CRIME NEWS
ಕೊಲೆಯಾದ ಗಗನಸಖಿ ರೂಪಾಲ್ ಓಗ್ರೆ
ಮುಂಬೈನ ಕಟ್ಟಡದ ಹೌಸ್‌ಕೀಪಿಂಗ್ ಸಿಬ್ಬಂದಿಯಿಂದಲೇ ಬರ್ಬರವಾಗಿ ಹತ್ಯೆಗೀಡಾದ ಗಗನಸಖಿಯ ಕುಟುಂಬಸ್ಥರು ಆಕೆಯ ಮೃತದೇಹವನ್ನು ಶವ ಪರೀಕ್ಷೆಯ ನಂತರ ಪಡೆದುಕೊಂಡು ಛತ್ತೀಸ್‌ಗಢದ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದು, ಆರೋಪಿಯನ್ನು ರಿಮಾಂಡ್ ಮಾಡಲಾಗಿದೆ. ಮಂಗಳವಾರ ನ್ಯಾಯಾಲಯದಿಂದ ಸೆಪ್ಟೆಂಬರ್ 8 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ರೂಪಾಲ್ ಓಗ್ರೆ (24) ಎಂದು ಗುರುತಿಸಲಾಗಿದೆ, ಆಕೆ ತನ್ನ ತವರು ರಾಜ್ಯದಿಂದ ಏಪ್ರಿಲ್‌ನಲ್ಲಿ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ತರಬೇತಿಗಾಗಿ ಮುಂಬೈಗೆ ಬಂದಿದ್ದಳು. ಉಪನಗರ ಅಂಧೇರಿಯ ಮರೋಲ್ ಪ್ರದೇಶದ ಎನ್ ಜಿ ಕಾಂಪ್ಲೆಕ್ಸ್‌ನಲ್ಲಿರುವ ಅಕ್ಕನ ಬಾಡಿಗೆಯ ಫ್ಲಾಟ್‌ನಲ್ಲಿ ವಾಸವಾಗಿದ್ದಳು ಭಾನುವಾರ ತಡರಾತ್ರಿ ಆಕೆ ಶವವಾಗಿ ಪತ್ತೆಯಾಗಿದ್ದಾಳು!
ಈಕೆಯ ಹತ್ಯೆ ಮಾಡಿದ ಆರೋಪಿ ವಿಕ್ರಮ್ ಅಥ್ವಾಲ್ (40) ಈತನನ್ನು ಬಂಧಿಸಲಾಗಿದೆ. ಕಳೆದ ಒಂದು ವರ್ಷದಿಂದ ರೆಸಿಡೆನ್ಶಿಯಲ್ ಸೊಸೈಟಿಯ ಅಪಾರ್ಟ್ ಮೆಂಟ್ ನ ಮನೆಗಳಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ.
ಗಗನಸಖಿಯನ್ನು ಕೊಲೆಮಾಡಿದ ಆರೋಪಿ ವಿಕ್ರಮ್ ಅಥ್ವಾಲ್ (40)
ಮುಂಬೈ ಗಗನಸಖಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ಪೋಲಿಸರು 24 ಗಂಟೆಯಲ್ಲಿ ಬಂಧಿಸಿದ್ದು ಹೇಗೆ! ಹತ್ಯೆ ಹಿಂದಿನ ಕಾರಣ?
ಮುಂಬೈನ ಅಪಾರ್ಟ್ ಮೆಂಟ್ ನಲ್ಲಿ ರಕ್ತದ ಮಡುವಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿದ್ದ 23 ವರ್ಷ ವಯಸ್ಸಿನ ಗಗನಸಖಿ ರೂಪಾಲ್ ಓಗ್ರೆ ಪ್ರಕರಣಕ್ಕೆ ಕಾರಣಗಳು ಹ
ಬಯಲಾಗಿವೆ. ಗಗನಸಖಿ ಹತ್ಯೆಯಾದ ಅಪಾರ್ಟ್ಮೆಂಟ್ನಲ್ಲಿ ಸ್ವಚ್ಚತ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಆರೋಪಿ ಎಂದು ಕೆಲವು ಮಾಹಿತಿಯ ಅಧಾರದ ಮೇಲೆ ದೃಡಪಟ್ಟಿದೆ.
