ಕವಿ ಸಾಹಿತಿ ಪತ್ರಕರ್ತ ಶಿ ಜು ಪಾಶ
ಶಿಜು ಪಾಷಾಗೆ ಡಾ. ಸಿಪಿಕೆ ಕಾವ್ಯ ಪ್ರಶಸ್ತಿ
ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ವತಿಯಿಂದ ಪ್ರತಿಷ್ಠಿತ ಪಂಪ ಪ್ರಶಸ್ತಿ ಪುರಸ್ಕೃತ ಡಾ.ಸಿ.ಪಿ. ಕೃಷ್ಣ ಕುಮಾರ್ ಅವರ ಗೌರವಾರ್ಥ ಹೊಸ ತಲೆಮಾರಿನ ಪ್ರತಿಭಾವಂತ ಕವಿ ಮತ್ತು ಕವಯತ್ರಿಯರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ‘ಡಾ. ಸಿಪಿಕೆ ಕಾವ್ಯ ಪ್ರಶಸ್ತಿಯನ್ನು’ ಈ ಸಾಲಿನಿಂದ ಕೊಡಲಾಗುತ್ತಿದ್ದು ಪ್ರಸಕ್ತ ಸಾಲಿನ ಚೊಚ್ಚಲ ವರ್ಷದ ಪ್ರಶಸ್ತಿಗೆ ಹೊಸ ತಲೆಮಾರಿನ ಮಲೆನಾಡಿನ ಹೆಮ್ಮೆಯ ಪುತ್ರ ಕವಿ ಶಿಜು ಪಾಷಾ ಸೇರಿದಂತೆ ಹತ್ತು ಜನ ಪ್ರತಿಭಾನ್ವಿತ ಕವಿಗಳು ಆಯ್ಕೆಯಾಗಿದ್ದಾರೆ.
ಧಾರವಾಡದ ಕವಿತಾ ಹೆಗಡೆ ಅಭಯಂ, ಬೆಂಗಳೂರಿನ ವಿಜಯ ಲಕ್ಷ್ಮಿ ನುಗ್ಗೇಹಳ್ಳಿ, ವಿಜಯಪುರದ ಹೇಮಲತ ವಸ್ತ್ರದ, ಕೊಡಗಿನ ಸಂಗೀತ ರವಿರಾಜ್, ಚಾಮರಾಜ ನಗರದ ಡಾ.ಎನ್.ಕೆ. ದಿಲೀಪ್ ಹಾಸನದ ಕೊಟ್ರೇಶ್ ಎಸ್. ಉಪ್ಪಾರ್, ಗದಗದ ಚಂದ್ರಶೇಖರ ಮಾಡಲ ಗೇರಿ, ಮೈಸೂರಿನ ನಾಗರಾಜ್ ತಲಕಾಡು, ಮಂಡ್ಯದ ದಿನೇಶ್ ಹೆರ ಗನಹಳ್ಳಿ ಪ್ರಶಸ್ತಿಗೆ ಭಾಜನರಾದವರು.
ಸದ್ಯದಲ್ಲೇ ನಗರದ ಕೆ.ಜಿ. ಕೊಪ್ಪಲಿನ ನೇಗಿಲಯೋಗಿ ಮರು ಈಶ್ವರ ಸಭಾ ಭವನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ದಸರಾ ಕವಿ-ಕಾವ್ಯ ಸಂಭ್ರಮ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿ ಜು ಪಾಶ ಅವರು ಬರೆದು ಒಂದೆರಡು ಕವನಗಳು ನಿಮಗಾಗಿ
ಸುಧೀರ್ ವಿಧಾತ ,ಶಿವಮೊಗ್ಗ