ಶಿರಾಳಕೊಪ್ಪ ಬಳಿ ಶಿವಮೊಗ್ಗ ಯುವಕ ವಿರೇಶನ ಬಿಕರ ಹತ್ಯೆ: ಗಾಡಿಕೊಪ್ಪದ ವಿರೇಶ್ ಸ್ಮಶಾನದಲ್ಲೆ ಸುಟ್ಟು ಕರಕಲಾದ.!!

ಶಿರಾಳಕೊಪ್ಪ ಬಳಿ ಶಿವಮೊಗ್ಗ ಯುವಕ ವಿರೇಶನ ಬಿಕರ ಹತ್ಯೆ: ಗಾಡಿಕೊಪ್ಪದ ವಿರೇಶ್ ಸ್ಮಶಾನದಲ್ಲೆ ಸುಟ್ಟು ಕರಕಲಾದ.!!

ಅಶ್ವಸೂರ್ಯ/ಶಿವಮೊಗ್ಗ

✍️ ಸುಧೀರ್ ವಿಧಾತ

CRIME NEWS:
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿಯ ನಿರ್ಜನ ಪ್ರದೇಶದಲ್ಲಿ ಶುಕ್ರವಾರ ತಡ ರಾತ್ರಿ ಶಿವಮೊಗ್ಗದ ಯುವಕನೋರ್ವನನ್ನು ಭೀಕರವಾಗಿ ಹತ್ಯೆಮಾಡಿರುವ ಘಟನೆ ನಡೆದಿದೆ,ಈ ಪ್ರಕರಣ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು ಪೋಲಿಸರು ತನಿಖೆ ಕೈಗೊಂಡಿದ್ದಾರೆ.

:ಶಿವಮೊಗ್ಗ : ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ವಾಸಿ ವೀರೇಶ್ (27) ಎಂಬ ಯುವಕನನ್ನು ಭೀಕರವಾಗಿ ಕೊಲೆಮಾಡಲಾಗಿದ್ದು ಇದು ಪ್ರೀತಿಯ ಬೆನ್ನಿಗೆ ಬಿದ್ದ ಕಾರಣಕ್ಕೆ ಯುವಕನ ಹತ್ಯೆಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು ಈ ಹತ್ಯೆ ಹಿದಿನ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.? ಈ ಘಟನೆಯು ಶಿರಾಳುಕೊಪ್ಪ ಸಮೀಪದ ತೋಗರ್ಸಿಯ ಹೊರವಲಯದ ಸ್ಮಶಾನದ ಸಮೀಪ ಈ ಹತ್ಯೆ ನಡೆದಿದ್ದು ಕೊಲೆಯಾದ ಯುವಕನ ಹೆಣಕ್ಕೆ ಬೆಂಕಿ ಇಟ್ಟಿದ್ದಾರೆ ಹಂತಕರು.!!
ಆತ ಶಿವಮೊಗ್ಗದಿಂದ ಹೋಗಿದ್ದ ಎನ್ನಲಾದ ಇನ್ನೋವಾ ಕಾರಿನ ಡಿಕ್ಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಹಂತಕರು ಯುವಕನನ್ನು ಹತ್ಯೆಮಾಡಿದ ನಂತರದಲ್ಲಿ ಆತನ ಶವವನ್ನು ಕಾರಿನ ಡಿಕ್ಕಿಗೆ ಹಾಕಿ ಬೆಂಕಿ ಹಚ್ಚಿದ್ದಾರೆ ಕಾರು ಸಂಪೂರ್ಣ ಸುಟ್ಟು ಹೋಗಿದ್ದು ಹತ್ಯೆಯಾದ ಯುವಕನ ಶವ ಕೂಡ ಕರಕಲಾಗಿ ಗುರುತೆ ಸಿಗದ ಹಾಗಾಗಿದೆ! ಸುಟ್ಟ ಕಾರನ್ನು ,ಕಾರಿನ ಡಿಕ್ಕಿಯಲ್ಲಿ ಕರಕಲಾದ ಸ್ಥಿತಿಯಲ್ಲಿ ಬಿದ್ದಿರುವ ಶವವನ್ನು ಗಮನಿಸಿದರೆ ಈ ಹತ್ಯೆ ಆ ಸ್ಥಳದಲ್ಲಿ ಅದಂತೆ ಕಾಣುವುದಿಲ್ಲ.! ಹಂತಕರು ವಿರೇಶನನ್ನು ಇನ್ನಾವುದೋ ಸ್ಥಳದಲ್ಲಿ ಕೊಲೆಮಾಡಿ ಅ ನಂತರ ಆತನ ಶವವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಬಂದು ತೋಗರ್ಸಿಯ ಸ್ಮಶಾನದ ಹತ್ತಿರ ಕಾರಿನ ಸಮೇತ ಆತನ ದೇಹವನ್ನು ಸುಟ್ಟುಹಾಕಿದ್ದಾರೆ.! ಆತ ಸುಟ್ಟು ಹಾಕುವ ಮೊದಲು ಬದುಕಿದ್ದನೋ ಅಥವಾ ಸತ್ತಿದ್ದನೋ ಅನ್ನುವುದು ನಿಗೂಢವಾಗಿದೆ ಮತ್ತು ಈ ಹಿಂದಿನ ಅಸಲಿ ಸತ್ಯಗಳು ಇನ್ನಷ್ಟೆ ತಿಳಿಯಬೇಕಿದೆ.


