ಲೋಕಕಲ್ಯಾಣಾರ್ಥವಾಗಿ ಇಂದಿನಿಂದ ಎರಡು (ಮಾ,5 ಮತ್ತು 6 ರಂದು ) ದಿನಗಳ ಕಾಲ ಅತಿರುದ್ರ ಮಹಾಯಾಗ ಶಿವಮೊಗ್ಗ ವಿನೋಬನಗರ ಶಿವಾಲಯದಲ್ಲಿ‌ ಆವರಣದಲ್ಲಿ ಇಂದು ಚಾಲನೆ

ಲೋಕಕಲ್ಯಾಣಾರ್ಥವಾಗಿ ಇಂದಿನಿಂದ ಎರಡು (ಮಾ,5 ಮತ್ತು 6 ರಂದು ) ದಿನಗಳ ಕಾಲ ಅತಿರುದ್ರ ಮಹಾಯಾಗ ಶಿವಮೊಗ್ಗ ವಿನೋಬನಗರ ಶಿವಾಲಯದಲ್ಲಿ‌ ಆವರಣದಲ್ಲಿ ಇಂದು ಚಾಲನೆ

ಶಿವಮೊಗ್ಗ: ಅತಿರುದ್ರ ಮಹಾಯಾಗ ಸಂಚಾಲನಾ ಸಮಿತಿ ಹಾಗೂ ಭಕ್ತ ವೃಂದದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಹಾಗೂ ದೇಶದ ನೆಚ್ಚಿನ ಮಹಾನಾಯಕ ಸನ್ಮಾನ್ಯ ನರೇಂದ್ರ ಮೋದಿ ಜೀಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲೆಂದು ಪ್ರಾರ್ಥಿಸಿ ಇಂದು ಚಾಲನೆ ನೀಡಲಾಯಿತು ( ಮಾರ್ಚ್ 5 ಮತ್ತು 6 ರಂದು) ಅತಿರುದ್ರ ಮಹಾಯಾಗವನ್ನು ವಿನೋಬನಗರ ಶಿವಾಲಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದು ಇಂದು
( ಮಾ. 5 ರಂದು ) ಮಂಗಳವಾರ ಬೆಳಗ್ಗೆ 8 ಗಂಟೆಗೆ ಇಂದಲೆ ಮಹಾಸಂಕಲ್ಪದೊಂದಿಗೆ ಗಂಗಾಪೂಜೆ, ಗಣಪತಿ,ನಾಂದಿ,ಪುಣ್ಯಾಹ, ಉಮಾಮಹೇಶ್ವರ, ಪಂಚಬ್ರಹ್ಮ ಕಲಶ,ಏಕದಶ ರುದ್ರ ಕಲಶಾರಾಧನೆ, ನವಗ್ರಹ ಹಾಗೂ ಪೂಜಾದಿಗಳು ಪ್ರಾರಂಭವಾಗಿದೆ. ಬೆಳಗ್ಗೆ 10 ಗಂಟೆಗೆ ಯಿಂದ ಶ್ರೀ ಅತಿರುದ್ರ ಮಹಾಯಾಗ, ಶಿವಾಗ್ನಿ ಪ್ರತಿಷ್ಠೆ ನಡೆಯುತಲಿದ್ದು, ಇಂದು ಸಂಜೆ 4 ಗಂಟೆಯಿಂದ ಉತ್ತರಾರ್ಧ ಪೂಜೆ ಆರಂಭಗೊಳ್ಳಲಿದೆ. ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ತಂಡವು 121 ಪುರೋಹಿತರೊಂದಿಗೆ ಅತಿರುದ್ರ ಮಹಾಯಾಗವನ್ನು ನಡೆಸಿಕೊಡಲಿದ್ದಾರೆ.ಬಿಳಕಿ ಹಿರೇಮಠದ ಶ್ರೀ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗೇಶ್ವರ ಶಿವಚಾರ್ಯ ಸ್ವಾಮೀಜಿ, ಕವಲೆದುರ್ಗ ಮಠದ ಶ್ರೀ ರಾಜಗುರು ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಮಹಾಯಾಗವು ನೆರವೇರಲಿದೆ.