40 ವರ್ಷದ ವಿಕ್ರಮ್ ಅತ್ವಾಲ್ ಸಂತ್ರಸ್ತೆ ರೂಪಾಲ್ ಓಗ್ರೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದು ಸಂತ್ರಸ್ತೆ ರಕ್ಷಿಸಿಕೊಳ್ಳಲು ಪ್ರತಿ ಹೋರಾಟ ಮಾಡಿದ್ದಾಳೆ ಇನ್ನೇನು ನಾನು ಆಕೆಯನ್ನು ಸುಮ್ಮನೆ ಬಿಟ್ಟರೆ ನನ್ನ ಕೃತ್ಯ ಬಯಲಾಗುತ್ತದೆ ಎಂದು ಹೆದರಿ ಆರೋಪಿ ಗಗನಸಖಿ ರೂಪಾಗ್ರೆಯ ಕತ್ತು ಕೊಯ್ದು ಕೊಲೆಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದ ಹಂತಕ.
ಈ ಒಂದು ಪ್ರಕರಣ ನಡೆಯುವ ಮೊದಲೇ ಹತ್ಯೆಯಾದ ರೂಪಾಲ್ ಮತ್ತು ಆರೋಪಿ ನಡುವೆ ಸಾಕಷ್ಟು ಬಾರಿ ಜಗಳಗಳು ನಡೆದಿದ್ದವು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯು ಯುವತಿಯೊಂದಿಗೆ ಹಿಂದಿನಿಂದಲೂ ದ್ವೇಷ ಹೊಂದಿದ್ದ, ತನ್ನ ಮನಸ್ಸಿನಲ್ಲಿ ಮಡುಗಟ್ಟಿದ ದ್ವೇಷವನ್ನು ಆಕೆ ಒಬ್ಬಳೇ ಇದ್ದಾಗ ಆಕೆಯ ಮೇಲೆ ಅತ್ಯಾಚಾರ ನಡೆಸಿ ತೀರಿಸಿಕೊಳ್ಳಲು ಯತ್ನಿಸಿದ್ದಾನೆ,ಆಕೆ ಪ್ರತಿರೋಧಿಸಿದ್ದಕ್ಕೆ ತನ್ನ ಬಣ್ಣ ಬಯಲಾಗುವುದೆಂದು ಹೆದರಿ ಮುದ್ದಾದ ಯುವತಿಯನ್ನು ಕೊಂದು ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಸೆಪ್ಟೆಂಬರ್ ಮೂರರಂದು ಕೊಲೆಯಾದ ರೂಪಾಲ್ ದೇಹವು ರಕ್ತದ ಮಡುವಿನಲ್ಲಿ ಬಿದ್ದಿದ್ದು ಅದೇ ಸಮಯದಲ್ಲಿ ಆಕೆಯ ಮನೆಯವರು ಮೊಬೈಲ್ ಕಾಲ್ ಮಾಡಿದ್ದಾರೆ ಎಷ್ಟೇ ಬಾರಿ ಕಾಲ್ ಮಾಡಿದರು ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಮನೆಯವರು ಆಕೆಯ ಸ್ನೇಹಿತೆಗೆ ತಿಳಿಸಿದ್ದಾರೆ ಸ್ನೇಹಿತೆ ಅಂಧೇರಿಯ ಎನ್‌ಜಿ ಕಾಂಪ್ಲೆಕ್ಸ್‌ಗೆ ಬಂದು ನೋಡಿದಾಗ ಸ್ನೇಹಿತೆ ರೂಪಾಗ್ರೆ ಕೊಲೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದ ಗಗನಸಖಿ ರೂಪಾಲ್ ಮುಂಬೈನಲ್ಲಿ ಆಕೆಯ ಸಹೋದರಿಯ ಮನೆಯಲ್ಲಿದ್ದರು ಕೊಲೆ ನಡೆದಾಗ ಆಕೆಯ ಸಹೋದರಿ ಊರಿಗೆ ಹೋಗಿದ್ದರು ಎಂದು ತಿಳಿದುಬಂದಿದೆ.
