ಈ ಬಾರಿ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಷೇಶ ಅಲಂಕಾರ..!ಎಂ ಶ್ರೀಕಾಂತ್ ಕಲ್ಪನೆಯ ಈ ವಿಷೇಶ ಅಲಂಕಾರ ಸಂಪೂರ್ಣ ಸಿದ್ಧಗೊಂಡಿದೆ.
ಅಶ್ವಸೂರ್ಯ/ಶಿವಮೊಗ್ಗ
✍️ ಸುಧೀರ್ ವಿಧಾತ
ಶಿವಮೊಗ್ಗ: ಕರ್ನಾಟಕದ ಸುಪ್ರಸಿದ್ಧ ಜಾತ್ರಾ ಮಹೋತ್ಸವದಲ್ಲಿ ಒಂದಾದ ಶಿವಮೊಗ್ಗ ನಗರದ ಗ್ರಾಮದೇವತೆ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೋತ್ಸವ ಮಾರ್ಚ್ 12 ರಿಂದ 16ರ ವರೆಗೆ ಅದ್ದೂರಿಯಾಗಿ ಐದುದಿನಗಳ ಕಾಲ ಜರುಗಲಿದೆ.
ಪ್ರತಿ ವರ್ಷದಂತೆ ಈ ವರ್ಷವು ಐದು ದಿನಗಳ ಕಾಲ ಮಾರಿಯಮ್ಮನ ವಿಜೃಂಭಣೆಯಿಂದ ಜಾತ್ರೆ ನೆಡೆಯಲಿದ್ದು ರಾಜ್ಯಾದ್ಯಂತ ಲಕ್ಷಾಂತರ ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅಮ್ಮನವರ ದರ್ಶನ ಪಡೆಯಲಿದ್ದಾರೆ.
ಇಷ್ಟು ಬಾರಿ ನೆಡೆದಂತಹ ಜಾತ್ರಾ ಮಹೋತ್ಸವಕ್ಕಿಂತ ಈ ಬಾರಿ ಜಾತ್ರೆ ಇನ್ನಷ್ಟು ವಿಜೃಂಭಣೆಯಿಂದ ಜರುಗಲಿದೆ.ಈ ಬಾರಿ ತವರು ಮನೆಯಿಂದ ಕೋಟೆ ರಸ್ತೆಯಲ್ಲಿರುವ ಗದ್ದುಗೆಗೆ ಬಂದು ನಾಲ್ಕು ದಿನಗಳ ಕಾಲ ಪ್ರತಿಷ್ಠಾಪಿತಳಾಗುವ ಕೋಟೆ ರಸ್ತೆಯಲ್ಲಿರುವ ಅಮ್ಮನವರ ( ಗದ್ದುಗೆ) ಮಾರಿಕಾಂಬಾ ದೇವಿಯ ಗರ್ಭಗುಡಿಯನ್ನು ಅತ್ಯಾಕರ್ಷಕವಾಗಿ ಅಲಂಕಾರ ಮಾಡಲಾಗಿದೆ. ಈ ವಿಷೇಶ ಅಲಂಕಾರವನ್ನು ನೋಡಲು ದೇವಿಯ ದರ್ಶನ ಭಾಗ್ಯವನ್ನು ಪಡೆಯಲು ಪ್ರತಿಯೊಬ್ಬ ಭಕ್ತರು ಪುಣ್ಯ ಮಾಡಿರಲೆ ಬೇಕು.ಗರ್ಭಗುಡಿಯ ಒಳಭಾಗದಲ್ಲಿ ಸುತ್ತಲೂ ಕಬ್ಬಿನ ಜಲ್ಲೆಗಳಿಂದ ಅಲಂಕರಿಸಲಾಗಿದೆ.
ಗರ್ಭಗುಡಿಯಲ್ಲಿ ಅಲಂಕೃತವಾದ ದೊಡ್ಡ ದೊಡ್ಡ ಕಂಬಗಳನ್ನು ನಿರ್ಮಿಸಲಾಗುದೆ. ಹೂವಿನಲ್ಲೆ ತಯಾರಿಸಿದ ಕಮಾನುಗಳು ಗರ್ಭಗುಡಿಯ ಬಾಗಿಲಿನ ತೋರಣಗಳು ಕಂಗೊಳಿಸುತ್ತಿವೆ. ಜೋತೆಗೆ ಬಣ್ಣ ಬಣ್ಣದ ಹೂಗಳಿಂದ ಗರ್ಭಗುಡಿಯ ಸೀಲಿಂಗ್ ಅನ್ನು ಅಲಂಕರಿಸಿದ್ದು ವಿಷೇಶವಾಗಿ ಹೂವಿನ ಅಲಂಕಾರದ ನಡುವೆ ಬೆಲ್ಲದ ಹಣ್ಣುಗಳಿಂದ ಸಿಂಗರಿಸಲಾಗಿದೆ.
