Headlines

ಬೆಂಗಳೂರು: ಕುಖ್ಯಾತ ರೌಡಿ ಗುಬ್ಬಚ್ಚಿ ಸೀನನಿಗೆ ಗುಂಡು ತೂರಿಸಿದ ಪೊಲೀಸರು.!

ಬೆಂಗಳೂರು: ಕುಖ್ಯಾತ ರೌಡಿ ಗುಬ್ಬಚ್ಚಿ ಸೀನನಿಗೆ ಗುಂಡು ತೂರಿಸಿದ ಪೊಲೀಸರು.!

ashwasurya/Shivamogga

ಬೆಂಗಳೂರು,ಫೆ.4: ಕೊಲೆ,ಸುಲಿಗೆ,ಬೆದರಿಕೆ ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನಿಗೆ ಇಂದು ಮುಂಜಾನೆ ಸರ್ಜಾಪುರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಕಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಿದ್ದು. ಪ್ರಾಣಾಪಾಯದಿಂದ ಪಾರಾಗಿದ್ದಾನೆ, ಆರೋಪಿ ಗುಬ್ಬಚ್ಚಿ ಸೀನನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಈ ಸಂಧರ್ಭದಲ್ಲಿ ಪೊಲೀಸರು ಎಚ್ಚರಿಕೆ ನೀಡಿದರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಸೀನನ ಕಾಲಿಗೆ ಗುಂಡು ಹೋಡೆಯಲಾಗಿದೆ.ರೌಡಿಶೀಟರ್ ಸೀನನಿಂದ ಹಲ್ಲೆಗೋಳಗಾದ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಜ.28 ರಂದು ದೊಮ್ಮಸಂದ್ರದ ಸಂತೆ ಮೈದಾನದಲ್ಲಿ ನಡೆದಿದ್ದ ಮಾಜಿ ರೌಡಿ ಶೀಟರ್ ಮುಸರಿ ವೆಂಕಟೇಶನ ಕೊಲೆ ಪ್ರಕರಣದಲ್ಲಿ ಗುಬ್ಬಚ್ಚಿ ಸೀನ ಹಾಗೂ ಆತನ ಸಹಚರರು ಭಾಗಿಯಾಗಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಶೋಧ ನಡೆಸುತ್ತಿದ್ದಾಗ ತಲೆಮರೆಸಿಕೊಂಡಿದ್ದ ಗುಬ್ಬಚ್ಚಿ ಸೀನ ಫೆಬ್ರವರಿ 4 ರಂದು ಮುಂಜಾನೆ ಸರ್ಜಾಪುರದ ದೊಮ್ಮಸಂದ್ರದ ಬಳಿಯಿರುವ ಬೇಕರಿಯಿಂದ ತೆರಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಆತನ ಬಂಧನಕ್ಕೆ ದಾಳಿ ನಡೆಸಿದ್ದಾರೆ.
ಈ ವೇಳೆ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಇರ್ಫಾನ್ ಕಲಾರಿ ಮೇಲೆ ಹಲ್ಲೆಗೈಯಲು ಸೀನ ಯತ್ನಿಸಿದ್ದಾನೆ. ಇರ್ಫಾನ್ ಕಲಾರಿ ಕೈಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ನವೀನ್ ಎಚ್ಚರಿಕೆ ನೀಡಿ ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿ ಮನವಿ ಮಾಡಿಕೊಂಡಿದ್ದಾರೆ.
ಅದಕ್ಕೆ ಕ್ಯಾರೇ ಎನ್ನದ ಆತ, ಪೊಲೀಸ್ ಇರ್ಫಾನ್ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ ವೇಳೆ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಇನ್ಸ್ ಪೆಕ್ಟರ್ ನವೀನ್ ಗುಂಡು ಹಾರಿಸಿದ್ದಾರೆ.
ಕಾಲಿಗೆ ಗಾಯಗೊಂಡ ಗುಬ್ಬಚ್ಚಿ ಸೀನ ಸ್ಥಳದಲ್ಲೇ ಕುಸಿದುಬಿದ್ದಿದ್ದು,ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್ ಪಿ ಚಂದ್ರಶೇಖರ ಬಾಬಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!