ಮಾ.6 ರಂದು ಬೆಳಗ್ಗೆ 11.30 ಕ್ಕೆ ನಡೆಯಲಿರುವ ಧರ್ಮಸಭೆಯ ದಿವ್ಯ ಸಾನ್ನಿಧ್ಯವನ್ನು ಶ್ರೀ ಉಜ್ಜಯನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ ಹಾಗೂ ಆನಂದಪುರ ಬೆಕ್ಕಿನಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗ್ದದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಮಹಾ ಸ್ವಾಮಿಗಳು ವಹಿಸುವರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ವಹಿಸುವರು. ವಿಶೇಷ ಹ್ವಾನಿತರಾಗಿ ಸುಪ್ರೀಂಕೋರ್ಟ್ ವಕೀಲರು ಹಾಗೂ ಭಾರತದ ವಿದೇಶಾಂಗ ವ್ಯವಹಾರಗಳ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ ಭಾಗವಹಿಸುವರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ,ಸಂಸದರಾದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು, ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಭಾರತಿಶೆಟ್ಟಿ ಭಾಗವಹಿಸುವರು.


“ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ” ಎಂಬಂತೆ ಧರ್ಮವೇ ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿರುವುದರಿಂದ ನಮ್ಮ ಸನಾತನ ಪರಂಪರೆಯಲ್ಲಿ ಧರ್ಮ ರಕ್ಷಣೆಗೆ ಮಹತ್ವವನ್ನು ನೀಡಿದ್ದಾರೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಧರ್ಮ ರಕ್ಷಣೆ ಎಂದರೆ ಧರ್ಮಾಚರಣೆ ಮಾಡುವುದು ಎಂದರ್ಥ. ಲೋಕಕಲ್ಯಾಣಾರ್ಥವಾಗಿ ಭಗವಂತನ ಆರಾಧನೆ ಮಾಡುವುದರಿಂದ ಲೋಕಕ್ಕೆ ಒಳಿತಾಗುತ್ತದೆ. ಆ ಉದ್ದೇಶದಿಂದ ಕ್ಷೇತ್ರಗಳಲ್ಲಿ ಲೋಕಕಲ್ಯಾಣಾರ್ಥವಾಗಿ, ಭಗವಂತನ ಪ್ರೀತ್ಯರ್ಥವಾಗಿ ಧರ್ಮ ಕಾರ್ಯಗಳು ಜರುಗುತ್ತವೆ. ಭಗವಂತನ ಆರಾಧನೆಯಲ್ಲಿ ರುದ್ರಾರಾಧನೆಗೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ. ಏಕೆಂದರೆ “ರುಜಂ ದ್ರಾವಯತೀತಿ ರುದ್ರಃ” ಎಂಬಂತೆ ಮನುಷ್ಯನ ಕಷ್ಟ ಕಾರ್ಪಣ್ಯಗಳನ್ನು ಹಾಗೂ ಮನುಷ್ಯನ ದೇಹದಲ್ಲಿರುವ ರೋಗವು ರುದ್ರಾರಾಧನೆಯಿಂದ ಶಮನವಾಗುತ್ತದೆ ಎಂಬುದು ನಂಬಿಕೆ. “ಅಭಿಷೇಕ ಪ್ರಿಯೋ ಶಿವಃ” ಎನ್ನುವಂತೆ ಈಶ್ವರನು ಅಭಿಷೇಕ ಪ್ರಿಯನು. ರುದ್ರನಿಗೆ ಅಭಿಷೇಕ ಮಾಡುವುದರಿಂದ ಈಶ್ವರನು ಸಂತುಷ್ಟನಾಗಿ ಭಕ್ತರ ಸಂಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಪೂರೈಸುವಲ್ಲಿ ಸಂಶಯವೇ ಇಲ್ಲ.
