ಪ್ರೇಮಿಗಳ ಅಶ್ಲೀಲ ವಿಡಿಯೋ ಬಹಿರಂಗಪಡಿಸುವ ಬೆದರಿಕೆ: ಕಾರಿನಲ್ಲೇ ಬೆಂಕಿಗೆ ಆಹುತಿಯಾದ ಪ್ರೇಮಿಗಳು.!ವಿಡಿಯೋ ವೈರಲ್
ಅಶ್ವಸೂರ್ಯ/ಹೈದರಾಬಾದ್: ಆಘಾತಕಾರಿ ಘಟನೆಯೊಂದು ತೆಲಂಗಾಣದಲ್ಲಿ ನೆಡೆದಿದೆ. ಪ್ರೇಮಿಗಳಿಬ್ಬರು ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಘಟ್ ಕೇಸರ್ ನ ಘನಪುರ ಹೊರವರ್ತುಲ ಸರ್ವಿಸ್ ರಸ್ತೆಯಲ್ಲಿ ಹಾಡುಹಗಲೆ ನಡೆದಿದೆ.
ಜೋಡಿಯನ್ನು ಪರ್ವತಮ್ ಶ್ರೀರಾಮ್ ಮತ್ತು ಅಪ್ರಾಪ್ತ ಬಾಲಕಿ ಎಂದು ಗುರುತಿಸಲಾಗಿದ್ದು, ನಡುರಸ್ತೆಯಲ್ಲಿ ಕಾರ್ ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.! ಕಾರಿಗೆ ಬೆಂಕಿ ಹೊತ್ತಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಲ್ಗೊಂಡ ಜಿಲ್ಲೆಯ ಬೀಬಿನಗರದ ನಿವಾಸಿಯಾಗಿರುವ ಪರ್ವತಮ್ ಶ್ರೀರಾಮ್ ಅವರು ನರಪಲ್ಲಿಯಲ್ಲಿರುವ ಸೈಕಲ್ ಅಂಗಡಿಯಲ್ಲಿ ಕೆಲಸಗಾರರಾಗಿದ್ದರು. ಈ ವೇಳೆ ಬಾಲಕಿಯೊಬ್ಬಳ ಪರಿಚಯವಾದೆ,ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ಪರಸ್ಪರ ಪ್ರೀತಿಸುತ್ತಿದ್ದರಂತೆ.!
ಸೂಸೈಡ್ ನೋಟ್
ಆತ್ಮಹತ್ಯೆಗೆ ಶರಣಾಗುವ ಮುನ್ನ ಅವರಿಗಾದ ಕಿರುಕುಳವನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದು ಸಾಕಷ್ಟು ವಿಷಯಗಳನ್ನು ಬಹಿರಂಗಪಡಿಸಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಮಹೇಶ್(ಚಿಂಟು) ಎಂಬುವವರ ಕಿರುಕುಳದಿಂದ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವರ ಸಾವಿಗೆ ಶರಣಾಗುವ ಮುನ್ನ ಬರೆದ ಪತ್ರದ ಪ್ರಕಾರ, ಈ ಜೋಡಿಯ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡಿದ್ದ ಚಿಂಟು ಎನ್ನುವ ವ್ಯಕ್ತಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ಹಣ ನೀಡದಿದ್ದಲ್ಲಿ ಕುಟುಂಬದವರಿಗೆ ಅವರ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದನಂತೆ.
ಚಿಂಟುಗೆ ಶ್ರೀರಾಮ್ 1.35 ಲಕ್ಷ ರೂ. ಪಾವತಿಸಿದ್ದರಂತೆ. ಆದರೂ ಬೆನ್ನಿಗೆ ಬಿದ್ದ ಬೆತಾಳನಾಗಿದ್ದ ಆತ ನಿರಂತರವಾಗಿ ಕಿರುಕುಳ ನೀಡುತ್ತಿದ್ದನಂತೆ. ಕಾರಣ ಹಣ ಕೊಡಲು ಸಾಧ್ಯವಾಗದೇ ಬೇರೆ ಆಯ್ಕೆಗಳಿಲ್ಲದೆ,ಈ ಜೋಡಿಗಳು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಪೊಲೀಸರು ಚಿಂಟು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತನ ಪತ್ತೆಗೆ ಪೊಲೀಸರು ತಂಡವನ್ನು ರಚಿಸಿಕೊಂಡು ಕಾರ್ಯಚರಣೆಗೆ ಇಳಿದಿದ್ದಾರೆ.
ಬೆಂಕಿ ತಗುಲಿದ್ದ ಕಾರನ್ನು ಗಮನಿಸಿದ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿಬಂದು ಬಕೆಟ್ ನೀರನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಕೆಲವು ವಾಹನ ಚಾಲಕರು ಸಹ ತಮ್ಮ ವಾಹನವನ್ನು ನಿಲ್ಲಿಸಿ ಸಹಾಯ ಮಾಡಲು ಮುಂದಾಗಿದ್ದಾರೆ, ಮರದ ಕೊಂಬೆಗಳನ್ನು ಬಳಸಿ ಬೆಂಕಿಯನ್ನು ಹೊಡೆದರು, ಆದರೆ ಅಷ್ಟೋತ್ತಿಗಾಗಲೆ ಬೆಂಕಿ ಸಾಕಷ್ಟು ಹರಡಿತ್ತು. ಎರಡು ಜೀವಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಬೆಂಕಿಯ ಅಬ್ಬರದ ಜ್ವಾಲೆಯಲ್ಲಿ ಎರಡು ಜೀವಗಳು ಸುಟ್ಟು ಕರಕಲಾಗಿವೆ.!
ಬೆಂಕಿ ಹೊತ್ತಿಕೊಂಡ ಕಾರಿನ ಒಳಗಿದ್ದ ಯುವಕ ನಾರಿನಿಂದ ಹೊರ ಬಂದು ರಸ್ತೆಯಲ್ಲಿ ಕುಸಿದು ಬಿದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಇದೇ ವೇಳೆ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಬಾಲಕಿ ಕುಳಿತ ಸ್ಥಳದಲ್ಲಿಯೇ ಸಂಪೂರ್ಣ ಸುಟ್ಟು ಕರಕಲಾಗಿದ್ದಾಳೆ. ಬೆಂಕಿ ಎಷ್ಟು ತೀವ್ರವಾಗಿದೆಯೆಂದರೆ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಾರಿನ ಸಮೀಪಕ್ಕೆ ಯಾರೂ ಹೋಗಲು ಸಾಧ್ಯವಾಗಲಿಲ್ಲ.