ಗಗನಸಖಿಯ ಹತ್ಯೆಗೆ ಸಂಭಂದಿಸಿದಂತೆ ಪೋಲಿಸರು ತನಿಖೆಗೆ ಮುಂದಾಗಿ ಹತ್ಯೆಯಾದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಆರೋಪಿ ವಿಕ್ರಮ್ ಸಂತ್ರಸ್ತೆ ಮನೆಯ ಬಳಿ ಓಡಾಡುವ ದೃಶ್ಯಾವಳಿಯನ್ನು ಗಮನಿಸಿದ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಆತನ ಮುಖ ಮತ್ತು ಕೈಗಳ ಮೇಲೆ ಗಾಯಗಳಾಗಿರುವುದು ಪೊಲೀಸರು ಗಮನಿಸಿ ಪೋಲಿಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗುವ ಉದ್ದೇಶದಿಂದ ಮನೆಗೆ ನುಗ್ಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಆರೋಪಿ ಗಗನಸಖಿಯ ಹತ್ಯೆಗೆ ಬಳಸಿದ ಚಾಕು ಇನ್ನೂ ಪತ್ತೆಯಾಗಿಲ್ಲ ಮತ್ತು ಆರೋಪಿಯು ಹತ್ಯೆಮಾಡುವ ಸಮಯದಲ್ಲಿ ಧರಿಸಿದ್ದ ಬಟ್ಟೆಗಳು ಪತ್ತೆಯಾಗಿಲ್ಲ ಎಂದ ಪೊವೈ ಪೊಲೀಸರು ತಿಳಿಸಿದ್ದಾರೆ . ಹತ್ಯೆಯಾದ ಸ್ಥಳವನ್ನು ಪಂಚನಾಮೆ ಮಾಡಿದ ನಂತರ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಆರೋಪಿಯನ್ನ ಅಂಧೇರಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಸೆಪ್ಟೆಂಬರ್ 8 ರವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪೊಲೀಸರ ಪ್ರಕಾರ ಆರೋಪಿಯು ಅತ್ಯಾಚಾರ ಮಾಡುವ ಉದ್ದೇಶದಿಂದ ಸಂತ್ರಸ್ತೆಯ ಮನೆಗೆ ನುಗ್ಗಿದ್ದಾನೆ. ಸಂತ್ರಸ್ತೆ ತನ್ನನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಪ್ರತಿಭಟನೆ ನಡೆಸಿದ್ದಾಳೆ. ಈ ಸಂಧರ್ಭದಲ್ಲಿ ಆರೋಪಿ ನನ್ನ ಬಂಡವಾಳ ಬಯಲಾಗ ಬಹುವುದೆನ್ನುವ ಭಯದಿಂದ ಆರೋಪಿ ಚಾಕುವಿನಿಂದ ಗಗನಸಖಿ ರೂಪಾಲ್ ಅವರ ಕತ್ತು ಸೀಳಿದ್ದಾನೆ.
ಕೊಲೆ ಮಾಡಿದ ನಂತರ ವಿಕ್ರಮ್ ತನ್ನ ಬಟ್ಟೆಯನ್ನು ಬದಲಾಯಿಸಲು ತನ್ನ ಮನೆಗೆ ಹೋಗಿದ್ದಾನೆ. ಆ ಸಮಯದಲ್ಲಿ ಮನೆಯಲ್ಲಿದ್ದ ಆರೋಪಿಯ ಪತ್ನಿ ಗಾಯಗಳ ಬಗ್ಗೆ ಕೇಳಿದಾಗ ಒಡೆದ ಗಾಜುಗಳನ್ನು ಎತ್ತಿದ್ದರಿಂದ ಈ ಗಾಯಗಳಾಗಿವೆ ಎಂದು ತಿಳಿಸಿದ್ದಾನೆ. ಪ್ರಸ್ತುತ, ವಿಕ್ರಮ್ ವಿರುದ್ಧ ಸೆಕ್ಷನ್ 302 (ಕೊಲೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಮರಣೋತ್ತರ ಪರೀಕ್ಷೆಯ ವರದಿ ಬಂದನಂತರ ಅದರ ಆಧಾರದ ಮೇಲೆ ಇನ್ನಷ್ಟು ಸೆಕ್ಷನ್ ಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಏನೇ ಆಗಲಿ ಈ ಒಂದು ಹತ್ಯೆಯ ಪ್ರಕರಣ ಸಂಪೂರ್ಣ ಮಂಬಯಿ ಮಂದಿಯ ನಿದ್ದೆ ಗೆಡಿಸಿತ್ತು. ಈ ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಸುಧೀರ್ ವಿಧಾತ, ಶಿವಮೊಗ್ಗ