ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿತ್ತು ಭಾರತದ ಮಹಿಳೆಯ ಶವ.!!: ಹೈದರಾಬಾದ್ ಮೂಲದ ಮಹಿಳೆ!
CRIME NEWS
ಅಶ್ವಸೂರ್ಯ/ಶಿವಮೊಗ್ಗ
✍️ಸುಧೀರ್ ವಿಧಾತ
ಹೈದರಾಬಾದ್: ಹೈದರಾಬಾದ್ ಮೂಲದ ಮಹಿಳೆಯೊಬ್ಬರ ಶವವೊಂದು ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಹೈದರಾಬಾದ್ ಮೂಲದ ಚೈತನ್ಯ ಮದಗಣಿ (36) ಎನ್ನಲಾಗಿದ್ದು ಈಕೆಯ ಶವ ಶನಿವಾರ ಆಸ್ಟ್ರೇಲಿಯಾದ ಬಕ್ಲಿಯ ರಸ್ತೆಯ ಬದಿಯಲ್ಲಿದ್ದ ಕಸದ ತೊಟ್ಟಿಯೊಂದರಲ್ಲಿ ಪತ್ತೆಯಾಗಿದೆ.!
ಚೈತನ್ಯ ಅವರು ಹಲವು ವರ್ಷಗಳಿಂದ ತನ್ನ ಪತಿ ಅಶೋಕ್ ಅವರೊಂದಿಗೆ ಆಸ್ಟ್ರೇಲಿಯಾದ ಪಾಯಿಂಟ್ ಕುಕ್ಕ್ ನಗರದಲ್ಲಿ ವಾಸವಾಗಿದ್ದರು ಇವರಿಗೆ ಒಂದು ಗಂಡು ಮಗು ಕೂಡ ಇದೆಯಂತೆ?
ಕಳೆದ ಶನಿವಾರ ಆಸ್ಟ್ರೇಲಿಯಾದ ಪೊಲೀಸರು ಮಹಿಳೆಯ ಶವವನ್ನು ಪತ್ತೆಹಚ್ಚಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ ಆದರೆ ಪೊಲೀಸರ ಪ್ರಾಥಮಿಕ ತನಿಖೆಯ ಮೂಲಗಳ ಪ್ರಕಾರ ಈಕೆಯ ಪತಿಯೇ ಕೊಲೆಮಾಡಿ ಬಳಿಕ ಮನೆಯ ಹತ್ತಿರದಲ್ಲಿಯುವ ಕಸದ ತೊಟ್ಟಿಗೆ ಎಸೆದು ಭಾರತಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ.
ಚೈತನ್ಯ ಮದಗಣಿ ಅವರ ಹತ್ಯೆಯ ವಿಷಯ ಕೇಳಿದ ಆಕೆಯ ಕುಟುಂಬದಲ್ಲಿ ನೀರವ ಮೌನ ಅವರಿಸಿದೆ
ಇತ್ತ ಮಗಳ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ಚೈತನ್ಯ ಅವರ ಹೆತ್ತವರು ದಿಕ್ಕೆ ಕಾಣದಂತೆ ಮೌನಕ್ಕೆ ಜಾರಿದ್ದಾರೆ. ಅಲ್ಲದೆ ತಮ್ಮ ಮಗಳ ದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಿಕೊಡುವಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ.
ಈಕೆಯ ಸಾವಿನ ಸುದ್ದಿ ತಿಳಿಯುತ್ತಿದ್ದ ಹಾಗೆ ಆಕೆಯ ಹೆತ್ತವರು ಮಗಳ ಸಾವಿಗೆ ಅಳಿಯ ಅಶೋಕ್ ಕಾರಣ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಚೈತನ್ಯ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ಚೈತನ್ಯ ಪೋಷಕರು ಅಳಿಯನ ವಿರುದ್ಧವೇ ಅನುಮಾನ ಇದೆ ಎಂದು ಶಂಕೆ ಹೇಳಿದ್ದಾರೆ, ಅಲ್ಲದೆ ಪತ್ನಿ ಸಾವಿನ ಬಳಿಕ ಪತಿ ಭಾರತಕ್ಕೆ ಓಡಿ ಬಂದಿರುವ ವಿಚಾರದಲ್ಲಿ ಪತಿಯೇ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಇದು ಕೂಡ ಅವನ ಮೇಲೆಯೇ ಅನುಮಾನ ಬರಲು ಕಾರಣವಾಗಿದೆ.
ಈ ಘಟನೆ ಸಂಬಂಧ ಹೈದರಾಬಾದ್ ನ ಉಪ್ಪಳ ಶಾಸಕ ಬಂಡಾರಿ ಲಕ್ಷ್ಮ ರೆಡ್ಡಿ ಮಾತನಾಡಿ, ಮಹಿಳೆ ತನ್ನ ಕ್ಷೇತ್ರದವಳಾದ ಕಾರಣ, ವಿಷಯ ತಿಳಿದ ನಂತರ ಇಂದು ಆಕೆಯ ಪೋಷಕರನ್ನು ಭೇಟಿ ಮಾಡಿದ್ದೇನೆ ಮಹಿಳೆಯ ಪೋಷಕರ ಕೋರಿಕೆಯ ಮೇರೆಗೆ ಮಹಿಳೆಯ ಮೃತದೇಹವನ್ನು ಹೈದರಾಬಾದ್‌ಗೆ ತರಲು ವಿದೇಶಾಂಗ ಕಚೇರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರ ಕಚೇರಿಗೂ ತಿಳಿಸಿರುವುದಾಗಿ ಶಾಸಕರು ಹೇಳಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಪೋಲಿಸರು ಇನ್ನೂ ಯಾರನ್ನೂ ಬಂಧಿಸಿಲ್ಲ, ತನಿಖೆ ಚುರುಕುಗೊಂಡಿದ್ದು ಆರೋಪಿಯ ಪತ್ತೆಗಾಗಿ ಭಲೇ ಬಿಸಿದ್ದಾರೆ.