ಚಿತ್ರದುರ್ಗ: ಗಂಡನ ಸರ್ಕಾರಿ ನೌಕರಿಯ ಆಸೆಗೆ ಬಿದ್ದು ಗಂಡನನ್ನೇ ಮುಗಿಸಿದ್ಲಾ ಹೆಂಡತಿ.!? ನಾಲ್ಕು ತಿಂಗಳ ಬಳಿಕ ಸಮಾಧಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ.!
ಅಶ್ವಸೂರ್ಯ/ಚಿತ್ರದುರ್ಗ: ಸರ್ಕಾರಿ ನೌಕರಿ ಆಸೆಗೆ ಪತ್ನಿಯೇ ಪತಿ ಸುರೇಶನನ್ನು ಹತ್ಯೆ ಮಾಡಿರುವುದಾಗಿ ಮೃತ ವ್ಯಕ್ತಿಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನಡೆದು ಸುಮಾರು ನಾಲ್ಕು ತಿಂಗಳ ನಂತರ ಫೆಬ್ರವರಿ 4 ರಂದು ಸಮಾಧಿಯಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿರುವ ಘಟನೆಯೊಂದು ಚಿತ್ರದುರ್ಗದಲ್ಲಿ ನೆಡೆದಿದೆ. ಕಳೆದ
ನಾಲ್ಕು ತಿಂಗಳ ಹಿಂದೆ ಅನಾರೋಗ್ಯದಿಂದ ಸುರೇಶ್ (46) ಎಂಬಾತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಚಿತ್ರದುರ್ಗದ ನೆಹರು ನಗರದ ನಿವಾಸಿಯಾಗಿದ್ದ ಸುರೇಶ್, ಮೊಳಕಾಲ್ಮೂರು ತಾಲ್ಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಸುರೇಶ್ ಅವರು ಕಳೆದ 14 ವರ್ಷಗಳ ಹಿಂದೆ ನಾಗರತ್ನ ಎಂಬುವವರ ಜೊತೆಗೆ ಮದುವೆಯಾಗಿದ್ದರು.
ಸುರೇಶ್‌ಗೆ ಪತ್ನಿ ಹಾಗೂ ಪತ್ನಿಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದರು ಎಂದು ಸುರೇಶ್ ತಾಯಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ. 2024ರ ಅಕ್ಟೋಬರ್ 8ರಂದು ಸುರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರವಾಗಲೇ ಸಾವನ್ನಪ್ಪಿದ್ದಾರೆ ಎಂದು ಸುರೇಶ್ ಪತ್ನಿ ನಾಗರತ್ನ ಹೇಳಿದ್ದರು. ಸುರೇಶ್‌ಗೆ ಜಾಂಡೀಸ್ ಕಾಯಿಲೆ ಇದ್ದು ಅವರಿಗೆ ಮಂಗಳೂರಿನ ಎನಪೋಯಾ ಆಸ್ಪತ್ರೆಗೆ ದಾಖಲಿಸಿದ್ದೇವು ಎಂದು ಸುರೇಶ್ ಪತ್ನಿ ಹೇಳಿದ್ದರು.
ಮಗನ ಸಾವಿನ ತನಿಖೆಗೆ ಆಗ್ರಹಿಸಿದ್ದ ತಾಯಿ
ಆದರೆ ಮಗನ ಸಾವಿನ ಬಗ್ಗೆ ಅನುಮಾನವಿದ್ದು ಮೃತದೇಹದ ಮೇಲೆ ಗಾಯದ ಗುರುತುಗಳನ್ನು ಕಂಡ ತಾಯಿ ಸರೋಜಮ್ಮ ಕೊಲೆಯಾಗಿರುವುದಾಗಿ ಆರೋಪಿಸಿದ್ದಾರೆ. ಸುರೇಶ್ ಪತ್ನಿ ಸರೋಜಮ್ಮ ಅವರು ಗಂಡನ ನೌಕರಿ ಆಸೆಗೆ ಕೊಲೆ ಮಾಡಿರುವುದಾಗಿ ಸರೋಜಮ್ಮ ದೂರು ನೀಡಿದ್ದಾರೆ. ಸೊಸೆಯೇ ಮಗನ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಸರೋಜಮ್ಮ ಅವರು ದೂರು ನೀಡಿದ್ದಾರೆ.