ವೇದೋಕ್ತವಾದ ನಮಕ(ರುದ್ರ)ದಿಂದ ಅಭಿಷೇಕ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಭಕ್ತಿ, ಶ್ರದ್ಧೆಯಿಂದ ಒಂದು ಬಾರಿ ರುದ್ರಾಭಿಷೇಕ ಮಾಡಿದರೆ ಸಕೃತಾವರ್ತನ ರುದ್ರಾಭಿಷೇಕ, 11 ಬಾರಿ ಮಾಡಿದರೆ ಏಕಾದಶಾವರ್ತನ ರುದ್ರಾಭಿಷೇಕ, 121 ಬಾರಿ ಮಾಡಿದರೆ ಲಘು(ಶತ) ರುದ್ರಾಭಿಷೇಕ, 1331 ಬಾರಿ ಮಾಡಿದರೆ ಮಹಾರುದ್ರಾಭಿಷೇಕ ಮತ್ತು 14641 ಬಾರಿ ಮಾಡಿದರೆ “ಅತಿರುದ್ರಾಭಿಷೇಕವಾಗುವುದು. ಹೀಗೆ ಏಕೋತ್ತರ ವೃದ್ಧಿಯಲ್ಲಿ ಅಭಿಷೇಕ ಮಾಡಿದರೆ ಅಥವಾ ಮಾಡಿಸಿದರೆ ರುದ್ರನು ಪ್ರೀತನಾಗಿ ಸಮಸ್ತ ಲೋಕಕ್ಕೆ ಕಲ್ಯಾಣವನ್ನುಂಟು ಮಾಡುತ್ತಾನೆ..ಅಲ್ಲದೇ “ಶ್ರುತಂ ಹರತಿ ಪಾಪಾನಿ” ಎನ್ನುವ ಹಾಗೆ ರುದ್ರವನ್ನು ಶ್ರವಣ ಮಾಡುವುದರಿಂದ ನಮ್ಮ ಪಾಪಗಳು ದೂರವಾಗುತ್ತವೆ. ಆ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದೆ. ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಅತಿರುದ್ರ ಮಹಾಯಾಗವನ್ನು ಎಲ್ಲರೂ ಒಂದಾಗಿ ಯಶಸ್ವಿಯಾಗಿ ನಡೆಸೋಣ, ಹಾಗೆಯೇ ಸಂಸದ ರಾಘಣ್ಣ ಅವರು ಮುಂಬರುವ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿ, ಕೇಂದ್ರದ ಮಂತ್ರಿಯಾಗಲಿ ಎಂದು ಪ್ರಾರ್ಥಿಸೋಣ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಎನ್.ಜೆ.ರಾಜಶೇಖರ್ (ಸುಭಾಷ್), ಸಮಿತಿಯ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್, ಉಪಾಧ್ಯಕ್ಷರಾದ ಎಚ್.ವಿ.ಮಹೇಶ್ವರಪ್ಪ, ಎಸ್.ದತ್ತಾತ್ರಿ, ಜ್ಞಾನೇಶ್ವರ್, ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಚ್. ಮಲ್ಲಿಕಾರ್ಜುನ ಸ್ವಾಮಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಧನಂಜಯ ಸರ್ಜಿ, ಸಹ ಸಂಚಾಲಕರಾದ ಮಹಾಲಿಂಗಯ್ಯ ಶಾಸ್ತ್ರಿ, ನಾಗಯ್ಯ ಶಾಸ್ತ್ರಿಗಳು, ಮಹಾನಗರ ಪಾಲಿಕೆ ಸದಸ್ಯ .ವಿಶ್ವಾಸ್, ಅನಿತಾ ರವಿಶಂಕರ್, ಮೋಹನ್ ರೆಡ್ಡಿ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!