿತಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಪ್ರಕಟಣೆ ತಿಳಿಸಿದೆ.
ನಿಗೂಢವಾಗಿ ಸಾವನಪ್ಪಿದ ಮೂವರಲ್ಲಿ ಒಬ್ಬರು ರಾಜೀವ್ ವಾರಿಕೂ (51), ಅವರ ಪತ್ನಿ ಶಿಲ್ಪಾ ಕೋಥಾ (47) ಮತ್ತು ಮಗಳು ಮೆಹಕ್ ವಾರಿಕೂ (16) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ ತಕ್ಷಣವೇ ಸ್ಥಳಕ್ಕೆ ಬಂದ ಪೋಲಿಸರು ಕಾರ್ಯಚರಣೆಗೆ ಇಳಿದು ಬೆಂಕಿ ನಂದಿಸಿದ್ದಾರೆ ಬಳಿಕ ಪೊಲೀಸರಿಗೆ ಮನೆಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.!!
ಆದರೆ ಆ ಸಮಯದಲ್ಲಿ ಸತ್ತವರ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಈ ನಿಟ್ಟಿನಲ್ಲಿ ತನಿಖೆ ಕೈಗೊಂಡ ಪೋಲಿಸರಿಗೆ ಮಾಹಿತಿ ಕಲೆಹಾಕಲು ಕೆಲವು ಸಮಯ ಬೇಕಾಯಿತು ಎಂದು ತನಿಖಾ ತಂಡ ತಿಳಿಸಿದೆ.
ಪೀಲ್ ಪೊಲೀಸ್ ಕಾನ್ಸ್‌ಟೇಬಲ್ ಟರೀನ್ ಯಂಗ್ ಅವರು ಸಿಟಿವಿ ನ್ಯೂಸ್‌ಗೆ ಬೆಂಕಿ ಹೊತ್ತಿರುವುದು ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ. ಒಂಟಾರಿಯೊ ಅಗ್ನಿಶಾಮಕ ಮಾರ್ಷಲ್ ಪ್ರಸ್ತುತ ನರಹತ್ಯೆ ಘಟಕದೊಂದಿಗೆ ತನಿಖೆ ನಡೆಸಲಾಗುತ್ತಿದ್ದು, ಬೆಂಕಿ ಆಕಸ್ಮಿಕವಾಗಿ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ವರದಿ ತಿಳಿಸಿದೆ.
ರಾಜೀವ್ ಮತ್ತು ಅವರ ಕುಟುಂಬ ಕಳೆದ 15 ವರ್ಷಗಳಿಂದ ಅಲ್ಲಿ ಕೆನಡಾದಲ್ಲಿ ವಾಸಿಸುತ್ತಿದ್ದರಂತೆ.ಈ ಕುಟುಂಬಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಇರಲಿಲ್ಲ ಎಂದು ನೆರೆಮನೆಯ ಕೆನೆತ್ ಯೂಸುಫ್ ಹೇಳಿದ್ದಾರೆ.
ಒಟ್ಟಿನಲ್ಲಿ ಭಾರತೀಯ ಮೂಲದ ಒಂದು ಸುಂದರ ಕುಟುಂಬ ಅಗ್ನಿ ಅವಘಡದಲ್ಲಿ ಸಾವಿನ ಮನೆ ಸೇರಿರುವುದು ಮಾತ್ರ ದುರಂತವೆ ಹೌದು.!