ಹಳೇ ಮೆಸೇಜ್ ಆಧರಿಸಿ ದೂರು
2023 ರಲ್ಲಿ ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣ ಎಂದು ಸುರೇಶ್ ತಾಯಿಗೆ ಮೆಸೇಜ್ ಮಾಡಿದ್ದನಂತೆ. ಹಳೆಯ ಮೆಸೇಜ್‌ಗಳನ್ನು ಆಧರಿಸಿ ಸುರೇಶ್ ತಾಯಿ ಸೊಸೆ ಮೇಲೆ ಕೊಲೆ ಆರೋಪ ಹೊರಿಸಿದ್ದಾರೆ. ಮಗನ ಕೊಲೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ನಿರ್ಲಕ್ಷಿಸಿದ್ದಾರೆ. ಇದರಿಂದ ನ್ಯಾಯಕ್ಕಾಗಿ ಆಗ್ರಹಿಸಿ ಕಳೆದ ವಾರ ಉಪ ಲೋಕಾಯುಕ್ತ ಕೆಎನ್ ಪಣೀಂದ್ರಗೆ ಸರೋಜಮ್ಮ ದೂರು ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಮೃತದೇಹ
ದೂರು ಆಧರಿಸಿ ಮರಣೋತ್ತರ ಪರೀಕ್ಷೆ ಮಾಡಿ ತನಿಖೆ ನಡೆಸುವಂತೆ ಪೊಲೀಸರಿಗೆ ಉಪ ಲೋಕಾಯುಕ್ತರು ಆದೇಶ ನೀಡಿದ್ದರು. ಉಪ ಲೋಕಾಯುಕ್ತರ ಆದೇಶದ ಬಳಿಕ ಇಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಲ್ಕು ತಿಂಗಳ ಬಳಿಕ ಸಮಾಧಿ ಬಗೆದು ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳಿಸಿಕೊಟ್ಟಿದ್ದಾರೆ.
ಮಗನ ಸಮಾಧಿ ಮೇಲೆ ಬಿದ್ದು ಅತ್ತ ತಾಯಿ
ಚಿತ್ರದುರ್ಗ ನಗರದ ಕನಕ ವೃತ್ತದ ಸ್ಮಶಾನದಲ್ಲಿ ತಹಶೀಲ್ದಾರ್ ನಾಗವೇಣಿ ಸಮ್ಮುಖದಲ್ಲಿ ಮೃತ ದೇಹ ಹೊರ ತೆಗೆದ ಪೊಲೀಸರು ಸ್ಮಶಾನದಲ್ಲಿ ಮೃತದೇಹ ಪರೀಕ್ಷೆ ನಡೆಸಿದ್ದಾರೆ.ಅ ಸಂಧರ್ಭದಲ್ಲಿ ಮಗನ ಸಮಾಧಿ ಮೇಲೆ ಬಿದ್ದು ತಾಯಿ ಸರೋಜಮ್ಮ ದುಃಖದಿಂದ ಗೋಳಾಡಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಸರೋಜ ಅವರು ಅಂಗಲಾಚಿದ್ದಾರೆ ಅಧಿಕಾರಿಗಳ ಎದುರು ಅಂಗಲಾಚಿದ್ದಾರೆ.ಎನಾಗಬಹುದು ಎನ್ನುವುದು ಮಾತ್ರ ಮೃತ ದೇಹದ ಮರಣೋತ್ತರ ಪರೀಕ್ಷೆ ಮುಗಿದು ವರದಿ ಹೊರಬರುವ ವರೆಗೂ ಕಾಯಲೆಬೇಕಿದೆ.!?