ಶುಕ್ರವಾರ ರಾತ್ರಿ ಗಾಡಿಕೊಪ್ಪದ ಮನೆಯಲ್ಲಿದ್ದ ಯುವಕ ವಿರೇಶನ ಮೊಬೈಲಿಗೆ ಕೆಲ ಪರಿಚಿತರು ಕರೆ ಮಾಡಿದ್ದಾರಂತೆ.!? ಅ ಸಮಯದಲ್ಲಿ ಬಂದಂತ ಒಂದು ಫೋನ್ ಕಾಲಿಗೆ ವಿರೇಶ್ ತಕ್ಷಣ ಸ್ನೇಹಿತರೋರ್ವರ ಇನ್ನೋವಾ ಕಾರಿನಲ್ಲಿ ಮನೆಯಿಂದ ತೆರಳಿದ್ದಾನಂತೆ. ಮನೆಯಿಂದ ಹೋರ ಹೋದವನು ಬೆಳಿಗ್ಗೆ ಯಾದರು ಮರಳಿ ಮನೆಗೆ ಬಂದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.


ಘಟನಾ ಸ್ಥಳಕ್ಕೆ ಶಿಕಾರಿಪುರ ಡಿವೈಎಸ್‌ಪಿ  ಕೇಶವ್‍,  ಇನ್ಸ್’ಪೆಕ್ಟರ್ ರುದ್ರೇಶ್, ಶಿರಾಳಕೊಪ್ಪ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಮೇಶ್ ಮತ್ತವರ  ಸಿಬ್ಬಂದಿಗಳು ಸ್ಥಳ ಮಹಜರು ಮಾಡಿ ಪರಿಶೀಲನೆ ನಡೆಸಿದ್ದಾರೆ.
ಈ ಹತ್ಯೆಗೆ ಕಾರಣವೇನು? ಇದು ಪ್ರೀತಿಯ ಸುಳಿಗೆ ಸಿಲುಕಿದ ಹಿನ್ನಲೆಯಲ್ಲಿ ಈ ಹತ್ಯೆ ನೆಡೆದಿರ ಬಹುದು ಎನ್ನಲಾಗುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿಯಬೇಕಾಗಿದೆ. ಪೋಲಿಸರು ಹಂತಕರನ್ನು ಹೆಡೆಮುರಿಕಟ್ಟಲು ತಂಡಗಳಾಗಿ ಕಾರ್ಯಚರಣೆಗೆ ಮುಂದಾಗಿದ್ದಾರೆ ಎಂದು ತಿಳಿದು

Leave a Reply

Your email address will not be published. Required fields are marked *

Optimized by Optimole
error: Content is protected !!