ಬಗೆ ಬಗೆಯ ಅಲಂಕೃತ ಹೂವುಗಳಿಂದ ಕಣ್ಮನ ಸೇಳೆಯುತ್ತಿದೆ ದೇವಿಯ ಗದ್ದುಗೆ, ಗರ್ಭಗುಡಿಯನ್ನು ತಲುಪುವ ಮುನ್ನ ದ್ವಾರ ಭಾಗದಲ್ಲಿ ಬಾರಿ ಗಾತ್ರದ ಅಲಂಕೃತ ನಾಲ್ಕು ವಿಷೇಶ ಗಂಟೆಗಳಿಂದ ಸಿಂಗರಿಸಿದ್ದು ಇದು ಭಕ್ತರಿಗೆ ಇನ್ನಷ್ಟು ಖುಷಿ ಮನಸ್ಸಿಗೆ ನೆಮ್ಮದಿ ಸಿಗುವಹಾಗೆ ಅಲಂಕೃತಗೊಂಡಿವೆ, ಸಂಪೂರ್ಣ ಕೋಟೆ ರಸ್ತೆಯಲ್ಲಿರುವ ಮಾರಿಯಮ್ಮನ ಗದ್ದುಗೆಯ ಗರ್ಭಗುಡಿಯ ಒಳಗೂ ದೇವಸ್ಥಾನದ ಹೊರಗು ವಿಷೇಶವಾಗಿ ಅಲಂಕೃತಗೊಂಡು ಸಂಪೂರ್ಣ ವಾತವರಣದಲ್ಲಿ ದೇವಲೋಕವೆ ಸೃಷ್ಟಿ ಯಾದಂತೆ ಭಾಸವಾಗುತ್ತದೆ,
ಇದರ ಜೋತೆಗೆ ಮೊದಲ ದಿನ ಗಾಂಧಿ ಬಜಾರಿನ ತವರು ಮನೆಯಲ್ಲಿ ಒಂದು ದಿನ ಪ್ರತಿಷ್ಠಾಪಿತಳಾಗುವ ಅಮ್ಮನವರಿಗೆ ಅಲ್ಲಿಯೂ ವಿಷೇಶವಾಗಿ ಗಾಂಧಿ ಬಜಾರಿನ ಹೆಬ್ಬಾಗಿಲಿನಿಂದ ಕೋಟೆ ರಸ್ತೆಯ ಮಾರಿ ಗದ್ದುಗೆಯ ವರೆಗೂ ಸಂಪೂರ್ಣ ರಸ್ತೆಯೆ ಇಕ್ಕೆಲಗಳು ಅಲಕೃತಗೊಂಡಿದೆ.ಗಾಂಧಿ ಬಜಾರಿನ ಹೆಬ್ಬಾಗಿಲಿಗೆ ಮಹಿಷಾಸುರನನ್ನು ಮರ್ದಿಸುವ ಚಾಮುಂಡೇಶ್ವರಿಯ ವಿಷೇಶ ಅಲಂಕಾರ ಮಾಡಿದ್ದು ಇದು ರಾತ್ರಿಯ ವೇಳೆ ಭಕ್ತ ಸಮೂಹವನ್ನು ಆಕರ್ಷಿಸುತ್ತಿದೆ.
ಶಿವಮೊಗ್ಗ ನಗರವೆ ಬಣ್ಣ ಬಣ್ಣದ ವಿದ್ಯುತ್ ದೀಪದ ಅಲಂಕಾರದಿಂದ ಜಗಮಗಿಸುತ್ತಿದೆ.ಒಟ್ಟಿನಲ್ಲಿ ಈ ಬಾರಿಯ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ.
ಇನ್ನೂ ಕೋಟೆ ಶ್ರೀ ಮಾರಿಕಾಂಬಾ ದೇವಾಲಯದ ಗರ್ಭಗುಡಿಯ ಮತ್ತು ಹೋರ ಭಾಗದ ವಿಷೇಶವಾದ ಅಲಂಕಾರದ ಖರ್ಚು ವೇಚ್ಚದ ಸಂಪೂರ್ಣ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಜನಪ್ರಿಯ ನಾಯಕರು ಅದ ಎಂ ಶ್ರೀಕಾಂತ್ ವಹಿಸಿಕೊಂಡಿದ್ದು ಅವರ ಕಲ್ಪನೆಯಂತೆ ಕಳೆದ ಒಂದುವಾರದಿಂದ ಬೆಂಗಳೂರಿನಿಂದ ಬಂದ ಸುಮಾರು ಇಪ್ಪತ್ತರಿಂದ ಮೂವತ್ತು ಜನರ ತಂಡ ರಾತ್ರಿ ಹಗಲೆನ್ನದೆ ಈ ವಿಷೇಶ ಅಲಂಕಾರದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನೇನು ಕೊನೆಯ ಹಂತದ ಕೆಲಸವಷ್ಟೆ ಬಾಕಿಇದ್ದು ಅದು ಇಂದೂ ಕೊನೆಗೊಂಡು.ಮಂಗಳವಾರ ರಾತ್ರಿ ಗದ್ದುಗೆಗೆ ಬರುವ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಆಗಮನಕ್ಕಾಗಿ ಎದುರು ನೋಡುತ್ತಿದೆ ವಿಷೇಶವಾಗಿ ಅಲಂಕಾರ ಗೊಂಡಿರುವ ಅಮ್ಮನವರ ಗದ್ದುಗೆ.
.