ಹೈದರ್ ಹತ್ಯೆ ಸ್ಫೋಟಕ ಮಾಹಿತಿ ಬಯಲು: ರಾಜಿ ಮಾಡಿಕೊಂಡು ಅಲಿ ಬಾಯ್ ಎಂದು ಒಂದೇ ತಟ್ಟೆಯಲ್ಲಿ ಉಂಡವರೆ ಉಸಿರು ನಿಲ್ಲಿಸಿದರು.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು :ಬೆಂಗಳೂರಿನಲ್ಲಿ ನೆಡೆದ ಕಾಂಗ್ರೆಸ್ ಮುಖಂಡ ಹೈದರ್ ಅಲಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗುತ್ತಿದ್ದಂತೆ ಒಂದಷ್ಟು ಮಾಹಿತಿಯ ಜೋತೆಗೆ ಪ್ರಕರಣದಲ್ಲಿ ರೋಚಕ ಟ್ವಿಸ್ಟ್ ಸಿಕ್ಕಿದೆ. ಹೈದರ್ ಅಲಿಯ ಕೆಲವು ದಿನಗಳ ಮೊದಲು ಎದುರಾಳಿ ಗ್ಯಾಂಗ್ ರಾಜಿಗೆ ಕರೆದು ವಿಶ್ವಾಸಗಳಿಸಿ ನಂತರ ಆತ ಒಬ್ಬಂಟಿಯಿದ್ದಾಗ ಸ್ಕೆಚ್ ಹಾಕಿ ಅಟ್ಯಾಕ್ ಮಾಡಿ ಹಂತಕರ ಗ್ಯಾಂಗ್ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.ಕಳೆದ ಒಂದು ವರ್ಷದ ಹಿಂದೆ ನಮ್ಮಿಬ್ಬರ ನಡುವೆ
ದುಷ್ಮನಿ ಬೇಡ ಬಾಯ್ ಎಂದು ಅಬ್ಬಾಸ್, ನಾಜ್ ಹಾಗೂ ಹೈದರ್ ಅಲಿಯನ್ನ ಕರೆಸಿ
ಧರ್ಮಗ್ರಂಥದ ಮೇಲೆ ಪ್ರಮಾಣ ಮಾಡಿ, ಸಂಧಾನ ಮಾಡಲಾಗಿತ್ತು. ಅ ದಿನ ಎಲ್ಲರೂ ಒಂದೇ ತಟ್ಟೆಯಲ್ಲಿ ಊಟ ಕೂಡ ಮಾಡಿದ್ದರಂತೆ.! ಹೈದರ್ ಅಲಿ ಖುದ್ದು ಅಬ್ಬಾಸ್ ಬಾಯಿಗೆ ತುತ್ತು ತಿನ್ನಿಸಿ ಬಿಗಿದಪ್ಪಿಕೊಂಡಿದ್ದರಂತೆ.! ಕಳೆದ ರಂಜಾನ್ ಹಬ್ಬದ ವೇಳೆ ಮೂವರಿಗೂ ರಾಜಿ ಸಂಧಾನ ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ.! ಆದರೆ ಈ ವರ್ಷದ ರಂಜಾನ್ ಬರುವುದಕ್ಕೆ ಕೇಲವು ದಿನ ಬಾಕಿ ಇರುವಾಗಲೇ ರಾಜಿಮಾಡಿಕೊಂಡಿದ್ದ ಗ್ಯಾಂಗ್ ಹೈದರ್ ಅಲಿಯನ್ನು ನಡು ರಸ್ತೆಯಲ್ಲೆ ಕೆಡವಿ ನೆತ್ತರು ಹರಿಸಿ ಆತನ ಉಸಿರನ್ನು ನಿಲ್ಲಿಸಿದ್ದಾರೆ.!
ಈ ಎಲ್ಲಾ ಸ್ಫೋಟಕ ವಿಷಯಗಳನ್ನು ಹಂತಕರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರಂತೆ.?
ಕಾಂಗ್ರೆಸ್ ಮುಖಂಡ ಹೈದರ್ ಅಲಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಶಿವಮೊಗ್ಗದಿಂದ (Shivamogga) ಗಡಿಪಾರು ಆಗಿದ್ದ ನಾಲ್ವರು ಆರೋಪಿಗಳನ್ನ (Accused) ಕರೆಸಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರೋ ಬಗ್ಗೆ ಒಂದಷ್ಟು ಪುರಾವೆಗಳು ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ಬಂಧಿತ 7 ಮಂದಿ ಆರೋಪಿಗಳಲ್ಲಿ ಮತೀನ್, ಸದ್ದಾಂ ಸೇರಿ ನಾಲ್ವರು ಆರೋಪಿಗಳು ಶಿವಮೊಗ್ಗದವರಾಗಿದ್ದು, ಆರೋಪಿಗಳ ವಿರುದ್ಧ ಶಿವಮೊಗ್ಗದ ಕೆಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆಯಂತೆ.? ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಕಾರಣ ಆರೋಪಿಗಳನ್ನು ಶಿವಮೊಗ್ಗದಿಂದ ಗಡಿಪಾರು ಮಾಡಲಾಗಿತ್ತು ಎಂದು ತಿಳಿದಿದ್ದು
ಆರೋಪಿಗಳು ಶಿವಮೊಗ್ಗದಿಂದ ಗಡಿಪಾರು ಮಾಡಿದ್ದ ಕಾರಣಕ್ಕೆ ಬೆಂಗಳೂರಿಗೆ ಹೋಗಿ ವಾಸವಿದ್ದರಂತೆ. ಈ ಹಿಂದೆ ಕೊಲೆಯಾದ ಹೈದರ್ ಅಲಿ ಆಪ್ತನಿಗೂ ಸಹ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು ಎನ್ನುವ ಆರೋಪವಿದೆ. ಆಗ ಆರೋಪಿಗಳಿಗೆ ಹೈದರ್ ಅಲಿ ಬೆದರಿಕೆ ಹಾಕಿದ್ದನಂತೆ ಈ ಕಾರಣದಿಂದಲೇ ಆರೋಪಿಗಳಿಗೆ ಹೈದರ್ ಮೇಲೆ ವೈಷ್ಯಮ್ಯ ಇತ್ತು. ಈ ವಿಚಾರ ತಿಳಿದಿದ್ದ ಪ್ರಕರಣದ ಪ್ರಮುಖ ಆರೋಪಿ ನಯಾಜ್ ಪಾಷಾ ಆರೋಪಿಗಳನ್ನ ತನ್ನ ರಿವೆಂಜ್ ತೀರಿಸಿಕೊಳ್ಳಲು ಬಳಸಿಕೊಂಡು ಹೈದರ್ ಅಲಿಯ ಹತ್ಯೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆಂದು ತಿಳಿದು ಬಂದಿದೆ.
ನಾಜ್ ಮತ್ತು ಹೈದರ್ ಅಲಿ ದಶಕಗಳಿಂದ ಒಬ್ಬರ ಮೇಲೆ ಒಬ್ಬರು ಮಚ್ಚು ಮಸೆಯುತ್ತಿದ್ದರು. ಮೃತ ಹೈದರ್ ನನ್ನನ್ನು ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾನೆಂಬ ವಿಚಾರ ತಿಳಿದ ಆರೋಪಿ ನಾಜ್, ಹೈದರ್ ಅಲಿಯ ಹತ್ಯರಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ.