ಹೊಳೆಹೂನ್ನೂರಿನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸ ಬೇಕೆಂದು ಆಗ್ರಹಿಸಿ ಇಂದು ಗ್ರಾಮಾಂತರ ಎನ್.ಎಸ್.ಯು.ಐ. ವತಿಯಿಂದ ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ ನೀಡಲಾಯಿತು

ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಕ್ಷಣ

ಹೊಳೆಹೂನ್ನೂರಿನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸ ಬೇಕೆಂದು ಆಗ್ರಹಿಸಿ ಇಂದು ಗ್ರಾಮಾಂತರ ಎನ್.ಎಸ್.ಯು.ಐ. ವತಿಯಿಂದ ಜಿಲ್ಲಾ ರಕ್ಷಣಾ ಅಧಿಕಾರಿಗಳಿಗೆ ಮನವಿ ನೀಡಲಾಯಿತು

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ನಡುರಾತ್ರಿ ಜಿಲ್ಲೆಯ ಹೊಳೆಹೊನ್ನೂರು ಗ್ರಾಮದ ಸರ್ಕಲ್‍ನಲ್ಲಿದ್ದ ಗಾಂಧಿಪ್ರತಿಮೆಯನ್ನು ದ್ವಂಸಗೊಳಿಸಿ ದೇಶವಿರೋಧಿ ಕೃತ್ಯವನ್ನು ಕೆಲ ಕಿಡಿಗೇಡಿಗಳು ನಡೆಸಿದ್ದಾರೆ. ಈ ಕೃತ್ಯವನ್ನು ಶಿವಮೊಗ್ಗ ಗ್ರಾಮಾಂತರ ಎನ್.ಎಸ್.ಯು.ಐ. ತೀವ್ರವಾಗಿ ವಿರೋಧಿಸಿದೆ.
ಮಹಾತ್ಮಾಗಾಂಧಿ ವಿಶ್ವಶಾಂತಿಯನ್ನು ಬಯಸಿದವರು. ಹಾಗಾಗಿಯೇ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಶಾಂತಿಯ ಮಾರ್ಗದಿಂದಲೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟು ರಾಷ್ಟ್ರಪಿತ ಎನಿಸಿಕೊಂಡಿದ್ದಾರೆ. ಈ ನೆಲದ ಸ್ವಾತಂತ್ರ್ಯ ಚಳುವಳಿಯ ಹಿನ್ನಲೆ ತಿಳಿಯದ, ಸಂವಿಧಾನ ಮತ್ತು ಕಾನೂನಿಗ ಬಗ್ಗೆ ಅರಿವು ಗೌರವ ಇರದ ಕಿಡಿಗೇಡಿಗಳು ನಡುರಾತ್ರಿಯಲ್ಲಿ ರಾಷ್ಟ್ರಪಿತನ ಪ್ರತಿಮೆಯನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ.
ಕಿಡಿಗೇಡಿಗಳ ಈ ಕೃತ್ಯದಿಂದ ನಮಗು ಗ್ರಾಮದ ಜನತೆಗೂ ಆಘಾತವಾದಂತಾಗಿದ್ದು, ಸಂವಿಧಾನ ಮತ್ತು ಕಾನೂನಿಗ ಬಗ್ಗೆ ಗೌರವ ಇಲ್ಲದ ಕಿಡಿಗೇಡಿಗಳ ಕೃತ್ಯ ಕ್ಷಮಿಸಲಾಗದ್ದಾಗಿದೆ. ಸಮಾಜದಲ್ಲಿ ಶಾಂತಿಯನ್ನು ಕದಡುವ ವಿಧ್ವಂಸಕ ಶಕ್ತಿಗಳಿಂದ ಮಾತ್ರ ಇಂತಹ ಹೀನಕೃತ್ಯ ನಡೆಸಲು ಸಾಧ್ಯ.
ಜಿಲ್ಲಾ ರಕ್ಷಣಾಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ದೇಶದ್ರೋಹಿ ಕೃತ್ಯವನ್ನೆಸಗಿದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಬೇಕು. ರಾಷ್ಟ್ರಪಿತನ ಪ್ರತಿಮೆಗಾದ ಅಪಮಾನದಿಂದಾಗಿ ಹೊಳೆಹೊನ್ನೂರಿನಲ್ಲಿ ಬೂದಿಮುಚ್ಚಿದ ಕೆಂಡದಂತ ವಾತಾವರಣವಿದ್ದು, ಯಾವುದೇ ರೀತಿಯ ಅಶಾಂತಿ ಸೃಷ್ಟಿಯಾಗದಂತೆ ಕಟ್ಟೆಚ್ಚರ ವಹಿಸಬೇಕು.
ಕಿಡಿಗೇಡಿಗಳನ್ನು ಬಂಧಿಸಿ, ಮುಂದಿನ ದಿನಗಳಲ್ಲಿ ಯಾರೊಬ್ಬರೂ ರಾಷ್ಟ್ರಪಿತ ಸೇರಿದಂತೆ ರಾಷ್ಟ್ರದ ಯಾವುದೇ ಮಹಾನ್ ನಾಯಕರಿಗೆ ಅಪಮಾನವಾಗುವಂತೆ ನಡೆದುಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಈ ಮೂಲಕ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಜಯ, ಕಾರ್ಯಧ್ಯಕ್ಷ ರವಿಕಟಿಕೆರೆ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ J ಶೆಟ್ಟಿ, ಧನರಾಜ್, ಚಂದ್ರೋಜಿ ರಾವ್, ಪ್ರದೀಪ,ಅಶೋಕ, ಕೀರ್ತಿ, ಸಾಗರ್, ಸುಜನ್, ನಿಖಿಲಾ, ವಿಷ್ಣು, ಸೂರಜ್ ದೇವಿ ಕುಮಾರ್, ಕಾರ್ತಿಕ್, ಮಣಿ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡು ಮನವಿ ಸಲ್ಲಿಸಿದರು

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!