ಜೈಪುರ: ಶ್ರೀಮಂತ ಯುವಕರನ್ನು ಟಾರ್ಗೆಟ್ ಮಾಡ್ತಿದ್ದ “ಕಿಲಾಡಿ ವಧು” ಇವಳು ದೊಚಿದ್ದುಮಾತ್ರ ಕೋಟಿ ಹಣ.!

ಜೈಪುರ: ಕಳೆದೊಂದು ದಶಕದಿಂದ ಹಲವು ಯುವಕರನ್ನು ವಿವಾಹವಾಗಿ ಕೋಟಿ ಕೋಟಿಗೂ ಹಣ ದೊಚಿದ್ದ ಖತರ್ನಾಕ್‌ ಯುವತಿಯನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ. ಮದುವೆಯಾದ ಬಳಿಕ ವರನ ಮೇಲೆ ಆತನ ಮನೆಯವರ ಮೇಲೆ ಕೇಸು ಹಾಕಿ ನಂತರ ಸೆಟಲ್‌ಮೆಂಟ್ ಹೆಸರಿನಲ್ಲಿ ಹಣ ದೊಚುತ್ತಿದ್ದಳು. ಹೀಗೆ ಸುಮಾರು 1.25 ಕೋಟಿ ರೂ ಹಣ ವಸೂಲಿ ಮಾಡಿದ್ದಳು.
ಉತ್ತರಾಖಂಡ್‌ ನ ಸೀಮಾ ಅಲಿಯಾಸ್‌ ನಿಕ್ಕಿ ಈ ಬಂಧಿತ ವಂಚಕಿ ವಧು ಈಕೆ ಕಿಲಾಡಿ ಹೆಣ್ಣು.! ಮೊದಲು 2013ರಲ್ಲಿ ಆಗ್ರಾದ ಉದ್ಯಮಿಯೊಬ್ಬರನ್ನು ಮದುವೆಯಾದ ಈಕೆ ಕೆಲ ಸಮಯದ ನಂತರ ಆ ವ್ಯಕ್ತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಕೊನೆಯ ರಾಜಿ ಪಂಚಾಯತಿಯಾಗಿ 75 ಲಕ್ಷ ರೂ ವಸೂಲಿ ಮಾಡಿದ್ದಳು.
2017 ರಲ್ಲಿ ಇದೇ ವಂಚಕಿ ಸೀಮಾ ಗುರುಗ್ರಾಮ್‌ನ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮದುವೆಯಾದಳು. ಅವನಿಂದ ಬೇರೆಯಾದ ನಂತರ ಆ ವ್ಯಕ್ತಿಯಿಂದ ಕೂಡ 10 ಲಕ್ಷ ರೂ ಸೆಟಲ್‌ಮೆಂಟ್ ರೂಪದಲ್ಲಿ ಹಣ ಪಡೆದುಕೊಂಡಿದ್ದಳು.
2023 ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ಸೀಮಾ ವಿವಾಹವಾಗಿದ್ದಳು. ಮದುವೆಯಾಗಿ ಕೆಲವೇ ಸಮಯದಲ್ಲಿ 36 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಆತನ ಮನೆಯಿಂದ ಪರಾರಿಯಾಗಿದ್ದಳು.!ಅ ನಂತರ ಅ ಕುಟುಂಬದವರು ವಂಚಕಿ ಸೀಮಾ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.

ಸೀಮಾ ತನ್ನ ಬಲಿಪಶುಗಳನ್ನು ಟಾರ್ಗೆಟ್ ಮಾಡುತ್ತಿದ್ದದ್ದು ಮ್ಯಾಟ್ರಿಮೋನಿಯಲ್ ಸೈಟ್‌ ಗಳಲ್ಲಿ ವರನೆಂಬ ಮಿಕಗಳನ್ನು ಹುಡುಕುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ ವಿಚ್ಛೇದನ ಪಡೆದ ಅಥವಾ ಹೆಂಡತಿಯನ್ನು ಕಳೆದುಕೊಂಡಿರುವ ಪುರುಷರಿಗಾಗಿ ಸೀಮಾ ಬಲೆ ಬೀಸುತ್ತಿದ್ದಳು. ಬೇರೆ ಬೇರೆ ರಾಜ್ಯಗಳಲ್ಲಿ ಮದುವೆಯಾಗಿ ವಿವಿಧ ಪ್ರಕರಣಗಳಲ್ಲಿ ಒಟ್ಟು 1.25 ಕೋಟಿ ರೂ ವಸೂಲಿ ಮಾಡಿದ್ದಾಳೆ.
ಮದುವೆಯ ನಂತರ, ಕುಟುಂಬದೊಂದಿಗೆ ವಿಶ್ವಾಸವನ್ನು ಬೆಳೆಸಲು ಮೂರು ನಾಲ್ಕು ತಿಂಗಳುಗಳನ್ನು ಅವರೊಂದಿಗೆ ಕಳೆಯುತ್ತಿದ್ದಳು. ಬಳಿಕ ಅವರ ಆಸ್ತಿಯೊಂದಿಗೆ ಪರಾರಿಯಾಗುತ್ತಿದ್ದಳು.
2023 ಜುಲೈ 29ರಂದು ಜೈಪುರ ಆಭರಣ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ತಮ್ಮ ಮೊದಲ ಪತ್ನಿಯ ನಿಧನದ ನಂತರ, ಅವರು ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್ ಮೂಲಕ ಸೀಮಾ ಪರಿಚಯ ಮಾಡಿಕೊಂಡಿದ್ದರು. ಡೆಹ್ರಾಡೂನ್‌ನಲ್ಲಿ ಆಕೆಯನ್ನು ಭೇಟಿ ಮಾಡಿ, ಕಳೆದ ವರ್ಷ ಫೆಬ್ರವರಿಯಲ್ಲಿ ಆಕೆಯನ್ನು ಮದುವೆಯಾಗಿದ್ದರು.
ಈಗ ವಂಚಕಿ ವಧು ಸೀಮಾ ಪೊಲೀಸರ ಅಥಿತಿಯಾಗಿದ್ದಾಳೆ.

Leave a Reply

Your email address will not be published. Required fields are marked *

Optimized by Optimole
error: Content is protected !!