ಕೋತಿಗೆ ನಿತ್ಯ ಆಹಾರ ಕೊಡುತ್ತಿದ್ದ ವ್ಯಕ್ತಿ ದೀಡಿರ್ ಸಾವು ಅಂತಿಮ ವಿಧಿಗಳಲ್ಲಿ ಪಾಲ್ಗೊಂಡ ಕೋತಿ: ವೈರಲ್ ವಿಡಿಯೋ

ಅಂತಿಮಯಾತ್ರೆಯಲ್ಲಿ ಪಾಲ್ಗೊಂಡ ಕೋತಿಯ ವಿಡಿಯೋ ವೈರಲ್..

ಕೋತಿಗೆ ನಿತ್ಯ ಆಹಾರ ಕೊಡುತ್ತಿದ್ದ ವ್ಯಕ್ತಿ ದೀಡಿರ್ ಸಾವು ಅಂತಿಮ ವಿಧಿಗಳಲ್ಲಿ ಪಾಲ್ಗೊಂಡ ಕೋತಿ: ವೈರಲ್ ವಿಡಿಯೋ

ತನಗೆ ಆಹಾರ ಕೊಡುತ್ತಿದ್ದ ವ್ಯಕ್ತಿಯ ಸಾವಿನಿಂದ ತೀವ್ರ ದುಃಖಕ್ಕೆ ಒಳಗಾದ ಕೋತಿಯೊಂದು 40 ಕಿ.ಮೀ ದೂರದ ಅಂತಿಮ ಶವಯಾತ್ರೆಯಲ್ಲಿ ಸಾಗಿ ಬಂದು ಕಣ್ಣೀರು ಹಾಕಿತು

ಮ್ರೋಹಾ: ತನಗೆ ನಿತ್ಯ ಅನ್ನಕೊಟ್ಟವನನ್ನು ಕಳೆದುಕೊಂಡ ( ಸಾವಿನಿಂದ ) ಕೋತಿಯೊಂದು ಆತನ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು ನೆರೆದವರಿಗೆ ಅಚ್ಚರಿ ಮೂಡಿಸಿತು. ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನೆಡೆದಿದೆ. ನಿರಂತರವಾಗಿ ಕೋತಿಯೊಂದಕ್ಕೆ ಆಹಾರವನ್ನು ನೀಡುತ್ತಿದ್ದ ರಾಮಕುನ್ವರ್ ಸಿಂಗ್ ಎಂಬ ವ್ಯಕ್ತಿ ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದರು.ಅವರ
ಎಲ್ಲಾ ಅಂತಿಮ ವಿಧಿವಿಧಾನಗಳು ಮತ್ತು ಕಾರ್ಯಗಳ ಸಮಯದಲ್ಲಿ ತನಗೆ ಆಹಾರ ನೀಡುತ್ತಿದ್ದ ವ್ಯಕ್ತಿಯ ಮೃತದೇಹದ ಪಕ್ಕದಲ್ಲಿದ್ದ ಕೋತಿಯು ಅಂತಿಮ ನಮನ ಸಲ್ಲಿಸಿದ್ದು ಎಲ್ಲರ ಮನಕಲುಕಿತು. ಮೃತನ ಕುಟುಂಬದೊಂದಿಗೆ ಮೃತದೇಹದ ಪಕ್ಕದಲ್ಲಿ ಕುಳಿತಿದ್ದ ಕೋತಿಯು ದುಃಖದಿಂದ ಅಳುತ್ತಿತ್ತು. ಈ ಹೃದಯ ಸ್ಪರ್ಶಿ ವಿಡಿಯೋ ಎಲ್ಲೆಡೆ  ವೈರಲ್ ಆಗಿದೆ.

ಶವವನ್ನು ಅಂತ್ಯಕ್ರಿಯೆಯ ಸ್ಥಳಕ್ಕೆ ಸಾಗಿಸುವಾಗ ಅದನ್ನು ಒಂಟಿಯಾಗಿ ಬಿಡಲು ನಿರಾಕರಿಸಿದ ಕೋತಿ ಜತೆಯಲ್ಲೇ ಬಂದಿದೆ. ಸುಮಾರು 40 ಕಿ.ಮೀ ಪ್ರಯಾಣಿಸಿದೆ. ಕಳೆದ ಎರಡು ತಿಂಗಳಿನಿಂದ ಸಿಂಗ್ ಕೋತಿಗೆ ನಿತ್ಯವೂ ಎಷ್ಟೇ ಕಷ್ಟವಾದರು ಬ್ರೆಡ್ ತಿನ್ನಿಸುತ್ತಿದ್ದರಂತೆ. ಪ್ರತಿನಿತ್ಯ ಪರಸ್ಪರ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಮಂಗಳವಾರ ಬೆಳಗ್ಗೆ ಸಿಂಗ್ ನಿಧನ ಹೊಂದಿದ ಬಳಿಕ ಕೋತಿ ಎಂದಿನಂತೆ ಸ್ಥಳಕ್ಕೆ ಭೇಟಿ ನೀಡಿದಾಗ ಆಘಾತಕವಾಗಿದೆ ತನಗೆ ಆಹಾರ ನೀಡುತ್ತಿದ್ದ ವ್ಯಕ್ತಿ ಸಾವಿಗೀಡಾಗಿದ್ದನ್ನು ಕಣ್ಣಾರೆ ಕಂಡ ಕೋತಿ ಕಣ್ಣೀರು ಹಾಕಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಚಿತೆಯ ಬಳಿ ಬಹಳ ಹೊತ್ತು ಕಾದ ಕೋತಿ ಅಂತ್ಯಕ್ರಿಯೆಯ ಎಲ್ಲಾ ವಿಧಿವಿಧಾನಗಳಲ್ಲಿ ಭಾಗವಹಿಸಿತು. ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು,  ಪ್ರಾಣಿಗಳ ಪ್ರೀತಿ ಮತ್ತು ನಿಷ್ಠೆಗೆ ಈ ಘಟನೆ ಸಾಕ್ಷಿಯಾಗಿದೆ.

ಸುಧೀರ್ ವಿಧಾತ ‌,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!